More

  ಸ್ವಿಮ್ಮಿಂಗ್‌ನಲ್ಲಿ ಸಾಯಿ ನಿಖಿಲ್‌ಗೆ ಚಿನ್ನದ ಪದಕ

  ಬಳ್ಳಾರಿ: 100 ಮೀ ಪ್ರೀ ಸ್ಟೈಲ್ ಸ್ಪರ್ಧೆಯಲ್ಲಿ ನಗರದ ಬುದ್ದಿ ಮಾಂಧ್ಯತೆ ವಿದ್ಯಾರ್ಥಿ ಸಾಯಿ ನಿಖಿಲ್ ಚಿನ್ನದ ಪದಕ ಪಡೆದ ನ್ಯಾಷನಲ್ ರೆಕಾರ್ಡ್ ಮಾಡಿದ್ದಾರೆ ಎಂದು ಸ್ವಿಮ್ಮಿಂಗ್ ಕೋಚ್ ರಜಿನಿ ಲಕ್ಕ ಮಾಹಿತಿ ನೀಡಿದರು.

  ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾಯಿ ನಿಖಿಲ್ ಬುದ್ಧಿಮಾಂದ್ಯತೆ ಹೊಂದಿರುವ ವಿದ್ಯಾರ್ಥಿ. ಇಂಡಿಯಾನ್ ನ್ಯಾಷನಲ್ ರೆಕಾಡ್‌ನಲ್ಲಿ 100, ಮೀ ಫ್ರೀ ಸ್ಟೈಲ್ ವಿಭಾಗದಲ್ಲಿ ಸ್ಪರ್ಧೆ ಮಾಡಿ ಚಿನ್ನದ ಪದಕ ಪಡೆದಿದ್ದಾರೆ. ಅಸ್ಸಾಂನ ಗೊಹಟಿನಲ್ಲಿ ನ.11ರಿಂದ 13ರವರೆಗೆ ನಡೆದ ನ್ಯಾಷನಲ್ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್‌ನಲ್ಲಿ 200 ಮೀ ಫ್ರೀ ಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

  ಇದೇ ನವೆಂಬರ್ 22 ರಿಂದ 30 ರವರೆಗೆ ಈಜಿಪ್ಟಿನ ಕ್ಯಾರಿಯೋ ಒಪನ್ ಇಂಟರ್ ನ್ಯಾಷನಲ್ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿದ್ದು, ನಮ್ಮ ವಿದ್ಯಾರ್ಥಿ ಗೋಪಿ ಚಂದ್ ಕೂಡ ಭಾಗವಹಿಸುತ್ತಾರೆ. ಗೋಪಿಚಂದ್ ನ್ಯಾಷನಲ್ 400, ಮೀ ಫ್ರೀ ಸ್ಟೈಲ್ ಚಿನ್ನದ ಪದಕ, 200 ಮೀ. ಐ.ಎಂ ಚಿನ್ನದ ಪದಕ ಹಾಗೂ 100 ಮೀ ಬ್ಯಾಕ್ ಬೆಳ್ಳಿ ಪದಕ ಪಡೆದಿದ್ದಾರೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts