More

    ಶುರುವಾಯ್ತು ಪಂಚಮಸಾಲಿ ಹೋರಾಟ; ಅಧಿವೇಶನ ಮುಗಿಯೋದರ ಒಳಗೆ ಮೀಸಲಾತಿ ಕೊಡಬೇಕು ಎಂದ ಸ್ವಾಮೀಜಿ..!

    ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬ ಹೋರಾಟ ಇಂದು ನಿನ್ನೆಯದಲ್ಲಿ. ಇಂದಿಗೆ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೊಟ್ಟಿದ್ದ ಗಡುವು ಮುಗಿಯಲಿದ್ದು ಅನೇಕರು ಹೋರಾಟಕ್ಕೆ ಸಿದ್ಧರಾಗಿದ್ದಾರೆ.

    ಈ ಹಿಂದೆ ಜಯಮೃತ್ಯುಂಜಯ ಸ್ವಾಮೀಜಿ, ‘ಸಿಎಂ ಕೊಟ್ಟ ಭರವಸೆಯಂತೆ ಡಿಸೆಂಬರ್ 19 ರ ಒಳಗೆ ಮೀಸಲಾತಿ ಘೋಷಣೆ ಮಾಡಬೇಕು. ಭರವಸೆ ಈಡೇರಿಸಿದರೆ ವಿರಾಟ ಸಮಾವೇಶದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಗೆ ಸನ್ಮಾನ ಮಾಡುತ್ತೇವೆ. ಎಲ್ಲಾದರೂ ಮೀಸಲಾತಿ ಘೋಷಣೆ ಮಾಡದಿದ್ದರೆ ಪಂಚಮಸಾಲಿ ಸಮಾಜದ ಶಕ್ತಿ ಪ್ರದೇಶನ ಮಾಡ್ತಿವಿ’ ಎಂದಿದ್ದರು. ಈಗ ಅದರಂತೆಯೆ ಈಗ ಜಯ ಮೃತ್ಯುಂಜಯ ಸ್ವಾಮೀಜಿ ಸಮಾವೇಶ ಶುರು ಮಾಡಿದ್ದಾರೆ.

    ಹೋರಾಟದ ಸಂದರ್ಭ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ ‘ಇವತ್ತು ನಮ್ಮದು ಅಂತಿಮ ಘಟ್ಟದ ಹೋರಾಟ. ನಮ್ಮ ಸಮಾವೇಶ ಮುಗಿಯೋದ್ರೊಳಗೆ ಸರ್ಕಾರ ಮೀಸಲಾತಿ ಘೋಷಿಸಬೇಕು. ಬೆಳಗಾವಿಯಲ್ಲಿ ಸಿಎಂ ಸುದ್ದಿಗೋಷ್ಠಿ ಮಾಡಿ ತಮ್ಮ ನಿಲುವು ಸಿಎಂ ಸ್ವಷ್ಟಪಡಿಸಬೇಕು. ಮೀಸಲಾತಿ ವಿಚಾರವಾಗಿ ಸ್ಪಷ್ಟತೆ ನೀಡಲಿ. ಕೊಡ್ತಿವಿ ಅಂತಾದರೂ ಹೇಳಲಿ. ಇಲ್ಲ ಅಂತಾದರೂ ಹೇಳಲಿ. ಆಗ ನಮ್ಮ ನಡೆ ನಾವು ಹೇಳುತ್ತೇವೆ. ಮೀಸಲಾತಿ ಸಿಕ್ಕಿಲ್ಲ ಎಂದಾದರೆ ನಾವಂತೂ ಪಾದಯಾತ್ರೆ ಮಾಡೋದು ಶತಸಿದ್ಧ. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಹೋಗಿಯೇ ಹೋಗ್ತಿವಿ’ ಎಂದಿದ್ದಾರೆ.

    ಜೊತೆಗೆ, ‘ಹಿಂದೆ ಯಡಿಯೂರಪ್ಪ ಭರವಸೆ ನಂಬಿದ್ದೆವು. ಆದರೆ ಇನ್ನು ಯಾರ ಭರವಸೆಯನ್ನೂ ನಂಬುವುದಿಲ್ಲ. ಬಸವರಾಜ ಬೊಮ್ಮಾಯಿ ಮೀಸಲಾತಿ ಕೊಡ್ತಾರಾ ಇಲ್ಲವಾ ಅಂತಾ ಈಗಲೇ ಹೇಳಬೇಕು’ ಎಂದು ಸ್ಪಷ್ಟನೆ ಕೇಳಿದ್ದಾರೆ.

    ಪಂಚಮಸಾಲಿ ಮೀಸಲಾತಿ ಹೋರಾಟ ಹಿನ್ನೆಲೆ ಸವದತ್ತಿ ಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದ ಹಿನ್ನೆಲೆ ಪೂರ್ಣಕುಂಭ ಮೆರವಣಿಗೆ ಕೂಡ ನಡೆಯಲಿದೆ. ಪಟ್ಟಣದ ಎಪಿಎಂಸಿ ಯಿಂದ ಮೆರವಣಿಗೆ ಆರಂಭವಾಗಿ ತಾಲೂಕು ಕ್ರೀಡಾಂಗಣವೆರೆಗೆ ಪೂರ್ಣಕುಂಭಮೇಳ ಮೆರವಣಿಗೆ ಸಾಗಲಿದೆ. ಮೆರವಣಿಗೆ ಆನಿ ಅಗಸಿ, ಗಾಂಧಿಚೌಕ್, ಎಸ್‌ಎಲ್ಎಒ ಕ್ರಾಸ್, ಮಾರ್ಗವಾಗಿ ಸಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts