More

    10ರಿಂದ ಮೂರು ದಿನ ಬೇಲದಕುಪ್ಪೆ ಜಾತ್ರೆ

    ಸರಗೂರು: ಕಾರ್ತಿಕ ಮಾಸದ ಅಂಗವಾಗಿ ಶ್ರೀಕ್ಷೇತ್ರ ಬೇಲದಕುಪ್ಪೆ ಮಹದೇಶ್ವರ ಜಾತ್ರಾ ಮಹೋತ್ಸವ ಡಿ.10 ರಿಂದ ಮೂರು ದಿನಗಳವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಹೆಡಿಯಾಲದ ಅರಣ್ಯ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.

    ಜನರ ಧಾರ್ಮಿಕ ಭಾವನೆಗಳಿಗೆ ತೊಂದರೆ ಆಗದಂತೆ ಅರಣ್ಯ ಇಲಾಖೆ ಸಹಕಾರದೊಂದಿಗೆ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಬೇಕು. ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳು ಮತ್ತು ಗ್ರಾಮದ ಮುಖಂಡರಿಗೆ ಹುಣಸೂರು ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಸೂಚಿಸಿದರು.

    ಧಾರ್ಮಿಕ ಕಾರ್ಯಕ್ರಮಗಳು ಡಿ.10 ರಂದು ಸಂಜೆ ನಡೆಯಲಿವೆ. 11_ರಂದು ದೇವಸ್ಥಾನ ಸಮೀಪದ ಕೆರೆಯಿಂದ ಹಾಲರವಿ ಸೇವೆ ತೆಗೆದುಕೊಂಡು ದೇವರುಗಳನ್ನು ದೇವಾಲಯದವರೆಗೂ ತರಲಾಗುವುದು. ರಾತ್ರಿ ಎಣ್ಣೆಮಜ್ಜನ ಇರಲಿದೆ. ನಂತರ ಕೊಂಡೋತ್ಸವ ಜರುಗಲಿದೆ. 12ರಂದು ಬೆಳಗ್ಗೆ ರಥೋತ್ಸವ ನಡೆಯಲಿದೆ. ಸಂಜೆ 5ಕ್ಕೆ ದೇವರ ಮೆರವಣಿಗೆ ಜರುಗಲಿದೆ ಎಂದು ಸಮಿತಿ ಸದಸ್ಯರು ಅಧಿಕಾರಿಗಳಿಗೆ ವಿವರಿಸಿದರು.

    ಪೊಲೀಸ್ ಭದ್ರತೆ: ಜಾತ್ರಾ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸರಗೂರು ಪೊಲೀಸ್ ವೃತ್ತ ನಿರೀಕ್ಷಕ ಎಂ.ಲಕ್ಷ್ಮೀಕಾಂತ್, ಪಿಎಸ್‌ಐ ನಂದೀಶ್‌ಕುಮಾರ್ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ 350 ಪೊಲೀಸರನ್ನು ನಿಯೋಜಿಸಲಾಗುವುದು. ನಂಜನಗೂಡು ತಾಲೂಕಿನ ಹೆಡಿಯಾಲದಿಂದ ಹಾದನೂರು ಮಾರ್ಗವಾಗಿ ದೇವಾಲಯದವರೆಗೆ ಹಾಗೂ ದೇವಸ್ಥಾನದ ಆವರಣದ ಸುತ್ತ ಬ್ಯಾರಿಕೇಡ್ ಇರಿಸಿ, ವಾಹನ ಹಾಗೂ ಸಾರ್ವಜನಿಕರ ಸುಗಮ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಜಿಂದಾಲ್ ಅವರು ಸಭೆಗೆ ತಿಳಿಸಿದರು.

    ಸಾರಿಗೆ ಬಸ್ ವ್ಯವಸ್ಥೆ: ದೇವಸ್ಥಾನಕ್ಕೆ ಹೋಗಲು ದ್ವಿಚಕ್ರ ವಾಹನ, ಖಾಸಗಿ ವಾಹನಗಳಿಗೆ ಪ್ರವೇಶ ನಿಬರ್ಂಧಿಸಿದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯಿಂದ 100ಕ್ಕೂ ಹೆಚ್ಚು ಬಸ್‌ಗಳನ್ನು ನಿಯೋಜಿಸಲಾಗಿದೆ. ನಂಜನಗೂಡು, ಎಚ್.ಡಿ.ಕೋಟೆ, ಸರಗೂರು, ಗುಂಡ್ಲುಪೇಟೆ ತಾಲೂಕಿನಿಂದ ಭಕ್ತರು ಬಸ್‌ನಲ್ಲಿ ಬರಬಹುದು. ಅರಣ್ಯ ಪ್ರವೇಶ ದ್ವಾರದ ಸಮೀಪದಲ್ಲಿರುವ ಅಳಲಹಳ್ಳಿ ಚೈನ್‌ಗೇಟ್ ಬಳಿ ದ್ವಿಚಕ್ರ ಖಾಸಗಿ ವಾಹನಗಳಿಗೆ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ದನಗಳನ್ನು ಕರೆದೊಯ್ಯಲು, ಎತ್ತಿನಗಾಡಿ ಹೋಗಲು ನಿಬರ್ಂಧ ವಿಧಿಸಲಾಗಿದೆ ಎಂದು ಜಿಂದಾಲ್ ತಿಳಿಸಿದರು.

    ತಹಸೀಲ್ದಾರ್ ರುಕಿಯಾ ಬೇಗಂ , ಮುಖಂಡರಾದ ಶಂಭುಲಿಂಗ ನಾಯಕ, ಎಸಿಎಫ್ ಪರಮೇಶ್, ಪಿಎಸ್‌ಐ ನಂದೀಶ್ ಕುಮಾರ್, ನೀರಾವರಿ ಇಲಾಖೆ ಎಇ ಕೃಷ್ಣ, ಅಧಿಕಾರಿಗಳಾದ ಗೋವಿಂದರಾಜ್, ಸುಪ್ರೀತ್, ಮುಜರಾಯಿ ಇಲಾಖೆ ಇಒ ರಘು,ಪಾರುಪತ್ತೇದಾರರಾದ ಮಹದೇವಸ್ವಾಮಿ, ರಾಕೇಶ್‌ಗೌಡ, ತಾಲೂಕು ಪಂಚಾಯಿತಿ ಸಂಯೋಜಕ ಮಹದೇವಸ್ವಾಮಿ, ಪಿಡಿಒ ಶಿಲ್ಪಾ, ಸಮಿತಿ ಅಧ್ಯಕ್ಷ ನಿಂಗರಾಜು, ಸದಸ್ಯರಾದ ಮಹಾದೇವಯ್ಯ, ಚಿಕ್ಕಸಿದ್ದಯ್ಯ, ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts