More

    ಹಾವು ಕಡಿತಕ್ಕೊಳಗಾಗಿ ಚಿಕಿತ್ಸೆಗೆ ದಾಖಲಾದ ರೈತನಿಗೆ ಕಾದಿತ್ತು ಮತ್ತೊಂದು ಶಾಕ್…!

    ಬೆಳಗಾವಿ: ಹಾವು ಕಚ್ಚಿದ್ದರಿಂದ ಚಿಕಿತ್ಸೆಗೆ ದಾಖಲಾದ ರೈತನೊಬ್ಬನಿಗೆ ಊಹಿಸಲಾಗದ ಮತ್ತೊಂದು ಆಘಾತ ಎದುರಾದ ಘಟನೆ ಕುಂದಾ ನಗರಿಯಲ್ಲಿ ನಡೆದಿದೆ.

    ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದ 45 ವರ್ಷದ ರೈತ ಹಾವು ಕಡಿತದಿಂದ ಸವದತ್ತಿಗೆ ಚಿಕಿತ್ಸೆಗೆ ತೆರಳಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾದರು. ಬಳಿಕ ಗುಣಮುಖವಾಗಿ ಬಂದು ಮನೆಯಲ್ಲೇ ಉಳಿದಿದ್ದರು.

    ಇದನ್ನೂ ಓದಿ: ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​

    ನಾಲ್ಕು ದಿನಗಳ ನಂತರ ಹಾವು ಕಚ್ಚಿದಾಗ ಕಾಲಿಗೆ ವಿಷ ಏರಬಾರದೆಂದು ಕಟ್ಟಲಾಗಿದ್ದ ಜಾಗದಲ್ಲಿ ನೂವು ಕಾಣಿಸಿಕೊಂಡಿದ್ದರಿಂದ ರೈತ ಮತ್ತೆ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದರು. ಈ ವೇಳೆ ಕರೊನಾ ಸೋಂಕಿನ ಲಕ್ಷಣ ಕಂಡು ವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ನಿನ್ನೆ ಸೋಂಕು ದೃಢವಾಗಿದೆ.

    ಇದೀಗ ಗ್ರಾಮದಲ್ಲಿ ಆತನ ಸಂಪರ್ಕದಲ್ಲಿದ್ದ ಕುಟುಂಬಸ್ಥರು ಸೇರಿ 8 ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ‌ಸದ್ಯ ಬೈಲಹೊಂಗಲದಲ್ಲಿ ಆತಂಕ ಹೆಚ್ಚಿದ್ದು, ಸೋಂಕಿತನ ಓಣಿಯನ್ನು ಸೀಲ್ ಡೌನ ಮಾಡಲಾಗಿದೆ. ಓಡಾಡಿದ ಸ್ಥಳದಲ್ಲಿ ಸ್ಯಾನಿಟೈಜೆರ್ ಮಾಡಿ, ಅಧಿಕಾರಿಗಳು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಇದನ್ನೂ ಓದಿ: ಕಣ್ಣಿಗೊಂದು ಸವಾಲ್: ಜಿಂಕೆ ಬೇಟೆಗೆ ಹೊಂಚು ಹಾಕಿರೋ ಪರ್ವತ ಸಿಂಹ ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!​

    ಇನ್ನು ಬೈಲಹೊಂಗಲ ಪಟ್ಟಣದಲ್ಲಿ ಎರಡು, ಸಂಪಗಾಂವ ಗ್ರಾಮದಲ್ಲಿ ಎರಡು, ಮೂಗಬಸವ ಗ್ರಾಮದಲ್ಲಿ ಒಂದು ಸೇರಿ ಒಟ್ಟು ಐದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. (ದಿಗ್ವಿಜಯ ನ್ಯೂಸ್​)

    ಗ್ಯಾಂಗ್​​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​ಗೂ ಮುನ್ನ ಸ್ಥಳದಲ್ಲಿ ನಡೆದಿತ್ತು ಭಾರಿ ಹೈಡ್ರಾಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts