More

    ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕ್ಷಿಪ್ರ ಆಮ್ಲಜನಕ ಕೇಂದ್ರ ಆರಂಭ: ಸೋನುಸೂದ್ ಚಾರಿಟಬಲ್ ಟ್ರಸ್ಟ್ ಸಹಯೋಗ

    ಬಳ್ಳಾರಿ: ರೈಲ್ವೆ ಪೊಲೀಸ್ ಸಹಯೋಗದೊಂದಿಗೆ ನಟ ಸೋನುಸೂದ್ ಚಾರಿಟಬಲ್ ಟ್ರಸ್ಟ್(ಎಸ್‌ಎಸ್‌ಸಿಟಿ)ನಿಂದ ಕ್ಷಿಪ್ರ ಆಮ್ಲಜನಕ ಕೇಂದ್ರ ಆರಂಭಿಸಿದ್ದು, ಅತಿ ಅಗತ್ಯ ಉಳ್ಳವರು ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಆಕ್ಸಿಜನ್ ಪಡೆಯಬಹುದು ಎಂದು ರೈಲ್ವೆ ಪೊಲೀಸ್ ಇಲಾಖೆ ಡಿವೈಎಸ್ಪಿ ವೆಂಕನಗೌಡ ಪಾಟೀಲ್ ಹೇಳಿದರು.

    ನಗರದ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಕ್ಷಿಪ್ರ ಆಮ್ಲಜನಕ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ನಗರದಿಂದ 80 ರಿಂದ 100 ಕಿಮೀ ವ್ಯಾಪ್ತಿಯಲ್ಲಿ ಇರುವವರು ಕ್ಷಿಪ್ರ ಆಮ್ಲಜಕನ ಕೇಂದ್ರದ ನೆರವು ಪಡೆಯಬಹುದು. ಇಲ್ಲಿಂದ ಸಿಲಿಂಡರ್ ಮೂಲಕ ಆಕ್ಸಿಜನ್ ಪೂರೈಸಲಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಜನರು ನಿರ್ಲಕ್ಷಿಸದೆ ಸಂಪೂರ್ಣವಾಗಿ ನಿಯಂತ್ರಿಸಲು ಕೈಜೋಡಿಸಬೇಕು ಎಂದು ಕೋರಿದರು.

    ಟ್ರಸ್ಟ್ ಸದಸ್ಯ ಅಮಿತ್ ಮಾತನಾಡಿ, ಜನರಿಗೆ ಉಚಿತ ಆಮ್ಲಜನಕ ನೀಡುವ ಉದ್ದೇಶದಿಂದ ಟ್ರಸ್ಟ್‌ನಿಂದ ದೇಶಾದ್ಯಂತ ಆಮ್ಲಜನಕ ಪೂರೈಸಲಾಗುತ್ತಿದೆ. ಹಾಸನ, ದಾವಣಗೆರೆ, ಹುಬ್ಬಳ್ಳಿ ಒಳಗೊಂಡಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕ್ಷಿಪ್ರ ಆಮ್ಲಜನಕ ಕೇಂದ್ರ ತೆರಯಲಾಗಿದೆ. ಬಳ್ಳಾರಿಗೆ 20 ಆಕ್ಸಿಜನ್ ಸಿಲಿಂಡರ್ ನೀಡಿದ್ದು, ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತದೆ. ಸಹಾಯವಾಣಿ ಸಂಖ್ಯೆ 7069999961ಗೆ ಕರೆ ಮಾಡಿ ತುರ್ತು ಅವಶ್ಯಕತೆ ಇರುವವರು ಆಕ್ಸಿಜನ್ ಪಡೆಯಬಹುದು ಎಂದರು.

    ಆಕ್ಸಿಜನ್ ಸಿಲಿಂಡರ್ ಬಳಸುವ ಸಮಯದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಟ್ರಸ್ಟ್‌ನ ಸದಸ್ಯರು ಸ್ಥಳದಲ್ಲಿಯೇ ತರಬೇತಿ ನೀಡಿದರು. ಟ್ರಸ್ಟ್‌ನ ಪ್ರಮುಖರಾದ ಎಸ್.ಅಜಯ್, ವಿವೇಕ್, ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಂ.ಎ.ಷಕೀಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts