More

    ಡಿಸ್ಟಿಂಕ್ಷನ್​​ನಲ್ಲಿ ಪಾಸಾದ ಪಿಯು ವಿದ್ಯಾರ್ಥಿನಿಗೆ ಇಂಗ್ಲಿಷ್​ ಪರೀಕ್ಷೇಲಿ 7 ಅಂಕ: ಕನ್ಫ್ಯೂಸ್​ ಆಗ್ಬೇಡಿ ಸುದ್ದಿ ಓದಿ!

    ಬಳ್ಳಾರಿ: ಡಿಸ್ಟಿಂಕ್ಷನ್​​ನಲ್ಲಿ ಪಾಸಾಗಿದ್ದ ವಿದ್ಯಾರ್ಥಿನಿಗೆ ಇಂಗ್ಲಿಷ್ ಪರೀಕ್ಷೆಯಲ್ಲಿ 7 ಅಂಕ ಕೊಡುವ ಮೂಲಕ ಪಿಯು ಬೋರ್ಡ್​ ಎಡವಟ್ಟು ಮಾಡಿಕೊಂಡಿದೆ. ಇದೀಗ ತಡವಾಗಿ ಎಚ್ಚರಗೊಂಡಿರುವ ಪಿಯು ಬೋರ್ಡ್ ತಪ್ಪು ಸರಿಪಡಿಸುವ ಕ್ರಮಕ್ಕೆ ಮುಂದಾಗಿದೆ.

    ಇದನ್ನೂ ಓದಿ: VIDEO| ಅಪಘಾತವಾದ್ರೆ ಜನ ಸಾಯುವುದುಂಟು ಆದರೆ ಇಲ್ಲಿ ಅಪಘಾತವೇ ಯುವಕನ ಪ್ರಾಣ ಉಳಿಸಿದೆ!

    ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ವಿದ್ಯಾರ್ಥಿನಿ ಜಿ.ಚೈತ್ರ ಪಿಯು ಪರೀಕ್ಷೆಯಲ್ಲಿ ಇಂಗ್ಲೀಷ್ ಹೊರತುಪಡಿಸಿ ಎಲ್ಲ ವಿಷಗಳಯಲ್ಲಿ ಪಾಸಾಗಿದ್ದಳು. ಕನ್ನಡ 98, ಇತಿಹಾಸ 100, ಅರ್ಥಶಾಸ್ತ್ರ 97, ಬಿಸಿನೆಸ್ ಸ್ಟಡಿ 91, ಅಕೌಂಟೆನ್ಸಿ 94 ಹಾಗೂ ಇಂಗ್ಲಿಷ್​​ನಲ್ಲಿ ಕೇವಲ 7 ಅಂಕ ಬಂದಿತ್ತು.

    ಚೈತ್ರಾ ಇಂಗ್ಲಿಷ್​​ನಲ್ಲಿ 70ಕ್ಕಿಂತ ಹೆಚ್ಚು ಅಂಕ ಪಡೆಯುವೆ ಎಂಬ ನಂಬಿಕೆಯಲ್ಲಿದ್ದರು. ಆದರೆ, ಫಲಿತಾಂಶ ಬಂದಾಗ ಚೈತ್ರಾ ಪೋಷಕರು ಹಾಗೂ ಪ್ರಧ್ಯಾಪಕರೂ ಕೂಡಾ ಶಾಕ್ ಆಗಿದ್ದರು. ಬಳಿಕ ಕಾಲೇಜಿನ ಪ್ರಚಾರ್ಯ ವಾಮದೇವ ಮೂರ್ತಿ ಪಿಯು ಬೋರ್ಡ್​​ಗೆ ಕರೆ ಮಾಡಿ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

    ಪ್ರಚಾರ್ಯರ ಮನವಿಗೆ ಸ್ಪಂದಿಸಿ ಚೈತ್ರಾ ಪಡೆದ ಅಂಕವನ್ನು ಪರಿಶಿಲಿಸಿದಾಗ ಚೈತ್ರಾ ಇಂಗ್ಲಿಷ್​​ನಲ್ಲಿ 75 ಅಂಕ ಪಡೆದಿರೋದು ಧೃಡವಾಗಿದೆ. ಕೂಡಲೇ ಪಿಯು ಬೋರ್ಡ್​ನಿಂದ ಪ್ರಾಚಾರ್ಯರಿಗೆ ಮಾಹಿತಿ ಸಿಕ್ಕಿದೆ. ಇದೀಗ ಚೈತ್ರಾ ಒಟ್ಟು 555 ಅಂಕ ಪಡೆದು ಡಿಸ್ಟಿಂಕ್ಷನ್​ನಲ್ಲಿ ಪಾಸಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ‘ಚೆನ್ನಾಗಿದ್ದೀರಾ ತಾಯಿ.. ಆರೋಗ್ಯದ ಕಡೆಗೆ ಲಕ್ಷ್ಯ ಕೊಡಿ.. ಮತ್ತೇನು ಸಹಾಯ ಮಾಡ್ಲಿ?’

    ನದಿಯಲ್ಲಿ ಈಜುವಾಗ ಅಪಾಯಕಾರಿ ಗುಹೆಯಲ್ಲಿ ಸಿಲುಕಿ ಬುದ್ಧಿವಂತಿಕೆಯಿಂದಲೇ ಬದುಕುಳಿದ ಬಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts