More

    ವಿಭಿನ್ನ ಕಲೆಗಳ ತವರೂರು ಉತ್ತರ ಕರ್ನಾಟಕ ಎಂದು ಬಣ್ಣಸಿದ ನಾಟಕಕಾರ ಪ್ರೊ. ರಾಜಪ್ಪ ದಳವಾಯಿ ಹೇಳಿಕೆ

    ಬಳ್ಳಾರಿ: ಶಿಕ್ಷಣದ ಜತೆಯಲ್ಲೇ ರಂಗಭೂಮಿ ಕಲೆಗಳನ್ನು ಕಲಿಯುವುದರಿಂದ ನಮ್ಮ ಜೀವನ ವಿಕಾಸಗೊಳ್ಳುವುದು ಎಂದು ನಾಟಕಕಾರ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ರಾಜಪ್ಪ ದಳವಾಯಿ ಹೇಳಿದರು.

    ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ವೈಭವ-ಯುವಜನೋತ್ಸವ-2022 ಸಮಾರೋಪದಲ್ಲಿ ಭಾನುವಾರ ಮಾತನಾಡಿದರು. ಪ್ರತಿಯೊಬ್ಬರಲ್ಲಿ ಪ್ರತಿಭೆ ಇರುತ್ತಿದ್ದು, ಅದು ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ. ಯಾವುದೇ ಕಲೆಯನ್ನು ಕರಗತವಾಗುವಂತೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಮೂಲಕ ಜೀವನವನ್ನು ಬಲಪಡಿಸಿಕೊಳ್ಳಬಹುದು. ಉತ್ತರ ಕರ್ನಾಟಕವು ಕಲೆಯ ತವರೂರಾಗಿದೆ. ಇಂತಹ ಮಣ್ಣಿನಲ್ಲಿ ಜನಿಸಿದ ನೀವು ಭಾಗ್ಯಶಾಲಿಗಳು ಎಂದರು.

    ಪ್ರಸ್ತುತ ದಿನಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ನಾಟಕ ವಿಭಾಗ ಕಾಣುವುದು ಅತಿ ವಿರಳ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗ ಹೊಂದಿರುವುದಕ್ಕೆ ಹರ್ಷವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಕಲೆಯನ್ನು ಪ್ರದರ್ಶಿಸಿಸಲು ವೇದಿಕೆಯನ್ನು ಕಲ್ಪಿಸಿದಕ್ಕೆ ವಿಶ್ವವಿದ್ಯಾಲಯವನ್ನು ಅಭಿನಂದಿಸಿದರು.

    ಕುಲಪತಿ ಪ್ರೊ. ಸಿದ್ದು ಪಿ.ಆಲಗೂರ ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕಮಗಳಲ್ಲಿ ಭಾಗವಿಹಿಸುವಿಕೆ ಮುಖ್ಯವಾಗಿರುತ್ತದೆ. ಸ್ಪರ್ಧೆ ಮಾಡಲು ಹಿಂಜರಿಕೆ ಬೇಡ ಎಂದು ಹೇಳಿದರು.

    ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ್, ಯುವಜನೋತ್ಸವ ಕಾರ್ಯಕ್ರಮದ ಸಂಯೋಜಕ ಪ್ರೊ. ಶಾಂತನಾಯ್ಕ, ಪ್ರಾಧ್ಯಾಪಕಿ ಡಾ. ಸುಷ್ಮಾ ಜೋಗನ್, ಸಿಂಡಿಕೇಟ್ ಸದಸ್ಯರು ಹಾಗೂ ವಿವಿಧ ನಿಕಾಯದ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

    ಪ್ರಮಾಣಪತ್ರ, ಪದಕ ವಿತರಣೆ: ಸಾಂಸ್ಕೃತಿಕ ವೈಭವ-ಯುವಜನೋತ್ಸವ-2022 ಜರುಗಿದ ವಿವಿಧ ಸ್ಪರ್ಧೆಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (ಮುಖ್ಯ ಆವರಣ) ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಪ್ರಥಮ ಬಹುಮಾನಗಳಿಸಿದರು. ಶ್ರೀ ಕೊಟ್ಟೂರೇಶ್ವರ ಬಿ.ಎಡ್ ಕಾಲೇಜು ಬಳ್ಳಾರಿ ಎರಡನೇ ಸ್ಥಾನ ಗಳಿಸಿತು, ಶ್ರೀಗವಿಸಿದ್ದೇಶ್ವರ ಕಾಲೇಜು ಕೊಪ್ಪಳ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು.

    ವಿಭಿನ್ನ ಕಲೆಗಳ ತವರೂರು ಉತ್ತರ ಕರ್ನಾಟಕ ಎಂದು ಬಣ್ಣಸಿದ ನಾಟಕಕಾರ ಪ್ರೊ. ರಾಜಪ್ಪ ದಳವಾಯಿ ಹೇಳಿಕೆ
    ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಾಂಸ್ಕೃತಿಕ ವೈಭವ-ಯುವಜನೋತ್ಸವ 2022 ಸಮಾರೋಪದಲ್ಲಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಪ್ರಶಸ್ತಿ, ಪ್ರಮಾಣ ಪತ್ರ ಮತ್ತು ಪದಕಗಳನ್ನು ಹಿಡಿದು ಸಂಭ್ರಮಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts