More

    ಮಾ.3ರಂದು ಬಳ್ಳಾರಿ ಕನಕ ದುರ್ಗಮ್ಮ ಸಿಡಿಬಂಡಿ ಉತ್ಸವ, ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ

    ಬಳ್ಳಾರಿ: ನಗರದ ಕನಕ ದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ಉತ್ಸವ ಮಾ.3ರ ಸಂಜೆ 5.30ಕ್ಕೆ ನಡೆಯಲಿದೆ. ಉತ್ಸವ ಹಿನ್ನೆಲೆ ಮೂರು ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    ಮಾ.2ರಂದು ನಗರದ ಕೌಲ್ ಬಜಾರ್ ಪ್ರದೇಶದ ಮಾಧವಯ್ಯ ಬೀದಿಯಿಂದ ಸಿಡಿಯನ್ನು ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಗುವುದು. ಮಾ.3ರಂದು ಬೆಳಗ್ಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ಬಳಿಕ ಹೂವಿನ ಅಲಂಕಾರ ಮಾಡಲಾಗುವುದು. ಮಧ್ಯಾಹ್ನ ಬೆಂಗಳೂರು ರಸ್ತೆಯಲ್ಲಿರುವ ಸಣ್ಣ ದುರ್ಗಮ್ಮ ದೇವಸ್ಥಾನದಿಂದ ಧರ್ಮಕರ್ತರು ಕುಂಭ ತಂದ ಬಳಿಕ ಸಿಡಿಬಂಡಿ ಉತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ ಎಂದು ದೇವಸ್ಥಾನದ ಪ್ರಧಾನ ಧರ್ಮಕರ್ತ ಪಿ.ಗಾದೆಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವೇಕಾನಂದ ಯುವಕ ಸಂಘದ ಸಹಯೋಗದೊಂದಿಗೆ ಜನಪದ ಜಾತ್ರೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬುಧವಾರ ಸಂಜೆ ಸಿಡಿಬಂಡಿಯನ್ನು ಮಾಧವಯ್ಯ ಬೀದಿಗೆ ತಲುಪಿಸಲಾಗುವುದು. 2009ರಲ್ಲಿ ಆರಂಭವಾದ ದೇವಸ್ಥಾನ ಅಭಿವೃದ್ಧಿ ಕಲಶಾರೋಹಣದೊಂದಿಗೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

    ದಾನಿಗಳ ನೆರವಿನೊಂದಿಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಬರುವ ಭಕ್ತರಿಗಾಗಿ 30 ಉಚಿತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಾ.3ರ ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ ಈ ಬಸ್‌ಗಳು ನಿಗದಿತ ಮಾರ್ಗದಲ್ಲಿ ಸಂಚರಿಸಲಿವೆ. ನಗರದ ನಿವಾಸಿಗಳಿಗೂ 10 ಬಸ್‌ಗಳನ್ನು ಏರ್ಪಾಡು ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಪಿ.ಗಾದೆಪ್ಪ ತಿಳಿಸಿದರು.

    ದೇವಸ್ಥಾನದ ಇಒ ಎಂ.ಎಚ್.ಪ್ರಕಾಶರಾವ್ ಮಾತನಾಡಿ, ಉತ್ಸವದಲ್ಲಿ ರಸ್ತೆ, ವಿದ್ಯುತ್, ನೀರು ಇತ್ಯಾದಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಹಾಯಕ ಆಯುಕ್ತರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದೇವಸ್ಥಾನದಲ್ಲಿ 32 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಗತ್ಯವಾದರೆ ಇನ್ನೂ ಹೆಚ್ಚಿನ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರು.

    ದೇವಸ್ಥಾನದ ಧರ್ಮಕರ್ತರು ಹಾಗೂ ಪೂಜಾರಿಗಳಾದ ರಾಮಾಂಜನೇಯಲು, ದಿವಾಕರ, ಮರಿಸ್ವಾಮಿ, ಮುನಿಚಂದ್ರಬಾಬು, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಚಂದ್ರಕಲಾ ಇದ್ದರು.

    ಧಾರ್ಮಿಕ ದತ್ತಿ ಇಲಾಖೆಯಿಂದ 5.77 ಕೋಟಿ ರೂ. ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ 4.22 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿ ಕೈಗೊಳ್ಳಲಾಗಿದೆ. ಸಚಿವ ಬಿ.ಶ್ರೀರಾಮುಲು ಕಲಶಗಳನ್ನು ದೇಣಿಗೆಯಾಗಿ ನೀಡಲಿದ್ದಾರೆ
    | ಎಂ.ಎಚ್.ಪ್ರಕಾಶರಾವ್ ದೇವಸ್ಥಾನದ ಇಒ

    22ಅಶೋಕ್ 01 ಕನಕ ದುರ್ಗಮ್ಮ
    22ಅಶೋಕ್ 02 ಪಿ.ಗಾದೆಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts