More

    ಹೆಚ್ಚಿನ ಬೆಲೆಗೆ ಮೆಣಸಿನಕಾಯಿ ಬೀಜ ಮಾರಾಟ: ಬಳ್ಳಾರಿ ಡಿಸಿ ಕಚೇರಿಗೆ ರೈತರಿಂದ ಮುತ್ತಿಗೆ ಯತ್ನ

    ಬಳ್ಳಾರಿ: ಮೆಣಸಿನಕಾಯಿ ಬೀಜ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆಂದು ಆರೋಪಿಸಿ ಜಿಲ್ಲೆಯ ಹಲವು ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

    ಕರೊನಾ ಸಂಕಷ್ಟದಲ್ಲಿ ಬೀಜಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೆಲ ಡೀಲರ್‌ಗಳು ನಿಗದಿಗಿಂತ ಹೆಚ್ಚಿನ ದರಕ್ಕೆ ಮೆಣಸಿನಕಾಯಿ ಸೇರಿ ನಾನಾ ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸೀಜಂಟ ಕಂಪನಿಯ ಬೀಜ ಸೇರಿ ಇತರ ಬೀಜವನ್ನು ಎರಡೆರಡು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ವಾಸ್ತವವಾಗಿ 1 ಕ್ವಿಂಟಲ್ ಮೆಣಸಿನಕಾಯಿ ಬೀಜದ ಬೆಲೆ 65 ಸಾವಿರ ರೂ. ಇದೆ. ಆದರೆ, 1 ಲಕ್ಷ ರೂ.ಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts