More

    ಕ್ಷಯರೋಗ ಪ್ರಕರಣಗಳಲ್ಲಿ ಬಳ್ಳಾರಿಗೆ ಮೂರನೇ ಸ್ಥಾನ, ರಾಯಚೂರು-ಕೊಪ್ಪಳಕ್ಕೆ ನಂತರದ ಸ್ಥಾನ

    ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಇಂದ್ರಾಣಿ ಹೇಳಿಕೆ

    ಬಳ್ಳಾರಿ: ರಾಜ್ಯದ ಕ್ಷಯರೋಗ ಪ್ರಕರಣಗಳಲ್ಲಿ ಬಳ್ಳಾರಿ ಮೂರನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಇಂದ್ರಾಣಿ ಹೇಳಿದರು.

    ನಗರದ ಜಿಲ್ಲಾಸ್ಪತ್ರೆಯ ಡಿಎಚ್‌ಒ ಸಭಾಂಗಣದಲ್ಲಿ ವಿಶ್ವ ಕ್ಷಯರೋಗ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕ್ಷಯರೋಗ ನಿರ್ಮೂಲನಾ ಕೇಂದ್ರ ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಕ್ಷಯರೋಗ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಉತ್ತರ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ ಜಿಲ್ಲೆಗಳು ಕ್ರಮವಾಗಿ ನಂತರ ಸ್ಥಾನದಲ್ಲಿವೆ. ಜಿಲ್ಲೆಯಲ್ಲಿ ಕ್ಷಯರೋಗದ ಮರಣ ಪ್ರಮಾಣ 2019ರಲ್ಲಿ ಶೇ.9 ಇದ್ದು, 2020 ರಲ್ಲಿ ಶೇ.12 ಏರಿಕೆ ಕಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬಳ್ಳಾರಿ, ಹೊಸಪೇಟೆ, ಸಂಡೂರು ಪ್ರದೇಶಗಳಲ್ಲಿ ಕ್ಷಯರೋಗ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿವೆ. ಇದಕ್ಕೆ ಕಾರಣ ಸುತ್ತಲಿನ ವಾತಾವರಣ ಕಲುಷಿತಗೊಂಡಿರುವುದಾಗಿದೆ. ಸಮೀಕ್ಷೆ ಪ್ರಕಾರ ನಗರದ ಮಿಲ್ಲರಪೇಟೆ, ಕೌಲ್‌ಬಜಾರ್ ಬಡಾವಣೆಗಳು ಹೆಚ್ಚು ಕಲುಷಿತ ಪ್ರದೇಶಗಳಾಗಿವೆ ಎಂದು ತಿಳಿಸಿದರು.

    ಸರ್ಕಾರ 2025ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿ ಹೊಂದಿದೆ. ಇದಕ್ಕೆ ನಾವೆಲ್ಲರೂ ಕೈಜೋಡಿಸಬೇಕು. 2007 ರಿಂದ ಸರ್ಕಾರ ಒಬ್ಬ ಕ್ಷಯರೋಗಿಗೆ 40 ಸಾವಿರ ರೂ. ಖರ್ಚು ಮಾಡುತ್ತಿದೆ. ಈಗ ಮುಂದುವರಿದು 1.4 ಲಕ್ಷ ರೂ.ವೆಚ್ಚಿಸುತ್ತಿದೆ. ಯಾರೇ ಆಗಲಿ ರೋಗದ ಲಕ್ಷಣ ಕಾಣಿಸಿದ ಕೂಡಲೇ ತಪಾಸಣೆ ಮಾಡಿಸಿಕೊಳ್ಳಿ. ಇದರಿಂದ ಸಮುದಾಯಕ್ಕೆ ಹರಡುವುದು ತಪ್ಪುತ್ತದೆ. ಈ ಕುರಿತು ಪ್ರತಿ ಹಳ್ಳಿಯಲ್ಲಿ ಗ್ರಾಪಂಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

    ಕಾರ್ಯಾಗಾರದಲ್ಲಿ ಪತ್ರಕರ್ತರಾದ ವೆಂಕೋಬಿ, ಜಯಪ್ಪ್ಪ, ಚೌಧರಿ, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts