More

    ಐಪಿ ಸೆಟ್‌ಗಳಿಗೆ ಮೀಟರ್ ಬೇಡ, ರಾಜ್ಯ ರೈತ ಸಂಘದಿಂದ ಒತ್ತಾಯ

    ಬಳ್ಳಾರಿ: ಸರ್ಕಾರ ರೈತರ ಐಪಿ ಸೆಟ್‌ಗಳಿಗೆ ಮೀಟರ್ ಅಳವಡಿಸುವ ಹುನ್ನಾರವನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ನಗರದ ಈಡಿಗ ಹಾಸ್ಟೆಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸೋಮವಾರ ರ‌್ಯಾಲಿ ನಡೆಸಿದರು.

    ಕೇಂದ್ರ ಸರ್ಕಾರ ವಿದ್ಯುತ್ ವಲಯವನ್ನು ಖಾಸಗೀರಕಣ ನೀತಿಯನ್ನು ಕೈಬಿಡಬೇಕು. ರಾಜ್ಯ ಸರ್ಕಾರ ಮೂರು ರೈತ ವಿರೋಧ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು. ಕೃಷಿ ಬೆಳೆ ಹಾಗೂ ಆಹಾರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನಿರ್ಧರಿಸಬೇಕು. ಇತ್ತೀಚಿನ ಮಳೆಯಿಂದ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು. ಸರ್ಕಾರ ಅಭಿವೃದ್ಧಿ ನೆಪದಲ್ಲಿ ರೈತರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಕೂಡಲೇ ಕೈಬಿಡಬೇಕು. ಬಗರ ಹುಕ್‌ಂ ಸಾಗುವಳಿ ಮಾಡಿರುವ ರೈತರಿಗೆ ಕೂಡಲೇ ಪಟ್ಟ ವಿತರಿಸಬೇಕು. ರೈತರ ಹಾಲಿನ ದರ ಹೆಚ್ಚಿಸಬೇಕು. ಭೂಮಿಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಬೆಳೆ ಸಮೀಕ್ಷೆ ಕಾರ್ಯ ಸರಿಯಾಗಿ ಆಗಿರುವುದಿಲ್ಲ. ಆದ್ದರಿಂದ ಸಂಪೂರ್ಣ ಹಸಿರು ಬರಗಾಲ ಎಂದು ಘೋಷಿಸಿ ಎಲ್ಲ ರೈತರಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಸಂಗನಕಲ್ಲು, ಪದಾಧಿಕಾರಿಗಳಾದ ಬಿ.ವಿ.ಎರ‌್ರಿಸ್ವಾಮಿ, ಗಂಗಾ ಧಾರವಾಡಕರ, ನಾಗಪ್ಪ, ಸಣ್ಣಚಿಕ್ಕಪ್ಪ, ಎಂ.ಶಿವಣ್ಣ, ಉಜ್ಜಿನಯ್ಯ, ಬೇವಿನಗಿಡ ಎರ‌್ರಿಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts