More

    ಜೀವನಶೈಲಿ ಬದಲಾವಣೆಯಿಂದ ಕಾಯಿಲೆ ನಿಯಂತ್ರಣ : ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ ವಿಶ್ವಾಸ

    ಬಳ್ಳಾರಿ: ಸಕ್ಕರೆ ಕಾಯಿಲೆಯನ್ನು ನಿರ್ಲಕ್ಷೃಮಾಡಬಾರದು. ನಿರ್ಲಕ್ಷೃ ಮಾಡಿದರೆ ಮಿದುಳು, ಹೃದಯ ಹಾಗೂ ಮೂತ್ರಪಿಂಡ ವೈಫಲ್ಯವಾಗುವ ಅಪಾಯವಿದೆ. ಈ ಕಾಯಿಲೆ ಬಗ್ಗೆ ಭಯ ಬಿಟ್ಟು ಎಚ್ಚರ ಇರಬೇಕು ಎಂದು ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ ಹೇಳಿದರು.

    ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಾಳೆ ರಕ್ಷಣೆಗಾಗಿ ಶಿಕ್ಷಣ ಎಂಬ ಘೋಷ ವಾಕ್ಯವಿದ್ದ ಶ್ವೇತ ವರ್ಣದ ಟೀ ಶರ್ಟ್ ಧರಿಸಿದ್ದ ಭಾರತೀಯ ವೈದ್ಯಕೀಯ ಸಂಘ ಜಿಲ್ಲಾ ಘಟಕ ವೈದ್ಯರ ತಂಡದ ಜಾಗೃತಿ ಜಾಥಾಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

    ಐಎಂಎ ಕಾರ್ಯದರ್ಶಿಗಳಾದ ಡಾ.ನಿತೀಶ್ ಕಟಾರಿಯಾ, ಡಾ.ನಿಜಾಮುದ್ದೀನ್ ಮತ್ತು ಡಾ.ದೇವೇಂದ್ರಪ್ಪ ಮಾತನಾಡಿ, ನಮ್ಮ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಕಾಯಿಲೆ ನಿಯಂತ್ರಿಸಬಹುದು. ಪ್ರತಿಯೊಬ್ಬರೂ ಆರು ತಿಂಗಳಿಗೊಮ್ಮೆ ಸಕ್ಕರೆ ಕಾಯಿಲೆ ಇದೆಯೇ ಎಂಬ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಕ್ಕರೆ ಕಾಯಿಲೆ ಇದ್ದರೆ ವೈದ್ಯರ ಸಲಹೆ ಪಡೆದು ಮಿತವಾದ ಆಹಾರ ಹಾಗೂ ನಿಯಮಿತವಾಗಿ ಔಷಧ ಸೇವಿಸಬೇಕು ಎಂದು ಸಲಹೆ ನೀಡಿದರು.

    ಭಾರತೀಯ ವೈದ್ಯಕೀಯ ಸಂಘ ಬಳ್ಳಾರಿ ಘಟಕದ ಅಧ್ಯಕ್ಷ ಡಾ.ಬಿ.ಕೆ. ಸುಂದರ್ ಮಾತನಾಡಿ, ಪ್ರತಿ ಒಂಬತ್ತು ಜನರಲ್ಲಿ ಒಬ್ಬರಿಗೆ ಸಕ್ಕರೆ ಕಾಯಿಲೆ ಇದ್ದೇ ಇರುತ್ತದೆ. ಅದರ ಪರಿಣಾಮ ಆರಂಭದಲ್ಲಿ ಗೊತ್ತಾಗುವುದಿಲ್ಲ. ಉಲ್ಬಣಗೊಂಡ ಬಳಿಕ ತೊಂದರೆ ಕೊಡುತ್ತದೆ. ಮೂತ್ರ ವಿಸರ್ಜನೆ ಜಾಸ್ತಿ ಆಗುತ್ತಿಲ್ಲ. ಹಸಿವು ಜಾಸ್ತಿ ಇಲ್ಲ. ಹೀಗಾಗಿ ಸಕ್ಕರೆ ಕಾಯಿಲೆ ಇಲ್ಲ ಎಂಬ ನಿಲುವಿಗೆ ಅಂಟಿಕೊಳ್ಳದೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ತಂಡದ ಪ್ರಮುಖರಾದ ಡಾ.ರೇಣುಕಾ ಮಂಜುನಾಥ್, ಡಾ.ಚಂದ್ರಶೇಖರ್ ಪಾಟೀಲ್, ಡಾ.ಭರತ್ ಮಹಿಪಾಲ್, ಡಾ.ನಾರಾಯಣ ಆಚಾರ್ಯ, ಡಾ.ಸೋಮನಾಥ್, ಡಾ.ಗೋವಿಂದರೆಡ್ಡಿ, ಡಾ.ಸುಧಾಕರ್, ಡಾ. ಪರ್ವತ ರೆಡ್ಡಿ, ಡಾ.ಹರೀಶ್, ಡಾ.ಶ್ರೀನಿವಾಸುಲು, ಡಾ.ಶಂಕರ್, ಡಾ.ಪ್ರಣೀತಾ ಅಜಯ್, ಡಾ.ರಾಧಿಕಾ ಆಚಾರ್ಯ, ಡಾ.ಅನುಪಮಾ ಸುಂದರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts