More

    ಕ್ಷೀರಕ್ಷೇತ್ರಕ್ಕೆ ಕುರಿಯನ್ ಕೊಡುಗೆ ಅಪಾರ; ರಾಬಕೋವಿ ಒಕ್ಕೂಟ ನಿಗಮದ ನಿರ್ದೇಶಕ ವೀರಶೇಖರರೆಡ್ಡಿ ಹೇಳಿಕೆ

    ಬಳ್ಳಾರಿ: ಕ್ಷೀರ ಕ್ರಾಂತಿಯಲ್ಲಿ ಡಾ.ವರ್ಗೀಸ್ ಕುರಿಯನ್ ಸಲ್ಲಿಸಿರುವ ಸೇವೆ ಮತ್ತು ನೀಡಿದ ಕೊಡುಗೆ ಅಪಾರ ಎಂದು ರಾಬಕೋವಿ ಹಾಲು ಒಕ್ಕೂಟ ನಿಗಮದ ನಿರ್ದೇಶಕ ವೀರಶೇಖರರೆಡ್ಡಿ ಹೇಳಿದರು.
    ನಗರದ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ಷೀರ ಕ್ರಾಂತಿಯ ಪಿತಾಮಹರಾದ ಪದ್ಮಭೂಷಣ ಡಾ.ವರ್ಗೀಸ್ ಕುರಿಯನ್ ಜನ್ಮ ದಿನೋತ್ಸವ ಅಂಗವಾಗಿ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರಪಂಚದಲ್ಲಿ ಹಾಲು ಉತ್ಪಾದನೆಯಲ್ಲಿ ಭಾರತ ದೇಶ 2ನೇ ಸ್ಥಾನದಲ್ಲಿರಲು ಡಾ.ವರ್ಗೀಸ್ ಕುರಿಯನ್ ಅವರೇ ಕಾರಣ. ಕ್ಷೀರ ಕ್ರಾಂತಿಯ ಪಿತಾಮಹ ಎಂದೇ ಇವರನ್ನು ಕರೆಯುತ್ತಾರೆ. ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ಮಾಹಿತಿ ನೀಡಿದರು.
    ರಾಬಕೋವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಗಮದ ಉಪ ವ್ಯವಸ್ಥಾಪಕ ಎಸ್.ವೆಂಕಟೇಶ್ ಗೌಡ, ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಶ್ವನಾಥ, ಆರ್‌ಎಂಒ ಡಾ.ಉದಯಶಂಕರ್, ಪ್ಯಾಥಾಲಜಿಪ್ಟ್ ರಾಜೇಶ್ವರಿ, ಒಕ್ಕೂಟದ ಅಧಿಕಾರಿ ಐ.ಎನ್.ಮುರಳೀಧರ, ಉಪ ವ್ಯವಸ್ಥಾಪಕ(ಮಾ) ಸಿ.ಎನ್.ಮಂಜುನಾಥ, ಬಾಬು.ಬಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts