More

    ಮುಹೂರ್ತ ಫಿಕ್ಸ್ ಮಾಡಲಿ, ಬಳ್ಳಾರಿಯಲ್ಲಿ ಡಿಕೆಶಿ ಹೇಳಿಕೆ

    ಬಳ್ಳಾರಿ: ಯಾರು ಬಿಜೆಪಿಗೆ ಬರತಾರೋ ಅವರಿಗೆ ಮುಹೂರ್ತ ಫಿಕ್ಸ್ ಮಾಡಲಿ. ನನ್ನ ಮುಹೂರ್ತ ಫಿಕ್ಸ್ ಮಾಡೋದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಸೋಮಶೇಖರೆಡ್ಡಿ ಹೇಳಿಕೆಗೆ ಟಾಂಗ್ ಕೊಟ್ಟರು.

    ಭಾರತ್ ಜೋಡೊ ಯಾತ್ರೆ ಹಿನ್ನೆಲೆ ನಗರದಲ್ಲಿ ಹಮ್ಮಿಕೊಳ್ಳುವ ಸಮಾವೇಶದ ಸ್ಥಳವನ್ನು ವೀಕ್ಷಿಸಿದ ಬಳಿಕ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿ, ಆನಂದಸಿಂಗ್, ನಾಗೇಂದ್ರ, ಭೀಮಾನಾಯ್ಕ ಎಲ್ಲಿದ್ದರು. ಎಲ್ಲರೂ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ ಎಂದರು. ಬಿಜೆಪಿಯವರು ಕಬ್ಬಿಣದ ಕತ್ತರಿಯಿಂದ ಕತ್ತರಿಸುತ್ತಾರೆ. ರಾಹುಲ್ ಗಾಂಧಿ ಅವರು ಸೂಜಿಯಿಂದ ಮನಸ್ಸುಗಳನ್ನ ಬೆಸೆಯುತ್ತಾರೆ. ಒಡೆದ ಮನಸ್ಸುಗಳನ್ನ ಹೊಲಿಯಲು ಬರುತ್ತಿದ್ದಾರೆ.

    ಸೆ.30 ರಿಂದ ರಾಜ್ಯಕ್ಕೆ ಯಾತ್ರೆ ಆರಂಭವಾಗಲಿದೆ. ಯಾತ್ರೆಯಲ್ಲಿ ಒಂದೇ ಒಂದು ಸಮಾವೇಶ ಅದು ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದೇವೆ. ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆಯಿಂದ ಸಾರ್ವಜನಿಕ ಬೃಹತ್ ಸಭೆ ಆರಂಭವಾಗಲಿದೆ. ಎಐಸಿಸಿ ಚುನಾವಣೆ ನಡೆದರೆ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಮತದಾನ ಮಾಡಲಿದ್ದಾರೆ. 17 ರಂದು ಮತದಾನ ಮಾಡಬೇಕಾಗುತ್ತದೆ. ಯಾತ್ರೆಯಲ್ಲಿ ಹೆಚ್ಚು ಕಮ್ಮಿಯಾದರೆ ಒಂದು ದಿನ ಹಿಂದೆ ಮುಂದೆ ಆಗಬಹುದು. ಸಮಾವೇಶದಲ್ಲಿ ಎಷ್ಟು ಜನರು ಭಾಗಿ ಆಗುತ್ತಾರೆಂದು ನಿಮ್ಮ ಕ್ಯಾಮರಾ, ನಿಮ್ಮ ಕಣ್ಣು ಸಮಾವೇಶಕ್ಕೆ ಸಾಕ್ಷಿಯಾಗಲಿದೆ. ನಾಲ್ಕು ದಿಕ್ಕಿಗಳಲ್ಲೂ 20 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ. ರಾಹುಲ್ ಗಾಂಧಿ ಎರಡು ದಿನ ಬಳ್ಳಾರಿಯಲ್ಲಿ ಇರಲಿದ್ದಾರೆ. ಅವರದ್ದೆ ಕ್ಯಾರವ್ಯಾನ್ ಇದೆ. ಅವರು ಯಾರ ಮನೆಯಲ್ಲೂ ಮಲಗಲ್ಲ ಎಂದರು.

    ಅದ್ಧೂರಿ ಸ್ವಾಗತ: ಈ ಮುಂಚೆ ನಗರಕ್ಕೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸೇರಿದಂತೆ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ನಗರದ ಹೊರವಲಯದಲ್ಲಿನ ಶಾಂತಿನಗರದ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಅಲ್ಲಿಂದ ಅವರನ್ನು ಸುಧಾ ಕ್ರಾಸ್ ವೃತ್ತಕ್ಕೆ ಮೆರವಣಿಗೆ ಮೂಲಕ ಕರೆ ತರಲಾಯಿತು. ಹತ್ತು ಜೆಸಿಬಿಗಳ ಮೂಲಕ ಹತ್ತು ಕ್ವಿಂಟಾಲ್‌ಗಳಿಗೂ ಅಧಿಕ ಬೃಹತ್ ಹೂವಿನ ಹಾರ ಹಾಕಿ, ಹೂವಿನ ರಾಶಿಯ ಮಳೆಗೆರೆದು ಸ್ವಾಗತ ಕೋರಿದರು. ಈವೇಳೆ ಎಐಸಿಸಿ ಮುಖಂಡ ಶ್ರೀಧರ ಬಾಬು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮ್ಮದ್, ರಾಜ್ಯಸಭಾ ಸದಸ್ಯ ಸೈಯ್ಯದ್ ನಾಸೀರ್ ಹುಸೇನ್, ಶಾಸಕ ಬಿ.ನಾಗೇಂದ್ರ, ಮಾಜಿ ಸಚಿವ ಎಂ.ದಿವಾಕರಬಾಬು, ಅಲ್ಲಂ ವೀರಭದ್ರಪ್ಪ, ಮೇಯರ್ ಎಂ.ರಾಜೇಶ್ವರಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts