More

    ಬೆಂಗಳೂರಲ್ಲಿ 28ರಂದು ಪ್ರತಿಭಟನೆ; ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಸಾಗರ್ ಹೇಳಿಕೆ

    ಬಳ್ಳಾರಿ: ನ್ಯಾಯಾಧೀಶ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಮಾ.28 ರಂದು ಬೆಂಗಳೂರಿನಲ್ಲಿ ಮಾದಿಗ ದಂಡೋರದಿಂದ ಮಹಿಳಾ ಘರ್ಜನೆ ಹೋರಾಟ ನಡೆಯುತ್ತಿದೆ ಎಂದು ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಸಾಗರ್ ಹೇಳಿದರು.

    ಹಲವು ವರ್ಷಗಳಿಂದ ನಾನಾ ವರದಿಗಳು ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡಬೇಕು ಎಂದು ಹಲವು ಸರ್ಕಾರಗಳನ್ನು ಒತ್ತಾಯಿಸುತ್ತಿದ್ದೇವೆ. ಆದರೆ, ಸರ್ಕಾರಗಳು ಮಾತ್ರ ಜಾರಿ ಮಾಡಲು ಹಿಂದೇಟು ಹಾಕುತ್ತಿವೆ. ಸುಪ್ರೀಂಕೋರ್ಟ್ ಆದೇಶದಂತೆ ಒಳಮೀಸಲಾತಿ ನೀಡುವ ಹಕ್ಕು ಆಯಾ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ್ದು ಎಂದು ಆದೇಶ ನೀಡಿದೆ. ಆಡಳಿತ ಅವಧಿಯಲ್ಲಿದ್ದ ಪಕ್ಷಗಳು ಸದಾಶಿವ ಆಯೋಗ ವರದಿ ಜಾರಿ ಮಾಡುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ಆಂಧ್ರಪ್ರದೇಶ, ಪಂಜಾಬ್, ಹರಿಯಾಣ, ಇತರ ರಾಜ್ಯಗಳಲ್ಲಿ ಒಳ ಮೀಸಲು ಜಾರಿಗೆ ತರಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇಲ್ಲ. ರಾಜ್ಯದಲ್ಲಿ ದಲಿತರೇ ಹೆಚ್ಚಿದ್ದು, ಯಾವುದೇ ಸಮರ್ಪಕ ಅನುದಾನ ಹಾಗೂ ಸೌಲಭ್ಯಗಳ ನೀಡದೆ ಕೇವಲ ಮತಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದ ಎಲ್ಲ ವಿವಿಗಳಲ್ಲಿ ದಲಿತರಿಗೆ ಶೇ.3 ಮೀಸಲು ಇರುವುದರಿಂದ ಸಮರ್ಪಕವಾದ ಉದ್ಯೋಗಗಳು ದೊರೆಯುತ್ತಿಲ್ಲ. 20 ವರ್ಷಗಳಿಂದ ಪ್ರತಿಭಟನೆ, ಹೋರಾಟ ನಡೆಸಿದರೂ ವರದಿ ಜಾರಿಯಾಗುತ್ತಿಲ್ಲ. ಮಾತು ಕೊಟ್ಟು ಅಧಿಕಾರ ವಹಿಸಿಕೊಂಡ ಬಿಜೆಪಿ ಸರ್ಕಾರ ಮೌನವಾಗಿದೆ ಎಂದರು. ಜಿಲ್ಲಾಧ್ಯಕ್ಷ ಕೊರ‌್ಲಗುಂದಿ ಪಂಪಾಪತಿ, ಮುಖಂಡರಾದ ಲಕ್ಷ್ಮೀ ದೇವಮ್ಮ, ಕಮಲ ಬಸವರಾಜ, ಅಂಬಣ್ಣ, ಮನೋಹರ್, ಗಾದಿಲಿಂಗಪ್ಪ, ಮುಕ್ಕಣ್ಣ, ಮಲ್ಲೇಶ್ವರಿ, ಪುಷ್ಪವತಿ, ಶಂಕರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts