More

    ಬಳ್ಳಾರಿಯಲ್ಲಿ ವಿಶ್ವ ರಂಗಭೂಮಿ ದಿನ ಆಚರಣೆ

    ಬಳ್ಳಾರಿ: ಕಲಾವಿದರನ್ನು ಗೌರವದಿಂದ ಕಂಡಾಗ ಮಾತ್ರ ಅವರ ಬದುಕು ಸಾರ್ಥಕವಾಗುತ್ತದೆ ಎಂದು ಸಾಂಸ್ಕೃತಿಕ ಸಂಘಟಕ ಸಿ.ಮಂಜುನಾಥ ಅಭಿಪ್ರಾಯ ಪಟ್ಟರು.
    ವಿದ್ಯಾನಗರದಲ್ಲಿರುವ ರಂಗಕಲಾವಿದ ಎಎಂಪಿ ವೀರೇಶಸ್ವಾಮಿ ಅವರ ಮನೆಯಂಗಳದಲ್ಲಿ ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಸಂಸ್ಕೃತಿ ಪ್ರಕಾಶನ ಸೋಮವಾರ ಆಯೋಜಿಸಿದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅನೇಕರು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಈ ನೆಲದ ಗೌರವನ್ನು ಹೆಚ್ಚಿಸಿದ್ದಾರೆ. ಈ ಪೈಕಿ ಏಳು ದಶಕಗಳಿಂದ ರಂಗಭೂಮಿ, ತೊಗಲುಗೊಂಬೆ ಪ್ರದರ್ಶನಕ್ಕಾಗಿ ದುಡಿಯುತ್ತಿರುವ ಅಂತಾರಾಷ್ಟ್ರೀಯ ಹಿರಿಯ ಕಲಾವಿದ, ನಾಡೋಜ ಬೆಳಗಲ್ಲು ವೀರಣ್ಣಗೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು. ಭಾರತದ ಸಾಂಸ್ಕೃತಿಕ, ರಂಗ ಪರಂಪರೆಯನ್ನು ತಮ್ಮ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳದ ಮೂಲಕ ವಿದೇಶಗಳಲ್ಲಿ ಮೊಳಗಿಸಿದ ವೀರಣ್ಣನವರದು ಎಂದರು.

    ನಾಡೋಜ ಬೆಳಗಲ್ಲು ವೀರಣ್ಣ ಮಾತನಾಡಿ, 18 ವರ್ಷಗಳಿಂದ ಪ್ರತಿ ವರ್ಷವೂ ವಿಶ್ವ ರಂಗಭೂಮಿ ದಿನ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸುತ್ತ ಬರುತ್ತಿರುವ ಭರಣಿ ವೇದಿಕೆ, ಸಂಸ್ಕೃತಿ ಪ್ರಕಾಶನದ ಕಾರ್ಯ ಶ್ಲಾಘನೀಯ. ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿದ ಅವಳಿ ಜಿಲ್ಲೆಯ ಹಿರಿಯ ಹಾಗೂ ಯುವ ರಂಗ ಕಲಾವಿದರು, ರಂಗ ಕರ್ಮಿಗಳನ್ನು ಗುರುತಿಸಿ ಅವರವರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರು, ಬಂಧು ಮಿತ್ರರ ಸಮ್ಮುಖದಲ್ಲಿ ಸತ್ಕರಿಸುವುದು ಮಾದರಿ ಕಾರ್ಯ ಎಂದರು.

    ಹಿರಿಯ ಸಾಹಿತಿ, ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ಡಾ. ವೆಂಕಟಯ್ಯ ಅಪ್ಪಗೆರೆ ಮಾತನಾಡಿದರು. ಹಿರಿಯ ಸಾಹಿತಿ ಗಂಗಾಧರ ಪತ್ತಾರ, ರಂಗ ಕಲಾವಿದ ಎಎಂಪಿ ವೀರೇಶಸ್ವಾಮಿ ಅವರನ್ನು ಗಣ್ಯರು ಸನ್ಮಾನಿಸಿದರು. ವಿಎಸ್‌ಕೆ ವಿವಿ ನಾಟಕ ವಿಭಾಗದ ಉಪನ್ಯಾಸಕ ಅಣ್ಣಾಜಿ ಕೃಷ್ಣಾ ರೆಡ್ಡಿ, ಮಯೂರ ಕಲಾ ಸಂಘದ ಅಧ್ಯಕ್ಷ ಗಂಗಣ್ಣ, ರಂಗಕಲಾವಿದ ಕೊಳಗಲ್ಲು ಜಗದೀಶ ಸ್ವಾಮಿ, ಡಾ.ಭರಣಿ ವೇದಿಕೆಯ ನಿರ್ದೇಶಕಿ ಸರಸ್ವತಿ ಎನ್.ಅಪ್ಪಗೆರೆ, ಡಾ.ಬಾಬು, ಛಾಯಾಗ್ರಾಹಕ ಶ್ರೀರಾಮ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts