More

    ಬಳ್ಳಾರಿಯಲ್ಲಿ ಗ್ರಾಮ ಪಂಚಾಯಿತಿ ಎರಡನೇ ಹಂತದ ಚುನಾವಣೆ ಇಂದು

    ಬಳ್ಳಾರಿ: ಜಿಲ್ಲೆಯ ಆರು ತಾಲೂಕುಗಳ 144 ಗ್ರಾಪಂಗಳಿಗೆ ಡಿ.27ರಂದು ಮತದಾನ ನಡೆಯಲಿದೆ. 2241 ಸ್ಥಾನಗಳಿಗೆ 5455 ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದಾರೆ.

    ಸಂಡೂರು ತಾಲೂಕಿನ 26 ಗ್ರಾಪಂಗಳ 511 ಸ್ಥಾನಗಳಿಗೆ 1135, ಹಬೊಹಳ್ಳಿ ತಾಲೂಕಿನ 19 ಗ್ರಾಪಂಗಳ 338 ಸ್ಥಾನಗಳಿಗೆ 696 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಡಗಲಿಯ 26 ಪಂಚಾಯಿತಿಗಳ 430 ಸದಸ್ಯ ಸ್ಥಾನಕ್ಕೆ 992, ಕೂಡ್ಲಿಗಿಯ 25 ಪಂಚಾಯಿತಿಗಳ 482 ಸ್ಥಾನಗಳಿಗೆ 895 ಸ್ಪರ್ಧಿಗಳಿದ್ದಾರೆ. ಕೊಟ್ಟೂರು ತಾಲೂಕಿನ 13 ಗ್ರಾಪಂಗಳ 195 ಸ್ಥಾನಗಳಿಗೆ 368 ಹಾಗೂ ಹರಪನಹಳ್ಳಿಯ 35 ಗ್ರಾಪಂಗಳ 608 ಸ್ಥಾನಗಳಿಗೆ 1369 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

    ಹಡಗಲಿ ತಾಲೂಕಿನಲ್ಲಿ ಎರಡು ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಸಂಡೂರು ತಾಲೂಕಿನಲ್ಲಿ 69, ಹಬೊಹಳ್ಳಿ 49, ಹಡಗಲಿ 20, ಕೂಡ್ಲಿಗಿ 95, ಕೊಟ್ಟೂರು 39, ಹರಪನಹಳ್ಳಿ ತಾಲೂಕಿನಲ್ಲಿ 49 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಡಿ.30ರಂದು ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಹೊರಬೀಳಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಬಳ್ಳಾರಿಯಲ್ಲಿ ಸೇಂಟ್ ಜಾನ್ಸ್ ಶಾಲೆ, ಕುರುಗೋಡು ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿರಗುಪ್ಪದಲ್ಲಿ ವಿವೇಕಾನಂದ ಪಬ್ಲಿಕ್ ಶಾಲೆ, ಹಬೊಹಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಡಗಲಿಯಲ್ಲಿ ಮೌಂಟ್ ಕಾರ್ಮೆಲ್ ಶಾಲೆ, ಕೊಟ್ಟೂರಿನಲ್ಲಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಣಿಕೆ ನಡೆಯಲಿದೆ.

    ಸಂಡೂರಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಹೊಸಪೇಟೆಯಲ್ಲಿ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆ, ಲಿಟ್ಲ್ ಫ್ಲವರ್ ಪಿಯು ಕಾಲೇಜು, ಕಂಪ್ಲಿಯಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಕೂಡ್ಲಿಗಿಯಲ್ಲಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಪಿಯು ಕಾಲೇಜು ಮತ್ತು ಹರಪನಹಳ್ಳಿಯಲ್ಲಿ ತರಳಬಾಳು ಶಾಲೆ, ಎಚ್‌ಪಿಎಸ್ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ ಕೈಗೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts