More

    ನಾಲ್ಕು ವರ್ಷದ ಪದವಿ ಬೇಡ: ಯುಜಿಸಿ ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ಸಲಹೆ, ರಾಜ್ಯಮಟ್ಟದ ಆನ್‌ಲೈನ್ ಸಮಾವೇಶ

    ಬಳ್ಳಾರಿ: ಹೊಸ ಶಿಕ್ಷಣ ನೀತಿಯಡಿ ಜಾರಿಗೆ ತಂದಿರುವ ನಾಲ್ಕು ವರ್ಷದ ಪದವಿ ಪದ್ಧತಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅಸಮಾನತೆಯನ್ನು ಪುನಃ ಸ್ಥಾಪಿಸಲಿದೆ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ)ದ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಹೇಳಿದರು.

    ನಗರದ ಎಐಎಸ್‌ಇಸಿ ಜಿಲ್ಲಾ ಕಚೇರಿಯಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಆನ್‌ಲೈನ್ ಸಮಾವೇಶದಲ್ಲಿ ಮಾತನಾಡಿದರು. ನಾಲ್ಕು ವರ್ಷದ ಪದವಿ ಪದ್ಧತಿಯು ವಿದೇಶಕ್ಕೆ ತೆರಳುವ ಕೆಲವರಿಗೆ ಅನುಕೂಲವಾಗಲಿದೆಯೇ ಹೊರತು ಬಹುದೊಡ್ಡ ಸಂಖ್ಯೆಯ ಬಡ ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗಲ್ಲ. ಈ ನೀತಿಯಲ್ಲಿ ಬಹುಹಂತದ ತೇರ್ಗಡೆ ಇರುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಜ್ಞಾನ ನೀಡಲಾರದು ಮತ್ತು ಉದ್ಯೋಗಕ್ಕೆ ಸಮರ್ಪಕ ಅರ್ಹ ಅಭ್ಯರ್ಥಿಗಳನ್ನು ಸಹ ಸೃಷ್ಟಿಸಲಾರದು ಎಂದರು.

    ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ ಮಾತನಾಡಿ, ಈಗಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸದೆ, ಹಠಾತ್ತನೆ ಇಂಥ ಬದಲಾವಣೆ ತರುವುದು ಸರಿಯಲ್ಲ. ಶಿಕ್ಷಣ ತಜ್ಞರ, ಪಾಲಕರ, ಉಪನ್ಯಾಸಕರ ಅಭಿಪ್ರಾಯ ಪಡೆದು ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts