More

    ಬಂದಾದ ಹಾಸ್ಟೆಲ್, ಶುರುವಾದ ಸಮಸ್ಯೆ; ಶಾಕ್ ನೀಡಿದ ಜಿಲ್ಲಾಡಳಿತ ಆದೇಶ, ವಿದ್ಯಾರ್ಥಿಗಳ ತೀವ್ರ ಪರದಾಟ

    ಬಳ್ಳಾರಿ: ಜಿಲ್ಲೆಯಲ್ಲಿ ಕರೊನಾ ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಬೆನ್ನಲ್ಲೇ ವಸತಿ ನಿಲಯಗಳಿಗೆ ಕೂಡ ರಜೆ ನೀಡಿದ ಕಾರಣ ನಗರದ 20ಕ್ಕೂ ಹೆಚ್ಚು ವಸತಿ ನಿಲಯಗಳ ಸಾವಿರಾರು ವಿದ್ಯಾರ್ಥಿಗಳು ತಮ್ಮ ಲಗೇಜ್‌ಗಳೊಂದಿಗೆ ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಪರದಾಡುವಂತಾಗಿದೆ.

    ಸರ್ಕಾರಿ, ಖಾಸಗಿ ಶಾಲೆ-ಕಾಲೇಜುಗಳು, ವಸತಿ ಶಾಲೆಗಳು, ಚಿತ್ರಮಂದಿರಗಳನ್ನು ಸಂಪೂರ್ಣ ಜ.16ರಿಂದ 23ರ ವರೆಗೆ ಮುಚ್ಚಲು ಡಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಹಾಸ್ಟೆಲ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಬಸ್ ಹಿಡಿದು ಊರು ಸೇರಿದ್ದು, ಇಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆ ಲಾಡ್ಜ್‌ನತ್ತ ಮುಖ ಮಾಡಿದ್ದಾರೆ.

    ಪರದಾಟ: ನಗರದ ಕೇಂದ್ರ ಮತ್ತು ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಲಗೇಜು ಸಮೇತ ಗುಂಪು ಗುಂಪಾಗಿ ನಿಂತು ಬಸ್‌ಗಾಗಿ ಕಾದು ಕುಳಿತಿರುವುದು ಕಂಡು ಬಂತು. ಇಂದಿನಿಂದ ವಸತಿ ನಿಲಯದಲ್ಲಿ ಊಟ ಇರುವುದಿಲ್ಲ ಎಂದು ವಾರ್ಡ್‌ನ್ ಹೇಳಿದ್ದಾರೆ. ಈ ಸೋಂಕು ಯಾವಾಗ ನಿಯಂತ್ರಣಕ್ಕೆ ಬರುತ್ತದೋ ಗೊತ್ತಿಲ್ಲ. ಮನೆಯಲ್ಲಾದರೂ ಓದಿಕೊಳ್ಳಲು ಎಲ್ಲ ಲಗೇಜ್ ಹೊತ್ತು ಸಾಗುತ್ತಿದ್ದೇವೆ ಎಂದು ಕೆಲ ವಿದ್ಯಾರ್ಥಿಗಳು ತಿಳಿಸಿದ್ದಾರೆ.


    ಕೋವಿಡ್ ಭೀತಿ..!
    ವಸತಿ ನಿಲಯಗಳನ್ನು ದಿಢೀರ್ ಬಂದ್ ಮಾಡಿದ್ದರಿಂದ ಸಾವಿರರು ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದು, ಇವರ‌್ಯಾರು ಕರೊನಾ ಟೆಸ್ಟ್ ಮಾಡಿಸಿಕೊಂಡಿಲ್ಲ. ಯಾರಿಗಾದರೂ ಸೊಂಕು ತಗುಲಿದ್ದರೆ, ಅವರಿಂದ ಅವರ ಮನೆ, ಗ್ರಾಮದಲ್ಲಿ ಕರೊನಾ ಹರಡಲಿದೆ ಎಂಬುದು ಜನರ ಅಂದಾಜು.


    ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿ ಬರುವ ವಸತಿ ಶಾಲೆಗಳು, ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು ಮನೆಗೆ ಹೋಗಲು ಇಚ್ಛಿಸದೇ ಇದ್ದರೆ ಅಂಥವರಿಗೆ ಹಾಸ್ಟೇಲ್‌ನಲ್ಲೇ ತಂಗಲು, ಊಟೋಪಚಾರ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
    | ಪವನ್‌ಕುಮಾರ್ ಮಾಲಪಾಟಿ ಬಳ್ಳಾರಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts