More

    ಸದ್ಭಾವನಾ ಜ್ಯೋತಿ ಯಾತ್ರೆಗೆ ಬೀಳ್ಕೊಡುಗೆ

    ಬಳ್ಳಾರಿ: ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ 31 ವರ್ಷದ ಸದ್ಭಾವನಾ ಜ್ಯೋತಿ ಯಾತ್ರೆ ಗಣಿನಾಡು ಬಳ್ಳಾರಿಗೆ ಬುಧವಾರ ರಾತ್ರಿ ತಲುಪಿದ್ದು, ಕಾಂಗ್ರೆಸ್ ಪಕ್ಷದ ನಗರ ಸಮಿತಿಯಿಂದ ಯಾತ್ರೆಯನ್ನು ರಾಯಲ್‌ವೃತ್ತದ ಬಳಿ ಗುರುವಾರ ಬೀಳ್ಕೊಡಲಾಯಿತು.
    ನಗರ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಮಾತನಾಡಿ, ಚುನಾವಣೆ ಪ್ರಚಾರದಲ್ಲಿದ್ದ ರಾಜೀವ್ ಗಾಂಧಿ ಅವರನ್ನು ಮಾನವ ಬಾಂಬ್ ಮೂಲಕ ಹತ್ಯೆ ಮಾಡಿದ ನಂತರ, ರಾಜೀವ್ ಆಶಯದಂತೆ ದೇಶದಲ್ಲಿ ಭಯೋತ್ಪಾದನೆ ನಿರ್ಮೂಲ ಮಾಡಬೇಕೆಂಬ ಸಂದೇಶವನ್ನು ಹೊತ್ತು ಈ ಜ್ಯೋತಿಯಾತ್ರೆ 31 ವರ್ಷಗಳಿಂದ ನಡೆಸುತ್ತ ಬರಲಾಗಿದೆ ಎಂದರು.
    ರಾಜೀವ್ ಅವರನ್ನು ಹತ್ಯೆ ಮಾಡಿದ ಸ್ಥಳ ತಮಿಳುನಾಡಿನ ಶ್ರೀಪೆರಂಬದೂರಿನಿಂದ ಆ.9 ರಂದು ಆರಂಭಗೊಂಡು ಬೆಂಗಳೂರು ಮೂಲಕ ಬಳ್ಳಾರಿಗೆ ಆಗಮಿಸಿದೆ. ಈ ಯಾತ್ರೆ ಇಂದು ಕಲಬುರಗಿಗೆ ತೆರಳಲಿದೆ. ನಂತರ ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮೂಲಕ ರಾಜೀವ್ ಅವರ ಜನ್ಮದಿನ ಆ.20ಕ್ಕೆ ದೆಹಲಿಯ ವೀರಭೂಮಿಯನ್ನು ತಲುಪಲಿದೆ. ಯಾತ್ರೆಯ ಮೂಲಕ ಅಲ್ಲಲ್ಲಿ ದೇಶದ ಅಭಿವೃದ್ಧಿ, ರಾಷ್ಟ್ರದ ಸಮಗ್ರತೆ ಕುರಿತು ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ನೀಡಿದ ಕೊಡುಗೆ ಕುರಿತು ತಿಳಿಸಲಿದೆ. ಪಕ್ಷದ ಮುಖಂಡರಾದ ಆರ್.ದೊರೈ, ಅಯ್ಯರ್ ಮೊದಲಾದವರು ಇದರಿಂದೊಂದಿಗೆ ಸಾಗುತ್ತಿದ್ದಾರೆ ಎಂದರು.
    ಪಾಲಿಕೆ ಸದಸ್ಯರಾದ ಎಂ.ಪ್ರಭಂಜನ್, ವಿವೇಕ್, ಮಾಜಿ ಸದಸ್ಯೆ ಪರ್ವಿನ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಲ್ಸನ್, ಇಂಟೆಕ್ ಅಧ್ಯಕ್ಷ ಕೆ.ತಾಯಪ್ಪ, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಅಲಿವೇಲು ಸುರೇಶ್, ಮಲ್ಲೇಶ್ವರಿ ಹಾಗೂ ಯಾತ್ರೆ ಜತೆಗೆ ಆಗಮಿಸಿದ್ದ ಗೀತಾ, ಮಾಣಿಕ್ಯಂ, ಗೋವಿಂದರಾಜುಲು, ರಾಲ್ಸ್, ರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts