More

    ಸರ್ಕಾರಿ ಶಾಲೆಯಲ್ಲಿ ಸಾವಿರಾರು ಮದ್ಯದ ಬಾಟಲಿ; ಕುಡುಕರ ಅಡ್ಡೆ ಆಯ್ತಾ ಸರಸ್ವತಿ ನಿಲಯ.?!

    ದಾವಣಗೆರೆ: ಸರ್ಕಾರಿ ಶಾಲೆಯಲ್ಲಿ ಮದ್ಯದ ಬಾಟಲಿ ಎಂದರೆ ಏನಪ್ಪಾ ಇದು ಎಂದು ಎನಿಸದೇ ಇರುವುದಿಲ್ಲ. ಶಿಕ್ಷಕರ ವರ್ತನೆಯ ಬಗ್ಗೆ ಕಠಿಣ ನಿಯಮಗಳನ್ನು ಹೊಂದಿರುವ ಸರ್ಕಾರಿ ಶಾಲೆಯಲ್ಲಿ ಮದ್ಯದ ಬಾಟಲಿಗಳ ರಾಶಿ ಪತ್ತೆಯಾಗಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜರೀಕಟ್ಟೆ ಗ್ರಾಮದ ಸರ್ಕಾರಿ ಶಾಲೆಯ ಬಗ್ಗೆ ಈಗ ಹೇಳೋರು ಕೇಳೋರು ಯಾರೂ ಇಲ್ಲದಂತೆ ಆಗಿದೆ. ಶಾಲಾ ಆವರಣವನ್ನು ಸ್ವಚ್ಛ ಮಾಡುತ್ತಿದ್ದ ಯುವ ಬ್ರಿಗೇಡ್​ಗೆ ಸಾವಿರಾರು ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

    ಈಗ ಈ ಸರ್ಕಾರಿ ಶಾಲೆಯ ಬಗ್ಗೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಸಾವಿರಾರು ಮದ್ಯದ ಬಾಟಲಿಗಳನನ್ನು ಕಂಡು ಯುವ ಬ್ರಿಗೇಡ್ ಕಾರ್ಯಕರ್ತರು ದಂಗಾಗಿದ್ದಾರೆ. ರಾತ್ರಿ ವೇಳೆ ಕುಡುಕರು ಕುಡಿದು ಆವರಣದಲ್ಲಿಯೇ ಬಾಟಲಿ ಬೀಸಾಡಿ ಹೋಗುತ್ತಿದ್ದಾರೆ. ಈ ಬಗ್ಗೆ ಮಕ್ಕಳು ಶಾಲಾ ಆವರಣದಲ್ಲಿ ಬಾಟಲಿಗಳನ್ನು ಬಿಸಾಡಬೇಡಿ ಮನವಿ ಕೂಡ ಮಾಡಿದ್ದಾರೆ.

    ನಡೆಯುತ್ತಿರುವ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಯುವ ಬ್ರಿಗೇಡ್ ಕಾರ್ಯಕರ್ತರ ಒತ್ತಾಯ ಮಾಡುತ್ತಿದ್ದಾರೆ. ಈಗ ಯುವ ಬ್ರಿಗೇಡ್​ನ ಕಾರ್ಯಕರ್ತರು ಶಾಲಾ ಆವರಣದಲ್ಲಿದ್ದ ಮದ್ಯದ ಬಾಟಲಿಗಳನ್ನು ಜನ ಸಂಚಾರವಿಲ್ಲದ ಸ್ಥಳಕ್ಕೆ ರವಾನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts