More

    ಬಳ್ಳಾರಿಯಲ್ಲಿ ಮಳೆಯ ರೌದ್ರನರ್ತನಕ್ಕೆ ನೂರಕ್ಕೂ ಅಧಿಕ ಮರಗಳು ಧರೆಗೆ

    ಬಳ್ಳಾರಿ: ನಗರದಲ್ಲಿ ಗುರುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಗುಡುಗು ಸಿಡಿಲಿನ ಅಬ್ಬರದ ನಡುವೆ ಧಾರಾಕಾರವಾಗಿ ಸುರಿದ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ರಾತ್ರಿ ಸುರಿದ ಭೀಕರ ಮಳೆಗೆ ಶುಕ್ರವಾರ ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನ ರಸ್ತೆ ಮಾರ್ಗದ ರೈಲ್ವೆ ಕೆಳ ಸೇತುವೆಯಲ್ಲಿ ಮೊಣಕಾಲವರೆಗೂ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು. ಎಸ್.ಎನ್.ಪೇಟೆ ಕೆಳ ಸೇತುವೆಯಲ್ಲಿ ಮಧ್ಯಾಹ್ನದವರೆಗೆ ಮಳೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ತಾಲೂಕು ಕಚೇರಿ ಹಾಗೂ ಡಿಸಿ ಕಚೇರಿ ಆವರಣದಲ್ಲಿನ ಆನೇಕ ಕಚೇರಿಗಳ ಮುಂಭಾಗದಲ್ಲಿ ಮಳೆ ನೀರು ನಿಲುಗಡೆಗೊಂಡಿತ್ತು. ನಿಂತ ನೀರನ್ನು ಹೊರ ಹಾಕಲು ಕಚೇರಿ ಸಿಬ್ಬಂದಿ ಪರದಾಡಿದರು. ಇನ್ನು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಮಳೆ ನೀರಿನಿಂದಾಗಿ ವ್ಯಾಪಾರಸ್ಥರು, ಕೂಲಿಕಾರ್ಮಿಕರು ಸಮಸ್ಯೆ ಅನುಭವಿಸಿದರು. ಮಾರುಕಟ್ಟೆ ಆವರಣದಲ್ಲಿ ಹಾಕಿದ್ದ ಧಾನ್ಯಗಳು ಮಳೆಗೆ ತೊಯ್ದವು. ನಗರದ ನಲ್ಲಚೆರುವು, ದುರ್ಗಮ್ಮ ದೇವಸ್ಥಾನ, ಮೋಕಾ ರಸ್ತೆ, ತಾಳೂರು ರಸ್ತೆ, ಹವಂಬಾವಿ ಹಾಗೂ ಗುಗ್ಗರಹಟ್ಟಿ ಪ್ರದೇಶಗಳಲ್ಲಿನ ಬಡಾವಣೆ ಸೇರಿದಂತೆ ಇತರ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಸಮಸ್ಯೆ ಎದುರಿಸಿದರು. ನಗರದ ವಿವಿಧ ಬಡಾವಣೆಯಲ್ಲಿ ಚರಂಡಿ ನೀರು ತುಂಬಿ ರಸ್ತೆಗೆ ಹರಿಯಿತು.

    ಇದ್ದಕಿದ್ದಂತೆ ಸಂಜೆ ಬೀಸಿದ ರಭಸದ ಗಾಳಿಗೆ 50 ರಿಂದ 60 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ರಾತ್ರಿ ಪ್ರಮುಖ ರಸ್ತೆಗಳು ಬಂದ್ ಆಗಿದ್ದು, ದುರ್ಗಮ್ಮ ದೇವಸ್ಥಾನ, ರಾಯಲ್ ವೃತ್ತ, ಎಸ್‌ಎಸ್.ಪೇಟೆ ಪ್ಲೈಓವರ್ ಮೇಲೆ ಎರಡು ಗಂಟೆಗೂ ಅಧಿಕ ಟ್ರಾಫಿಕ್ ಜಾಮ್ ಆಗಿ ವಾಹನ ಸಂಚಾರರು ಮನೆಗೆ ತೆರಳಲು ಪರದಾಡಿದರು. ಅಸ್ತವ್ಯಸ್ತ ಸಂಚಾರಕ್ಕೆ ಬೇಸತ್ತ ಕೆಲವರು ವಾಹನಗಳನ್ನು ತಮಗೆ ತಿಳಿದಿರುವ ಸಂಬಂಧಿಗಳ ಮನೆಯ ಮುಂದೆ ಬಿಟ್ಟು ಮನೆಗೆ ನಡೆದುಕೊಂಡೆ ತೆರಳಿದರು. ಜಿಲ್ಲಾಧಿಕಾರಿ, ಪಾಲಿಕೆ ಅಧಿಕಾರಿಗಳು ವಿವಿಧ ಬಡವಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯುತ್ ಕಂಬಗಳು ಧರೆಗೆ ಉರುಳಿದ ಪರಿಣಾಮ ಸಂಜೆ ನಿಲುಗಡೆಗೊಂಡ ವಿದ್ಯುತ್ ಶುಕ್ರವಾರ ಸಂಜೆವರೆಗೆ ವ್ಯತ್ಯಯವಾಗಿತ್ತು. ವಿಭಜಿತ ಜಿಲ್ಲಾದ್ಯಂತ 180 ಮರ, 204 ವಿದ್ಯುತ್ ಕಂಬಗಳು ಬಿದ್ದಿವೆ. 12 ಟ್ರಾನ್ಸ್‌ಫರ್ಮರ್ಸ್‌ ಹಾನಿಯಾಗಿದ್ದು, 11 ಮನೆಗಳು ಕುಸಿದಿವೆ. 24 ಮನೆಳಿಗೆ ನೀರು ನುಗ್ಗಿದೆ. ಸಿರಗುಪ್ಪದಲ್ಲಿ ಸಿಡಿಲಿಗೆ ಒಬ್ಬ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಾಹಣಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts