More

    ಸೋಲು – ಗೆಲುವು ಸಮಾನವಾಗಿ ಸ್ವೀಕರಿಸಿ: ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯ್‌ಕುಮಾರ್ ಸಲಹೆ

    ಬಳ್ಳಾರಿ: ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ, ಸೋಲು ಗೆಲುವಿನ ಮೆಟ್ಟಿಲು ಅವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯ್‌ಕುಮಾರ್ ಹೇಳಿದರು.

    ನಗರದ ವಿಮ್ಸ್ ಕ್ರೀಡಾಂಗಣದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯ ಅಂಗವಿಕಲರಿಗೆ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅಂಗವಿಕಲ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ವಿವಿಧ ಅಂಗವಿಕಲತೆಯ 800 ಜನ ವಿಶೇಷಚೇತನರು ಕ್ರಿಕೆಟ್, ಗುಂಡು ಎಸೆತ, ರನ್ನಿಂಗ್ ರೇಸ್, ಕಬ್ಬಡ್ಡಿ ಬೈಕ್ ರೇಸ್, ಕೇನ್ ರೇಸ್, ಜಾವಲಿನ್ ಥ್ರೋ, ಮ್ಯೂಜಿಕಲ್ ಚೇರ್, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಾನಪದ ಗೀತೆ, ಭಾವಗೀತೆ, ಫ್ಯಾನ್ಸಿ ಡ್ರೆಸ್, ಚಿತ್ರಕಲೆ, ಮುಂತಾದ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದು ಗಮನಸೆಳೆಯಿತು.

    ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ರಾಜನಾಯಕ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಎಚ್.ಎಂ, ಚೆಂಗಾರೆಡ್ಡಿ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯ ಮುಖ್ಯಸ್ಥ ಕೆ.ಎಚ್.ಗುರುಮೂರ್ತಿ, ಅನುಗ್ರಹ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯ ಮುಖ್ಯಸ್ಥ ಸಿಸ್ಟರ್ ಲಿನೆಟ್ ಫರ್ನಾಂಡಿಸ್, ಡಾ.ಭೀಮಾ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯ ಮುಖ್ಯಸ್ಥರಾ ಮಹೇಶ್ ಎಚ್.ಎಂ., ಸ್ಮೈಲ್ ಸಂಸ್ಥೆಯ ಮುಖ್ಯಸ್ಥ ಪಣಿರಾಜ್, ನವಜೀವನ ಸಂಸ್ಥೆಯ ಎಸ್ಥರ್, ಅಂಗವಿಕಲರ ಒಕ್ಕೂಟದ ಸಂಘದಿಂದ ಸುಬ್ಬರಾವ್, ಪರಶುರಾಮ್, ಅಂಗವಿಕಲ ಪಾಲಕರ ಒಕ್ಕೂಟದ ಅಧ್ಯಕ್ಷ ಎನ್.ಕುಮಾರಪ್ಪ, ನವತಾರೆ ಅಂಗವಿಕರ ಒಕ್ಕೂಟದ ಅಧಕ್ಷ ಸಾದಿಕ್, ಬಾಕಿದ್, ಸಾಧ್ಯ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯಿಂದ ಗೋವಿಂದಪ್ಪ, ಆಕಾಂಕ್ಷ ವಿಶೇಷ ಮಕ್ಕಳ ಶಾಲೆಯಿಂದ ಕೃಷ್ಣ ಕುಮಾರ್, ವಿಶ್ವ ಚೇತನ ಅಂಧ ಮಕ್ಕಳ ಸಂಸ್ಥೆಯ ಮುಖ್ಯಸ್ಥ ಗಂಗಾಧರ್, ಸರ್ಕಾರಿ ಕಿವುಡು ಮಕ್ಕಳ ಪಾಠಶಾಲೆಯ ಶಿಕ್ಷಕ ರವಿ.ಸಿ.ಕೆ ಮತ್ತು ವೈಶಾಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts