More

    ಹಾರಲಿದೆ ದೇಶದ ಎತ್ತರದ ಧ್ವಜ

    ಹೊಸಪೇಟೆ: ದೇಶದ ಅತಿ ಎತ್ತರ ಖ್ಯಾತಿಗೆ ಒಳಗಾದ 405 ಅಡಿ ಎತ್ತರದ ಧ್ವಜಸ್ತಂಭ ಕಾಮಗಾರಿ ಭಾನುವಾರ ಪೂರ್ಣಗೊಂಡಿದ್ದು, ಸ್ವಾತಂತ್ರೃ ಅಮೃತ ಮಹೋತ್ಸವದ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗಲಿದೆ. ಪ್ರವಾಸೋದ್ಯಮ ಇಲಾಖೆಯಿಂದ ಆರು ಕೋಟಿ ರೂ. ವೆಚ್ಚದಲ್ಲಿ ನಗರದ ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಥಾಪಿಸಲಾಗಿದೆ. ಬಜಾಜ್ ಕಂಪನಿಯಿಂದ ಪುಣೆಯಲ್ಲಿ ಸಿದ್ಧಪಡಿಲಾದ ಲೋಹದ ಧ್ವಜ ಸ್ತಂಭವನ್ನು ಹಲವು ಬಿಡಿ ಭಾಗಗಳನ್ನಾಗಿಸಿ ನಗರಕ್ಕೆ ತರಲಾಗಿತ್ತು.

    ನಾಲ್ಕೈದು ದಿನಗಳಿಂದ ಜೋಡಣೆ ನಡೆದಿದ್ದು, ಭಾನುವಾರ ಮಧ್ಯಾಹ್ನ 12ರ ವೇಳೆಗೆ ಪೂರ್ಣಗೊಂಡಿದೆ. ಕಾಮಗಾರಿ ಮುಗಿಯುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಆ.15ರ ಬೆಳಗ್ಗೆ ಒಂಬತ್ತಕ್ಕೆ ಜಿಲ್ಲಾಡಳಿತದಿಂದ ಸಚಿವ ಆನಂದ ಸಿಂಗ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಮೊದಲು 360 ಅಡಿ ಎತ್ತರದ ಬೆಳಗಾವಿ ಕೋಟೆ ಪ್ರದೇಶದ ಧ್ವಜ ದೇಶದ ಅತೀ ಎತ್ತರದ್ದು ಎಂಬ ಕೀರ್ತಿಗೆ ಪಾತ್ರವಾಗಿತ್ತು. ಈಗ ಇದರ ಶ್ರೇಯಸ್ಸು ಹೊಸಪೇಟೆಗೆ ಸಲ್ಲಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts