More

  ಶಾಸಕ ಜಮೀರ್​ ಅಹಮದ್​ ಕ್ಷುಲ್ಲಕ ರಾಜಕಾರಣ ಬಿಡಲಿ; ತಾವು ಹೇಳಿದ ಮಾತಿನಂತೆ ನಡೆಯಲಿ ಎಂದ ಸಚಿವ ಶ್ರೀರಾಮುಲು

  ಚಿತ್ರದುರ್ಗ: ಬಳ್ಳಾರಿಯಲ್ಲಿ ಪ್ರತಿಭಟಿಸಲು ಬಂದಿರುವ ಶಾಸಕ ಜಮೀರ್ ಅಹಮದ್ ಕ್ಷುಲ್ಲಕ ರಾಜಕಾರಣ ಮಾಡ್ತಿದ್ದಾರೆ ಎಂದು ಸಚಿವ ಶ್ರೀರಾಮುಲು‌ ಕಿಡಿಕಾರಿದ್ದಾರೆ.

  ಶಾಸಕ ಜಮೀರ್ ಅಹಮದ್ ಅವರು ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ, ಬಿ.ಎಸ್. ಯಡಿಯೂರಪ್ಪ ಸಿಎಂ ಆಗೋದಿಲ್ಲ. ಹಾಗೇನಾದರೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ಅವರ ಮನೆಯಲ್ಲಿ ವಾಚ್ ಮನ್ ಆಗಿ ಕೆಲಸ ಮಾಡ್ತೀನಿ ಎಂದು ಹೇಳಿದ್ದರು. ಶಾಸಕ ಜಮೀರ್ ಅವರು ಮಾತಿನಂತೆ ನಡೆದುಕೊಂಡರಾ ಎಂದು ಶ್ರೀರಾಮುಲು ಪ್ರಶ್ನಿಸಿದರು.

  ಶಾಸಕ ಜಮೀರ್ ಅವರು ತಾವು ಹೇಳಿದಂತೆ ಮೊದಲು ಯಡಿಯೂರಪ್ಪ ಮನೆ ವಾಚ್​ಮನ್​ ಆಗಿ ಕೆಲಸ ಮಾಡಲಿ ಎಂದು ಪರೋಕ್ಷವಾಗಿ ಕಾಲೆಳೆದ ಶ್ರೀರಾಮುಲು, ಅದೇ ಜಮೀರ್ ವಿಧಾನಸೌಧದ ಕಾಂಪೌಂಡ್ ಒಡೆದು ಹಾಕುತ್ತೇನೆ ಅಂತ ಕೂಡ ಹೇಳಿಕೆ ಕೊಟ್ಟಿದ್ದರು ಎಂದರು.

  ಜಮೀರ್​ ಅವರು ಕೇವಲ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಜಮೀರ್ ಅಹಮದ್ ಮತ್ತು ಕಾಂಗ್ರೆಸ್ ನಾಯಕರಿಗೆ ಈಗ ಬೇರೆ ಯಾವುದೇ ವಿಚಾರ ಸಿಕ್ಕಿಲ್ಲ. ಹಾಗಾಗಿ ವಿನಾಕಾರಣ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

  ಬಳ್ಳಾರಿ ಶಾಂತಿಪ್ರಿಯರ ನಾಡು, ಅಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ, ಧರ್ಮದ ಆಧಾರದಲ್ಲಿ ನಾವು ಎಲ್ಲರಲ್ಲೂ ಶಾಂತಿ ಸೃಷ್ಟಿಸಬೇಕು. ಜಾತಿ ಧರ್ಮದ ಬೇಧ ಭಾವ ಮಾಡುವ ಮೂಲಕ ಅನಗತ್ಯ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಸಚಿವ ಶ್ರೀರಾಮುಲು ಆಭಿಪ್ರಾಯಪಟ್ಟರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts