More

    ಬಿಡುಗಡೆಯಾಯ್ತು ‘ಬೆಲ್​ ಬಾಟಮ್​’ ಟ್ರೇಲರ್​ … ಕಥೆ ಏನು ಗೊತ್ತಾ?

    ಮುಂಬೈ: ಅಕ್ಷಯ್​ ಕುಮಾರ್​ ಅಭಿನಯದ ‘ಬೆಲ್​ ಬಾಟಂ’ ಚಿತ್ರವು ಆಗಸ್ಟ್​ 19ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ, ಮಂಗಳವಾರ ಸಂಜೆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಯೂಟ್ಯೂಬ್​ನ ಪೂಜಾ ಎಂಟರ್​ಟೈನ್​ಮೆಂಟ್​ ಚಾನಲ್​ನಲ್ಲಿ ಈ ಟ್ರೇಲರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಬದುಕಿನ ಕಹಿ ಅನುಭವಗಳನ್ನು ಬಿಚ್ಚಿಟ್ಟ ಶ್ರೀರಾಮಚಂದ್ರನ ಬೆಡಗಿ: ಆತ್ಮಹತ್ಯೆಗೆ ಯತ್ನಿಸಿದ್ದರಂತೆ ನಟಿ ಮೋಹಿನಿ!

    1984ರಲ್ಲಿ ನಡೆದ ಇಂಡಿಯನ್​ ಏರ್​ಲೈನ್ಸ್​ ಪ್ಲೇನ್​ ಹೈಜಾಕ್​ ಪ್ರಕರಣವನ್ನು ಈ ಚಿತ್ರ ಆಧರಿಸಿದ್ದು, ಚಿತ್ರದಲ್ಲಿ ಅಕ್ಷಯ್​ ಕುಮಾರ್​ ರಾ ಏಜೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೂ ‘ಬೆಲ್​ ಬಾಟಂ’ಗೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಅವರ ಕೋಡ್​ ನೇಮ್​ ‘ಬೆಲ್​ ಬಾಟಂ’ ಎಂದಾಗಿದ್ದು, ಈ ಪ್ರಕರಣವನ್ನು ಭಾರತೀಯರು ಹೇಗೆ ಬೇಧಿಸುತ್ತಾರೆ ಎಂದು ತೋರಿಸಲಾಗಿದೆ.

    ಇದನ್ನೂ ಓದಿ: “ನಿನ್ನ ಜೊತೆ ನಾನಿದ್ದೇನೆ” – ಶಿಲ್ಪಾ ಶೆಟ್ಟಿಗೆ ಧೈರ್ಯ ತುಂಬಿದ ಸೋದರಿ

    ‘ಬೆಲ್​ ಬಾಟಂ’ ಚಿತ್ರವನ್ನು ರಂಜಿತ್​ ತಿವಾರಿ ನಿರ್ದೇಶಿಸಿದ್ದು, ಪೂಜಾ ಎಂಟರ್​ಟೈನ್​ಮೆಂಟ್​ ಸಂಸ್ಥೆಯಡಿ ವಾಶು ಭಾಗ್ನಾನಿ ಮತ್ತು ಜಾಕಿ ಭಾಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್​ ಕಥೆಯಾಗಿದ್ದು ಅಕ್ಷಯ್​ ಕುಮಾರ್ ಜತೆಗೆ ವಾಣಿ ಕಪೂರ್​, ಲಾರಾ ದತ್ತ, ಹ್ಯೂಮಾ ಖುರೇಷಿ ಸೇರಿ ಹಲವರು ನಟಿಸಿದ್ದಾರೆ.

    Bell

    ಅಲ್ಲು ಅಭಿಮಾನಿಗಳಿಗೆ ಸಿಹಿ ಸುದ್ದಿ… ‘ಪುಷ್ಪ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts