More

    ಇಡೀ ಬೆಳವಡಿ ಗ್ರಾಮವೇ ಸಂಪೂರ್ಣ ಬಂದ್; ಪ್ರತಿಭಟನೆಗೆ ಕಾರಣವಿದು..

    ಬೆಳಗಾವಿ: ವಿಶ್ವದಲ್ಲೇ ಮೊದಲ ಮಹಿಳಾ ಸೈನ್ಯ ಕಟ್ಟಿ ನಾಡು ನುಡಿ ನೆಲ ಜಲಗಳ ರಕ್ಷಣೆಗೆ ಹೋರಾಡಿದ ವೀರವನಿತೆ ಬೆಳವಡಿ ಮಲ್ಲಮ್ಮ ಹೆಸರಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಬೆಳವಡಿ ಭಾಗದ ಸಮಗ್ರ ಪ್ರಗತಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಇಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

    ಮಲ್ಲಮ್ಮ ಸರ್ಕಲ್ ಬಳಿಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ನೀಡಿದ್ದರು. ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಕೆಎಸ್​ಆರ್​​ಟಿಸಿ ಬಸ್ ಸೇರಿದಂತೆ ಎಲ್ಲ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

    ಬೆಳಗ್ಗೆ ಬೆಳವಡಿಯ ಜಾಗೃತ ಶ್ರೀ ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಹೋರಾಟಕ್ಕೆ ಚಾಲನೆ ನೀಡಿ ಅಲ್ಲಿಂದ ಮೆರವಣಿಗೆ ಮೂಲಕ ಮಲ್ಲಮ್ಮ ವೃತ್ತದ ಬಳಿಯ ರಾಣಿ ಮಲ್ಲಮ್ಮಳ ಪುತ್ಥಳಿಗೆ ಪೂಜ್ಯರಿಂದ ಮಾಲಾರ್ಪಣೆ ಮಾಡಿಸಿ ಅಲ್ಲಿಯೇ ನಿರ್ಮಿಸಲಾಗಿರುವ ಹೋರಾಟ ವೇದಿಕೆಯಲ್ಲಿ ಪ್ರತಿಭಟನೆ ಆರಂಭಿಸಲಾಗಿದೆ. ಹೋರಾಟವನ್ನು ಬೆಂಬಲಿಸಿ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾಹಿತಿಗಳು ಮಾತನಾಡಿದರು.

    ಜಿಟಿ ಜಿಟಿ ಮಳೆ ಸುರಿದರೂ ಪ್ರತಿಭಟನೆ ನಡೆಸಲಾಯಿತು. ಎಸಿ ಶಶಿಧರ ಬಗಲಿ, ತಹಶೀಲ್ದಾರ ಬಸವರಾಜ ನಾಗರಾಳ ಅವರು ಮೇಲಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ, ಪ್ರತಿಭಟನೆ ಹಿಂಪಡೆಯುವಂತೆ ವಿನಂತಿಸಿಕೊಂಡರು. ಜಿಲ್ಲಾಧಿಕಾರಿ ಬಂದು ಪ್ರಾಧಿಕಾರ ರಚನೆ ಕುರಿತು ಆಶ್ವಾಸನೆ ನೀಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

    ಇಡೀ ಬೆಳವಡಿ ಗ್ರಾಮವೇ ಸಂಪೂರ್ಣ ಬಂದ್; ಪ್ರತಿಭಟನೆಗೆ ಕಾರಣವಿದು..ದೊಡವಾಡದ ಜಡಿಸಿದ್ದೇಶ್ವರ ಸ್ವಾಮೀಜಿ, ಹೂಲಿ ಮಠದ ಶಿವಮಹಾಂತ ಶಿವಾಚಾರ್ಯ, ಏಣಗಿ ಬಂಗಾರಜ್ಜನವರು, ಆರಾದ್ರಿಮಠದ ಮಹಾಂತಶಾಸ್ತ್ರೀ, ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಜಗದೀಶ್ ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಕಸಾಪ ಜಿಲ್ಲಾಧ್ಯಕ್ಷ ಮಂಗಳಾ ಮೆಟಗುಡ್ಡ, ಹೋರಾಟಗಾರರಾದ ಡಾ. ಆರ್.ಬಿ. ಪಾಟೀಲ, ನ್ಯಾಯವಾದಿ ಸಿ.ಎಸ್. ಚಿಕ್ಕನಗೌಡರ, ಸಾಹಿತಿ ಯ.ರು. ಪಾಟೀಲ, ಆಮ್ ಆದ್ಮಿ ಪಕ್ಷದ ಬಿ.ಎಂ. ಚಿಕ್ಕನಗೌಡರ, ಪ್ರಕಾಶ ಹುಂಬಿ, ಸಿ.ಕೆ.ಮೆಕ್ಕೆದ, ಹಬೀಬ ಸದಿಲ್ಲೆದಾರ ಹಾಗೂ ಎಲ್ಲ ಕನ್ನಡ ಪರ ಸಂಘಟನೆಗಳು, ರೈತ, ದಲಿತ ಸಂಘಟನೆಗಳು, ಜಿಲ್ಲಾ ಲೇಖಕೀಯರ ಸಂಘದ ಪದಾಧಿಕಾರಿಗಳು ಸೇರಿ ನೂರಾರು ಗ್ರಾಮಸ್ಥರು ಇದ್ದರು.

    ಇಡೀ ಬೆಳವಡಿ ಗ್ರಾಮವೇ ಸಂಪೂರ್ಣ ಬಂದ್; ಪ್ರತಿಭಟನೆಗೆ ಕಾರಣವಿದು..

    ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಜುಲೈ 7ಕ್ಕೆ ಕಿತ್ತೂರ ಚನ್ನಮ್ಮ ಪ್ರಾಧಿಕಾರ ಸಭೆಯನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರು ಕರೆದಿದ್ದು, ಅಂದು ತಮ್ಮ ಮನವಿ ಕುರಿತು ಚರ್ಚಿಸಿ ರಾಣಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಬಗ್ಗೆ ಚರ್ಚಿಸುವ ಆಶ್ವಾಸನೆ ನೀಡಿದರು. ಆ ಬಳಿಕವಷ್ಟೇ ಪ್ರತಿಭಟನಾಕಾರರು ಬೆಳವಡಿ ಬಂದ್​ ಮುಕ್ತಾಯಗೊಳಿಸಿದರು.

    ಸಮುದ್ರದೊಳಕ್ಕೇ ಹೊಕ್ಕಿದ್ದ ಕಾರು; ನಾಪತ್ತೆಯಾಗಿದ್ದವನ ಶವ ಇಂದು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts