More

    ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಿ

    ಬಳ್ಳಾರಿ: ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿ.ಬಿ.ಮಲ್ಲಪ್ಪ ಆಗ್ರಹಿಸಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೃತ ಕುಟುಂಬಗಳಿಗೆ ಐದು ಲಕ್ಷ ರೂ. ಪರಿಹಾರ ಮಂಜೂರು ಮಾಡಿದೆ, ಇನ್ನು ಹೆಚ್ಚಿನ ಪರಿಹಾರ ನೀಡಬೇಕು. ಎರಡು ದಿನಗಳವರೆಗೆ ವಿದ್ಯುತ್ ಸ್ಥಗಿತವಾದರೂ ಎಚ್ಚೆತ್ತುಕೊಳ್ಳದೆ ಇರುವ ವಿಮ್ಸ್ ನಿರ್ದೇಶಕರು ಮತ್ತು ಅಧೀಕ್ಷಕರೇ ಸಾವುಗಳಿಗೆ ನೇರ ಹೊಣೆ. ಇದೆನ್ನಲ್ಲ ಸಮರ್ಥಿಸಿಕೊಳ್ಳುವ ಜಿಲ್ಲಾಧಿಕಾರಿ, ಘಟನೆ ನಡೆದು ಎರಡು ದಿನ ಕಳೆದರೂ ಏನೂ ನಡೆದಿಲ್ಲ ಎಂಬಂತೆ ಇರುವ ಉಸ್ತುವಾರಿ ಸಚಿವ ಹಾಗೂ ಗ್ರಾಮೀಣ ಭಾಗದ ಶಾಸಕರು ರಾಜಿನಾಮೆ ನೀಡಬೇಕು. ಅಂಬುಲೆನ್ಸ್ ಚಾಲಕರಿಂದ ಹಿಡಿದು, ಆಯಾಗಳು, ನರ್ಸ್, ಶಸ್ತ್ರ ಚಿಕಿತ್ಸೆಯ ಕೊಠಡಿಯಲ್ಲಿರುವ ಸಹಾಯಕರು ವಸೂಲಿಗೆ ಇಳಿಯುತ್ತಿದ್ದಾರೆ. ಇಷ್ಟೆಲ್ಲ ನಡೆದರೂ ಹಿರಿಯ ವೈದ್ಯರು ಅಸಹಾಯಕರಾಗಿದ್ದಾರೆ. ಇದಕ್ಕೆಲ್ಲ ಆಸ್ಪತ್ರೆ ಮುಖ್ಯಸ್ಥರ ತಾತ್ಸಾರ ಮನೋಭಾವ ಕಾರಣ ಎಂದು ಆರೋಪಿಸಿದರು. ಮುಖಂಡರಾದ ಸುಹೇನ್, ನಾಗಪ್ಪ ಯಾದವ್, ವಲಿಬಾಷ್, ಕಿಶೋರಕುಮಾರ, ಕಿರಣ್‌ಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts