More

    ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ತುಕುಡೆ..ತುಕಡೆ ಪಕ್ಷ; ಅಮಿತ್ ಷಾ

    ಬಳ್ಳಾರಿ: ಚುನಾವಣೆ ಹಿನ್ನೆಲೆ ಕರ್ನಾಟಕಕ್ಕೆ ಬಿಜೆಪಿ ಕೇಂದ್ರ ನಾಯಕರ ಭೇಟಿ ಹೆಚ್ಚಾಗುತ್ತಿದೆ. ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಗಣಿನಾಡು ಬಳ್ಳಾರಿಗೆ ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್​​ ವಿರುದ್ಧ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ನಾವು ಅಶ್ವಮೇಧ ಕುದುರೆ ಬಿಟ್ಟಿದ್ದೇವೆ, ಕಾಂಗ್ರೆಸ್​ಗೆ ದಮ್ಮು ತಾಕತ್ ಇದ್ದರೆ ಕಟ್ಟಿ ಹಾಕಿ; ಶ್ರೀರಾಮುಲು ಸವಾಲು

    ಬಳ್ಳಾರಿ ಜಿಲ್ಲೆಯ ಸಂಡೂರಿನ ಎಸ್‌ಆರ್‌ಎಸ್‌ ಶಾಲಾ ಮೈದಾನದಲ್ಲಿ ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಹನುಮ ಜನ್ಮಸ್ಥಳದ ನೆಲ ಹೀಗಾಗಿ ಹನುಮನಿಗೆ ನಮನ ಸಲ್ಲಿಸುತ್ತೇನೆ. ನಾನು ಬರುವುದು ತಡವಾಗಿದ್ದಕ್ಕೆ ಕ್ಷೇಮೆ ಕೇಳುತ್ತೇನೆ. ತಡವಾದ್ರೂ ಸಂಡೂರು ಜನರು ಇದ್ದೀರಾ, ಹೀಗಾಗಿ ಸಂಡೂರಿನಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ರಾಹುಲ್ ಗಾಂಧಿ ಅವರ ನೇತೃತ್ವದ ತುಕುಡೆ..ತುಕಡೆ ಪಕ್ಷವಾಗಿದೆ. ಮೋದಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸಿದ್ದರಾಮಯ್ಯ, ಡಿಕೆಶಿ ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ. ಇವರ ಗದ್ದಲದಲ್ಲಿ ಕರ್ನಾಟಕದ ಕಲ್ಯಾಣ ಆಗೋದಿಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕುಟುಂಬ ರಾಜಕೀಯ ಮಾಡುತ್ತವೆ. ಹೀಗಾಗಿ ಕರ್ನಾಟಕದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಪೂರ್ಣ ಬಹುಮತ ನೀಡಲು ಸಂಡೂರಿನ ಜನರಲ್ಲಿ ಮನವಿ ಮಾಡಿದ್ದಾರೆ.

    ಮೋದಿ ಅವರು ಪಿಎಫ್​ಐ ಬಂದ್ ಮಾಡಿದಾಗ ಕಾಂಗ್ರೆಸ್ ಪಿಎಫ್​ಐ ಮೇಲಿನ ಪ್ರಕರಣ ವಾಪಸ್ ಪಡೆದಿತ್ತು. ದಶಕಗಳಿಂದ ಕಾಂಗ್ರೆಸ್ ಅಳಿದ್ರು‌ ಯಾವುದೇ ಕೆಲಸ ಮಾಡಲಿಲ್ಲ. ಅದ್ರೇ ಇದೀಗ ಮೋದಿ ರಾಮ ಮಂದಿರ ಕಟ್ಟಿದ್ದಾರೆ. ಪಾಕಿಸ್ತಾನದವರು ಅ್ಯಟಾಕ್ ಮಾಡಿದ್ರು ಸೋನಿಯಾ ಗಾಂಧಿ ಹಾಗೂ ಮನಮೋಹನ ಸಿಂಗ್ ತುಟಿ ಬಿಚ್ಚಲಿಲ್ಲ. ಆದ್ರೇ ಮೋದಿ ಇದ್ದಾಗ ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನ ನುಗ್ಗಿ ಹೊಡೆದಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನೂ ಓದಿಗಂಡನ ತಂಗಿಯನ್ನೇ ಮದುವೆಯಾದ 2 ಮಕ್ಕಳ ತಾಯಿ!

    ಕರೊನಾ ಲಸಿಕೆಯನ್ನು ಉಚಿತವಾಗಿ ನೀಡಿದ್ದೇವೆ. ಸಾಕಷ್ಟು ಯೋಜನೆಯನ್ನು ಬಡವರಿಗೆ ಮೋದಿ ನೀಡಿದ್ದಾರೆ. ಮೋದಿ ರೈತರ ಪರವಾಗಿದ್ದು, ರೈತರಿಗೆ ಆರು ಸಾವಿರ ಹಣ ಹಾಕುತ್ತಿದ್ದಾರೆ. ಯಡಿಯೂರಪ್ಪ, ಬೊಮ್ಮಯಿ ಸರ್ಕಾರ ಸಾಕಷ್ಟು ಯೋಜನೆಯನ್ನು ಜಾರಿಗೆ ತಂದಿದ್ದಾರೆ.
    ಕಾಶ್ಮೀರ ನಮ್ಮದು ಅಲ್ವ..? 370 ರದ್ದು ಮಾಡಿದ್ದು, ಸರಿಯಾಗಿದೆಯೋ ಇಲ್ಲವೋ? ಆದರೆ ವಿರೋಧಿಗಳು ರದ್ದು ಮಾಡಿದ್ದು ತಪ್ಪು ಎಂದು ಹೇಳಿದ್ದರು. 370 ರದ್ದು ಮಾಡಿದರೆ ರಕ್ತದ ಹೊಳೆ ಹರಿಯುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು. ಆದರೆ ಮೋದಿ ಅವರು ಯಾರ ಮಾತು ಕೇಳಲಿಲ್ಲ. 370 ರದ್ದು ಮಾಡಿದ್ದರಿಂದ ಕಾಶ್ಮೀರ ನಮ್ಮದಾಗಿದೆ. ಮೋದಿ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಡಿ ಎಂದು ಷಾ ಹೇಳಿದ್ದಾರೆ.

    ಐದು ವರ್ಷ ಭ್ರಷ್ಟಾಚಾರ ಮುಕ್ತ ಸರ್ಕಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಂ.1 ರಾಜ್ಯ ಮಾಡುವ ಗುರಿ ಇದೆ. ದೆಹಲಿಯಲ್ಲಿ ಕಾಂಗ್ರೆಸ್​ನ ಎಟಿಎಂ ತಂಡದ ಸದಸ್ಯರು ಇದ್ದಾರೆ. ಸಿದ್ದರಾಮಯ್ಯ ಸರ್ಕಾರ ಹಣ ಹೊಡೆದು ದೆಹಲಿ ಎಟಿಎಂಗೆ ತುಂಬುತ್ತಿದ್ದರು. ಕಾಂಗ್ರೆಸ್​​ಗೆ ಮತ ಹಾಕಿದರೆ ಜೆಡಿಎಸ್​ಗೆ, ಡಿಎಸ್​ಗೆ ವೋಟ್​​ ಹಾಕಿದರೆ ಕಾಂಗ್ರೆಸ್​ಗೆ ಹೋಗುತ್ತದೆ ಎಂದು ಹೇಳಿದ್ದಾರೆ.

    ನಾವು ಅಶ್ವಮೇಧ ಕುದುರೆ ಬಿಟ್ಟಿದ್ದೇವೆ, ಕಾಂಗ್ರೆಸ್​ಗೆ ದಮ್ಮು ತಾಕತ್ ಇದ್ದರೆ ಕಟ್ಟಿ ಹಾಕಿ; ಶ್ರೀರಾಮುಲು ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts