More

    ಜನಹಿತಕ್ಕಾಗಿ ಶ್ರಮಿಸಿದ ಧೀಮಂತ

    ಬಳ್ಳಾರಿ: ವೃತ್ತಿಯಿಂದ ವಕೀಲರಾಗಿ, ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿ, ಪತ್ರಕರ್ತರಾಗಿ, ಮೊಟ್ಟಮೊದಲ ರಾಷ್ಟ್ರಪತಿಯಾಗಿ, ಅಜಾತಶತ್ರುವಾಗಿ ಆಡಳಿತ ನಡೆಸಿ, ಭಾರತರತ್ನ ಪ್ರಶಸ್ತಿ ಪಡೆದವರು ಡಾ.ಬಾಬುರಾಜೇಂದ್ರ ಪ್ರಸಾದ್ ಎಂದು ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.

    ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬಾಬು ರಾಜೇಂದ್ರ ಪ್ರಸಾದ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರಪತಿ ಆಗಿದ್ದ ಅವಧಿಯಲ್ಲಿ ಜನರ ಹಿತಕ್ಕಾಗಿ ಜಾರಿಗೆ ತಂದ ಕಾನೂನಿಗೆ ಮಾತ್ರ ಅವರು ಒಪ್ಪಿಕೊಳ್ಳುತ್ತಿದ್ದರು. ಜನರಿಗೆ ಮಾರಕವಾದ ಕಾನೂನನ್ನು ವಿರೋಧಿಸುತ್ತಾ ತಮ್ಮ ಬದ್ಧತೆ ತೋರ್ಪಡಿಸಿದ ಮೇಧಾವಿ ಎಂದರು. ಗ್ರಾಪಂ ಸದಸ್ಯೆ ಬಸಮ್ಮ ಮಾತನಾಡಿದರು. ಶಿಕ್ಷಕರಾದ ಚನ್ನಮ್ಮ, ಶಶಮ್ಮ, ರಾಮಾಂಜಿನೇಯ, ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀದೇವಿ, ನಿಂಗಮ್ಮ, ಆಶಾಕಾರ್ಯಕರ್ತೆಯರಾದ ಯಶೋಧ, ಸುಶೀಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts