More

    ಮೊಟ್ಟೆ ಬದಲಾಗಿ ಮಕ್ಕಳಿಗೆ ಸಸ್ಯಹಾರ ವಿತರಿಸುವಂತೆ ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ ಒತ್ತಾಯ

    ಬಳ್ಳಾರಿ: ಶಾಲಾ ಮಕ್ಕಳಿಗೆ ಸರ್ಕಾರ ಮೊಟ್ಟೆ ನೀಡುವ ಬದಲು ಶುದ್ಧ್ದ ಸಸ್ಯಹಾರ ಪದಾರ್ಥವನ್ನು ವಿತರಿಸುವಂತೆ ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದ ಪದಾಧಿಕಾರಿಗಳು ನಗರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಪ್ರಧಾನ ಸಂಚಾಲಕ ದಯಾನಂದ ಸ್ವಾಮಿ ಮಾತನಾಡಿ, ಜ್ಞಾನ ದೇಗುಲ ಮತ್ತು ಪವಿತ್ರ ಮಂದಿರಗಳು ಆದ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಿಸುತ್ತಿರುವುದನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಮೊಟ್ಟೆ ಬದಲಾಗಿ ಅಧಿಕ ಪೌಷ್ಟಿಕತೆಯುಳ್ಳ ಆರೋಗ್ಯಕರವಾದ ಏಕರೂಪ ಶುದ್ಧ್ದ ಸಸ್ಯಹಾರ ಪದಾರ್ಥವನ್ನು ನೀಡಬೇಕು. ಕೇವಲ ಏಳು ಜಿಲ್ಲೆಗಳಿಗೆ ಸೀಮಿತ ಮಾಡದೇ ರಾಜ್ಯಾದ್ಯಂತ ವಿಸ್ತರಿಸಬೇಕು ಎಂದರು.

    ಮೊಟ್ಟೆ ನೀಡಿದರೆ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಲಿದೆ ಎಂದು ಹೇಳುತ್ತಿರುವ ಸರ್ಕಾರ ಅದರ ಬದಲಾಗಿ ರೈತರು ಬೆಳೆಯುವ ಬೆಲ್ಲ, ಕಡಲೆಕಾಯಿ (ಶೇಂಗಾ), ದ್ವಿದಳ ಧಾನ್ಯ ಹಾಗೂ ಸಿರಿಧಾನ್ಯಗಳನ್ನು ನೇರವಾಗಿ ಖರೀದಿಸಿ ಮಕ್ಕಳಿಗೆ ಕೊಡುವುದರಿಂದ ಲಕ್ಷಾಂತರ ರೈತರಿಗೆ ಅನೂಕೂಲವಾಗಲಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಕಾಣಲು ಮಧ್ಯಾಹ್ನದ ಬಿಸಿ ಊಟದಲ್ಲಿ ಕಳಪೆ ಆಹಾರವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಒಕ್ಕೂಟದ ಪದಾಧಿಕಾರಿಗಳಾದ ಬಿ.ಎಂ.ಶಿವಮೂರ್ತಿ, ಕೆ.ವಿ.ರವಿ, ಜವಳಿ ತಿಪ್ಪೇಸ್ವಾಮಿ, ರಾಜೇಶ್ವರಿ, ನಾಗಮಣಿ, ಶಿವಶಂಕರ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts