More

    ಎಚ್‌ಎಲ್‌ಸಿಗೆ ಮಾ.10ರವರೆಗೆ ನೀರು

    ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಎಚ್‌ಎಲ್ ಕಾಲುವೆಗೆ ಮಾ.10ರವರೆಗೆ ನೀರು ಹರಿಸುವ ಸಾಧ್ಯತೆ ಇದೆ ಎಂದು ತುಂಗಭದ್ರಾ ರೈತ ಸಂಘ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ಅತಿಥಿ ಗೃಹದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ, ಸೋಮಲಿಂಗಪ್ಪ ನೇತೃತ್ವದಲ್ಲಿ ಬುಧವಾರ ಸಭೆ ನಡೆಸಲಾಗಿದೆ. ಸದ್ಯ ಲಭ್ಯ ಇರುವ ನೀರು ಆಧರಿಸಿ ಮಾ.10ರ ವರೆಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಜ.10ರಿಂದ 30ರ ವರೆಗೆ, ನಂತರ ಫೆ.10ರಿಂದ 28ರ ವರೆಗೆ ನೀರು ಹರಿಸಲಿದೆ. ಅದಾದ ನಂತರ ನೀರಿನ ಲಭ್ಯತೆ ಆಧರಿಸಿ ಮಾ.10ರ ವರೆಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನ ಆಗಿದೆ ಎಂದರು.

    ನಮಗೆ ಮಾ.30ರವರಿಗೆ ನೀರು ಬೇಕಿದೆ. ನಮಗೆ ನ್ಯಾಯಬದ್ಧ ನೀರು ಹಂಚಿಕೆ ಆಗಿಲ್ಲ. ನವೆಂಬರನಲ್ಲಿ ಉತ್ತಮ ಮಳೆ ಆಗಿತ್ತು. ಆದರೂ ನಮಗೆ ನೀರು ಹರಿಸಿದ್ದಾಗಿ ಮಾಹಿತಿ ನೀಡಿದ ಅಧಿಕಾರಿಗಳು ಈಗ ನೀರು ಸಿಗದಂತೆ ಮಾಡಿದ್ದಾರೆ. 1981ರಲ್ಲಿ ಉತ್ತಮ ಮಳೆ ಆಗಿ 210 ಟಿಎಂಸಿ ನೀರು ಬಳಕೆಗೆ ಸಿಕ್ಕಿತ್ತು. ಈ ಬಾರಿ 260 ಟಿಎಂಸಿ ನೀರು ಸಿಕ್ಕಿದೆ. ಆದರೂ ನೀರಿನ ಕೊರತೆ ಆಗಿದೆ. ಸದ್ಯ 97 ಟಿಎಂಸಿ ಕೃಷಿ ಬಳಕೆಗೆ ಲಭ್ಯ ಇದೆ. 40 ಟಿಎಂಸಿ ರಾಯಚೂರು ಕಾಲುವೆಗೆ ನೀರು ಹರಿಯಲಿದೆ. ನಮಗೆ ಹೆಚ್ಚಿನ ನೀರು ಬೇಕೆಂದರೆ ಆಂಧ್ರದ ಸಿಎಂಗೆ ಮನವಿ ಮಾಡಬೇಕು. ಒಂದೆರಡು ಟಿಎಂಸಿ ನೀರಿಗಾಗಿ ಆ ಸಿಎಂಗೆ ಮನವಿ ಮಾಡುವುದು ಅಸಾಧ್ಯ ಎಂದರು.

    ಪ್ರಮುಖರಾದ ಗಂಗಾವತಿ ವೀರೇಶ, ಬಿ.ಎಂ.ಬಸವರಾಜ, ವೀರನಗೌಡ, ಈಲಿಗಾರ ಪಂಪಾಪತಿ, ಗೋವಿಂದಪ್ಪ ಕಂಚಿಗೆರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts