More

    ಎಸ್ಸೆಸ್ಸೆಲ್ಸಿ ಪರೀಕ್ಷೆ: ಬಳ್ಳಾರಿ ಜಿಲ್ಲೆ 31ನೇ ಸ್ಥಾನಕ್ಕೆ ಕುಸಿತ

    ಹೀರಾನಾಯ್ಕ ಟಿ.
    ಬಳ್ಳಾರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಬಳ್ಳಾರಿ ಜಿಲ್ಲೆ 31ನೇ ಸ್ಥಾನ ಪಡೆದಿದೆ. ಕಳೆದ ಸಾಲಿನಲ್ಲಿ 29ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಎರಡು ಸ್ಥಾನ ಕುಸಿತ ಕಂಡಿದೆ.

    ಇದನ್ನೂ ಓದಿ: ದಾವಣಗೆರೆ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ- 14ನೇ ಸ್ಥಾನಕ್ಕಿಳಿದ ವಿದ್ಯಾನಗರಿ

    2001ರಲ್ಲಿ ರಾಜ್ಯದ ಶೈಕ್ಷಣಿಕ ಜಿಲ್ಲೆಗಳ ಪೈಕಿ ಬಳ್ಳಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 8ನೇ ಸ್ಥಾನ ಪಡೆದಿತ್ತು. ನಂತರದಲ್ಲಿ ಟಾಪ್-10 ಸ್ಥಾನದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದೆ. ಕರೊನಾ ನಡುವೆಯೂ 2020ರಲ್ಲಿ ನಡೆದ ಪರೀಕ್ಷೆಯಲ್ಲಿ ಶೇ.81.81 ಫಲಿತಾಂಶ ಪಡೆದ ಈ ಜಿಲ್ಲೆ , 12ನೇ ಸ್ಥಾನಕ್ಕೇರಿತ್ತು. ನಂತರದಲ್ಲಿ ಕುಸಿತ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ಶೇ.81.54 ರಷ್ಟು ಫಲಿತಾಂಶ ಬಂದಿದ್ದು, ಉತ್ತೀರ್ಣರಾದವರಲ್ಲಿ ಈ ಬಾರಿಯೂ ಬಾಲಕಿಯರೆ ಮೇಲುಗೈ ಸಾಧಿಸಿದ್ದಾರೆ.

    ಎಸ್ಸೆಸ್ಸೆಲ್ಸಿ ಪರೀಕ್ಷೆ: ಬಳ್ಳಾರಿ ಜಿಲ್ಲೆ 31ನೇ ಸ್ಥಾನಕ್ಕೆ ಕುಸಿತ

    16, 282 ಮಕ್ಕಳು ಉತ್ತೀರ್ಣ

    ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 20,142 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಅದರಲ್ಲಿ 16,282 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ 9,325 ಮಕ್ಕಳ ಪೈಕಿ 7,523 ವಿದ್ಯಾರ್ಥಿಗಳು, ಗ್ರಾಮೀಣ ಭಾಗದ 10,817 ವಿದ್ಯಾರ್ಥಿಗಳ ಪೈಕಿ 8,759, ಮಕ್ಕಳು ಪಾಸ್ ಆಗಿದ್ದಾರೆ. ಒಟ್ಟು 9,947 ಬಾಲಕರಲ್ಲಿ 7,868 ಬಾಲಕರು ಉತ್ತೀರ್ಣರಾಗಿದ್ದಾರೆ. 10,195 ಬಾಲಕಿಯರಲ್ಲಿ 8,414 ಬಾಲಕಿಯರು ಪಾಸ್ ಆಗಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

    ಒಂದೇ ಶಾಲೆಯ ಇಬ್ಬರು ಡಿಸ್ಟ್ರಿಕ್‌ಗೆ ಪ್ರಥಮ

    ಬಳ್ಳಾರಿ ನಗರದ ಸೇಂಟ್ ಫಿಲೋಮಿನಾ ಶಾಲೆಯ ಶ್ವೇತಾ ಜಿ. ಮತ್ತು ಸಯಿದಾ ಅಮೀರಾ ಉಜ್ಮಾ 625ಕ್ಕೆ 620 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿದ್ದಾರೆ. ಇನ್ನು ಬಳ್ಳಾರಿ ಪೂರ್ವ ವಲಯದ ವಿಸ್ಡಂಲ್ಯಾಂಡ್ ಸ್ಕೂಲ್‌ನ ವಿದ್ಯಾರ್ಥಿನಿ ಎಂ.ಎಸ್.ಹರಿಣಿ ಮತ್ತು ಸಾಥ್ವಿಕಾ ಎಚ್., ಸಂಡೂರು ತಾಲೂಕಿನ ಬೊಮ್ಮನಘಟ್ಟದ ಶ್ರೀ ವಿದ್ಯಾಮಂದಿರ ಶಾಲೆಯ ಪೂಜಾ ಕೆ. ಈ ಮೂವರು 617 ಅಂಕ ಪಡೆದು 2ನೇ ಸ್ಥಾನ ಪಡೆದಿದ್ದಾರೆ. ವಿಸ್ಡಂಲ್ಯಾಂಡ್ ಸ್ಕೂಲ್‌ನ ಮೀನಾ 616 ಅಂಕದೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಟಾಪರ್ಸ್‌ಗಳೆಲ್ಲರೂ ವಿದ್ಯಾರ್ಥಿನಿಯರು ಎನ್ನುವುದು ವಿಶೇಷ.

    ಎಸ್ಸೆಸ್ಸೆಲ್ಸಿ ಪರೀಕ್ಷೆ: ಬಳ್ಳಾರಿ ಜಿಲ್ಲೆ 31ನೇ ಸ್ಥಾನಕ್ಕೆ ಕುಸಿತ

    ಇದನ್ನೂ ಓದಿ:ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಜಯನಗರ ಜಿಲ್ಲೆಗೆ ಟಾಪ್ 10ರ ಗರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts