More

    ಬೆಳಗಾವಿ ಜಿಲ್ಲೆ ವಿಭಜನೆ ಕಗ್ಗಂಟು!

    ಬೆಳಗಾವಿ: ರಾಜ್ಯದಲ್ಲಿ ಭೌಗೋಳಿಕವಾಗಿ ಎರಡನೆಯ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ವಿಭಜನೆ ಇದೀಗ ರಾಜಕಾರಣಿಗಳ ಪ್ರತಿಷ್ಠೆಯಿಂದಾಗಿ ಕಗ್ಗಂಟಾಗಿದೆ. ಜಿಲ್ಲಾ ವಿಭಜನೆಯ ಎರಡೂವರೆ ದಶಕದ ಬೇಡಿಕೆ ಮತ್ತೆ ಹಿನ್ನೆಲೆಗೆ ಸರಿಯುತ್ತಿರುವುದು ಜನರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

    ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಎರಡು ಅಥವಾ ಮೂರು ಜಿಲ್ಲೆಗಳನ್ನಾಗಿ ಮಾಡಬೇಕೆಂಬ ಬೇಡಿಕೆ 1997ರಿಂದಲೂ ನಡೆದುಕೊಂಡು ಬಂದಿದೆ. ಅಲ್ಲದೆ, ವಾಸುದೇವ ರಾವ್, ಹುಂಡೇಕರ್ ಮತ್ತು ಪಿ.ಸಿ.ಗದ್ದಿಗೌಡರ್ ಸಮಿತಿಗಳು 1997ರಲ್ಲಿ ಚಿಕ್ಕೋಡಿಯನ್ನು ಹೊಸ ಜಿಲ್ಲೆ ಜತೆಗೆ ಹೊಸದಾಗಿ ತಾಲೂಕುಗಳ ರಚನೆಗೆ ಶಿಾರಸು ಮಾಡಿದ್ದವು. ಅವತ್ತು ಕನ್ನಡ ಸಂಘಟನೆಗಳ ಭಾರಿ ಹೋರಾಟ ನಡೆದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಜಿ.ಎಚ್.ಪಟೇಲ್ ಹೊಸ ಜಿಲ್ಲೆ ೋಷಣೆ ನಿರ್ಧಾರದಿಂದ ಹಿಂದೆ ಸರಿದಿದ್ದರು. ತದನಂತರ ಅಧಿಕಾರಕ್ಕೆ ಬಂದ ಪಕ್ಷಗಳು ಜಿಲ್ಲಾ ವಿಭಜನೆ ವಿಷಯಕ್ಕೆ ಕೈಹಾಕಲಿಲ್ಲ. ಪರಿಣಾಮ ಜಿಲ್ಲೆಯ ಕೊನೆಯ ಹಳ್ಳಿಗಳ ಜನರು ಸಂಕಷ್ಟು ಎದುರಿಸುವಂತಾಗಿದೆ. ಬೆಳಗಾವಿ ಜಿಲ್ಲೆ ವಿಭಜನೆ ಎನ್ನುವುದು ರಾಜಕಾರಣಿಗಳಿಗೆ ಪ್ರತಿಷ್ಠೆಯಾಗಿದ್ದು, ದಿನದಿಂದ ದಿನಕ್ಕೆ ವಿಭಜನೆ ಕಗ್ಗಂಟಾಗುತ್ತಿರುವುದರಿಂದ ಬೆಳಗಾವಿ ಕೇಂದ್ರ ಸ್ಥಾನದಿಂದ 180 ರಿಂದ 200 ಕಿ.ಮೀ ದೂರದಲ್ಲಿರುವ ಹಳ್ಳಿಗಳ ಜನಸಾಮಾನ್ಯರಿಗೆ ಪ್ರಾಣ ಸಂಕಟವಾಗಿದೆ. ಅಲ್ಲದೆ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜಿಲ್ಲೆಯ ರಾಜಕಾರಣಿಗಳ ಪ್ರತಿಷ್ಠೆ, ಕನ್ನಡಪರ ಸಂಘಟನೆಗಳ ವಿರೋಧದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ವಿಭಜನೆಯ ವಿಷಯವನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಮೂರು ದಶಕಗಳಿಂದ ಜಿಲ್ಲಾ ವಿಭಜನೆಯ ಜನರ ಕನಸು ಕನಸಾಗಿಯೇ ಉಳಿಯುವ ಲಕ್ಷಣಗಳು ಎದ್ದು ಕಾಣುತ್ತಿವೆ.

    ಈಗಾಗಲೇ ಬೆಳಗಾವಿ ವಿಭಜಿಸಿ ಮೂರು ಅಥವಾ ಎರಡು ಜಿಲ್ಲೆಗಳಲ್ಲಿ ಮಾಡಿದರೆ ಬೆಳಗಾವಿ ಭಾಗದಲ್ಲಿ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತದೆ. ಅಲ್ಲದೆ, ರಾಜ್ಯದ ರಾಜಕಾರಣಿಗಳು ಕೂಡ ಮರಾಠಿಗರ ಓಲೈಕೆಗಾಗಿ ಕನ್ನಡವನ್ನು ನಿರ್ಲಕ್ಷ್ಯಸುವ ಹಂತಕ್ಕೆ ಬರುತ್ತಾರೆ. ಇದರಿಂದಾಗಿ ಕರ್ನಾಟಕ ಏಕೀಕರಣ ಕನಸು ನುಚ್ಚು ನೂರಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಆಡಳಿತ ವಿಷಯವಾಗಿ ಅಲ್ಲಲ್ಲಿ ಕಚೇರಿಗಳನ್ನು ಆರಂಭಿಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಜತೆಗ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದರೆ ಜಿಲ್ಲಾ ವಿಭಜನೆ ಪ್ರಶ್ನೆಯೇ ಬರುವುದಿಲ್ಲ. ರಾಜ್ಯ ಸರ್ಕಾರವು ಎರಡು ವಿಧಾನಸಭಾ ಕ್ಷೇತ್ರ ಹೊಂದಿರುವ ಕೊಡಗು ಜಿಲ್ಲೆಗೆ ನೀಡುವ ಅನುದಾನದಷ್ಟೇ 18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಗೆ ನೀಡುತ್ತಿದೆ. ಇದರಿಂದ ಅಭಿವೃದ್ಧಿ ಹೇಗೆ ಸಾಧ್ಯ? ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಸಮಸ್ಯೆಗಳು ಉದ್ಭವಿಸುವುದಿಲ್ಲ. ದೊಡ್ಡ ಜಿಲೆಯಾಗಿರುವುದರಿಂದ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಆಗುತ್ತಿದೆ. ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾರಕವಾಗಿ ಪರಿಣಮಿಸಿದೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರಾದ ಅಶೋಕ ಚಂದರಗಿ, ದೀಪಕ ಗುಡಗನಟ್ಟಿ ಇತರರು ದೂರಿದ್ದಾರೆ.

    ಬೈಲಹೊಂಗಲ ಜಿಲ್ಲೆ ಆಗಲಿ

    ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದಾದರೆ ಬೈಲಹೊಂಗಲ ಜಿಲ್ಲೆ ಮಾಡಲು ನಮ್ಮ ಒತ್ತಡವಿದೆ. ಆದರೆ, ಬೆಳಗಾವಿ ಜಿಲ್ಲಾ ವಿಭಜನೆ ವಿಷಯ, ಪ್ರಸ್ತಾವನೆಗಳು ಸರ್ಕಾರದ ಮುಂದೆ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಅವರು ಜಿಲ್ಲಾ ವಿಭಜನೆ ಕುರಿತು ಸಭೆಗಳನ್ನು ನಡೆಸಿರುವ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ. ಅಖಂಡ ಬೆಳಗಾವಿ ಇರಬೇಕು ಎಂಬುದು ನಮ್ಮದು ಆಸೆ. ಒಂದು ವೇಳೆ ಸರ್ಕಾರ ಜಿಲ್ಲಾ ವಿಭಜನೆಗೆ ಮುಂದಾದರೆ ಬೈಲಹೊಂಗಲ ಕೂಡ ಜಿಲ್ಲೆ ಮಾಡಬೇಕು ಎಂಬುದು ನಮ್ಮ ಬೇಡಿಕೆ, ಒತ್ತಡ ಕೂಡ ಇದೆ ಎಂದು ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts