More

    ಕೆಲಸದಲ್ಲಿ ಬದ್ಧತೆ ಇರಲಿ: ಎಸ್.ಆರ್. ಪಾಟೀಲ

    ಬೀಳಗಿ: ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ಮಹಾತ್ಮ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್, ಸುಖಿ ರಾಜ್ಯದ ಕನಸು ನನಸಾಗಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು.

    ತಾಲೂಕಿನ ಕುಂದರಗಿ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಸಮೂಹ ಸಂಸ್ಥೆಗಳು ಕುಂದರಗಿ, ಶ್ರೀ ಬನಶಂಕರಿದೇವಿ ವಿದ್ಯಾ ಸಂಸ್ಥೆಯ ಬಿ.ಎನ್. ಖೋತ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಅನಗವಾಡಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದದ ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹಾಗೂ ಕುಂದರಗಿ ಜಿಪಂ ಮತಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ನೂತನ ಸದಸ್ಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಗ್ರಾಮ ಪಂಚಾಯಿತಿ ರಾಜಕಾರಣದ ತಳಪಾಯವಾಗಿದ್ದು, ನಾಯಕತ್ವ ಬೆಳೆಸುವ ಹಂತವಾಗಿದೆ. ಗ್ರಾಪಂ ಸದಸ್ಯರು ಕಾಯಾ, ವಾಚಾ, ಮನಸಾ ಕೆಲಸ ಮಾಡಿದರೆ ಯಾವ ದೇವಾಲಯಕ್ಕೂ ಹೋಗುವ ಅವಶ್ಯಕತೆ ಇಲ್ಲ. ಹೀಗಾಗಿ ಬದ್ಧತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ತಮ್ಮನ್ನು ಗೆಲ್ಲಿಸಿದ ಮತದಾರರನ್ನು ಮರೆಯದೆ ಸದಾ ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕೆಂದರು.

    ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಖೋತ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರ ಸೇವೆ ಮಾಡಲು ತಮಗೆ ಅವಕಾಶ ದೊರೆತಿದೆ. ಮೂಲಸೌಕರ್ಯ ಒದಗಿಸಿ ಗ್ರಾಮಗಳ ಸುಧಾರಣೆ ಮಾಡಬೇಕು ಎಂದರು.

    ಕೊಣ್ಣೂರ ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಉತ್ತಮ ಚಿಂತನೆ ಮಾಡುವವರು ಮಾತ್ರ ನಾಯಕರಾಗಲು ಸಾಧ್ಯ. ಮನುಷ್ಯನಿಗೆ ಅಧಿಕಾರದ ಮೋಹ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದಾಗಿದೆ. ಕೈ ಬಾಯಿ ಸ್ವಚ್ಛವಾಗಿಟ್ಟುಕೊಂಡು ಜನಸೇವೆ ಮಾಡಿ ದೊರೆತ ಅವಕಾಶ ಸಾರ್ಥಕ ಪಡಿಸಿಕೊಳ್ಳಬೇಕು. ಅಪರೂಪದ ರಾಜಕಾರಣಿಗಳನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
    ಕುಂದರಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾಲಗುಂಡಿ, ಕಾತರಕಿ, ಕುಂದರಗಿ, ಬೂದಿಹಾಳ ಎಸ್.ಎ., ಅನಗವಾಡಿ, ಹೆರಕಲ್ ಗ್ರಾಪಂಗಳ ನೂತನ ಸದಸ್ಯರನ್ನು ಪಕ್ಷಾತೀತವಾಗಿ ಸನ್ಮಾನಿಸಲಾಯಿತು.

    ರಾಮಲಿಂಗೇಶ್ವರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಐ.ಡಿ. ನಿಂಗೊಳ್ಳಿ, ಪ್ರಧಾನ ವ್ಯವಸ್ಥಾಪಕ ಐ.ಎಸ್. ಗೋಡಿ, ತಾಪಂ ಸದಸ್ಯ ಹನುಮಂತಗೌಡ ಪಾಟೀಲ, ಬನಶಂಕರಿದೇವಿ ವಿದ್ಯಾ ಸಂಸ್ಥೆಯ ನಿರ್ದೇಶಕಿ ಶೋಭಾ ಖೋತ ಮತ್ತಿತರಿದ್ದರು. ಈರಣ್ಣ ಕುಟಕನಕೇರಿ ಸ್ವಾಗತಿಸಿದರು. ಬಸವರಾಜ ದಾವಣಗೆರೆ ನಿರೂಪಿಸಿದರು. ಎಂ.ಎ. ಮಲಗಿಹಾಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts