More

    ಸರ್ಕಾರ ಪಿಟಿಸಿಎಲ್ ಕಾಯ್ದೆ ಬಲಪಡಿಸಲಿ: ಡಾ.ಅಂಬೇಡ್ಕರ್ ಸಂಘರ್ಷ ಸಮಿತಿ ಜಿಲ್ಲಾ ಪ್ರ.ಕಾರ್ಯದರ್ಶಿ ಜಿ.ವಿಶ್ವನಾಥ್ ಒತ್ತಾಯ

    ಬಳ್ಳಾರಿ: ದಲಿತರಿಗೆ ಸರ್ಕಾರ ನೀಡಿರುವ ಜಮೀನು ಪರಭಾರೆ ಅಗಬಾರದೆಂಬ ಉದ್ದೇಶದಿಂದ ಮಾಜಿ ಸಿಎಂ ದೇವರಾಜ ಅರಸು ಆಡಳಿತ ಅವಧಿಯಲ್ಲಿ ಪಿಟಿಸಿಎಲ್ ಕಾಯ್ದೆ ಜಾರಿ ಮಾಡಲಾಗಿದೆ. ಆದರೆ, ಇತ್ತೀಚೆಗೆ ಕಾಯ್ದೆಯಲ್ಲಿ ತೀವ್ರ ಸಮಸ್ಯೆಗಳುಂಟಾಗಿದ್ದು, ತಿದ್ದುಪಡಿ ಮಾಡಿ ಮತ್ತಷ್ಟು ಬಲಪಡಿಸಬೇಕು ಎಂದು ಮಹಾನಾಯಕ ಡಾ.ಅಂಬೇಡ್ಕರ್ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ವಿಶ್ವನಾಥ್ ಒತ್ತಾಯಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ದಿನಗಳಲ್ಲಿ ಸರ್ಕಾರದ ಅನುಮತಿಯಿಲ್ಲದೆ ದಲಿತರು ಸಂಕಷ್ಟಗಳನುಸರ ಅಥವಾ ಬೇರೆ ಸಮುದಾಯದ ಶ್ರೀಮಂತ ವ್ಯಕ್ತಿಗಳು ಹಣದಾಸೆ ತೋರಿಸಿ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇದರ ಜತೆ ಸರ್ಕಾರದ ಇಲಾಖೆಗಳಲ್ಲಿನ ಲೋಪ-ದೋಷಗಳಿಂದ ದಲಿತರ ಭೂಮಿಗಳು ಪರಭಾರೆಯಾಗುತ್ತಿರುವುದು ನಿಲ್ಲುತ್ತಿಲ್ಲ. 2009ರಿಂದ ಈವೆರೆಗೆ 13,016 ಪ್ರಕರಣಗಳು ದಾಖಲಾಗಿವೆ. ಇದರಿಂದ ದಲಿತರು ಭೂಹೀನರಾಗುತ್ತಿದ್ದಾರೆ. ಹೀಗಾಗಿ ಪಿಟಿಸಿಎಲ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಬಲಪಡಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಮಹೇಶ್, ಈರೇಶ್‌ಕುಮಾರ, ಎ.ಕೆ.ಈರಪ್ಪ, ಬಿ.ಲೀಲಾಕುಮಾರಿ, ಮಲ್ಲೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts