More

    ವಿದ್ಯುತ್ ಪೂರೈಕೆ ಕೇಂದ್ರ ನಿರ್ಮಾಣ

    ಬೀಳಗಿ: ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ವಿದ್ಯುತ್ ತೊಂದರೆಯಾಗದಂತೆ ನೋಡಿಕೊಳ್ಳಲು 200 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನಲ್ಲಿ 220 ಕೆವ್ಹಿ ವಿದ್ಯುತ್ ಪೂರೈಕೆ ಸ್ಟೇಷನ್ ಹಾಗೂ ಕುಂದರಗಿ, ಗಿರಿಸಾಗರ, ಗಲಗಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 1 ರಂತೆ 110 ಕೆವ್ಹಿ ವಿದ್ಯುತ್ ಪೂರೈಕೆ ಸ್ಟೇಷನ್ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.

    ತಾಲೂಕಿನ ಯಡಹಳ್ಳಿ ಕ್ರಾಸ್ ಹತ್ತಿರ ಬೀಳಗಿ ಲೋಕೋಪಯೋಗಿ ಇಲಾಖೆ ಉಪವಿಭಾಗದ 2018-19ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಅಂದಾಜು 7 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಯರಗಟ್ಟಿ- ಬಬಲೇಶ್ವರ ರಾಜ್ಯ ಹೆದ್ದಾರಿ-55ರ ಕಿಶೋರಿ ಕ್ರಾಸ್‌ದಿಂದ ಗಲಗಲಿ ಸೇತುವೆವರೆಗೆ 9.36 ಕಿ.ಮೀ. ರಸ್ತೆ ವಿಸ್ತರಣೆ ಹಾಗೂ ಸುಧಾರಣೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಬೀಳಗಿ ಮತ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದು, ಕ್ಷೇತ್ರದ ಪ್ರತಿ ರಸ್ತೆಗಳು ಅಭಿವೃದ್ಧಿಯತ್ತ ಸಾಗಿವೆ. ಯಡಹಳ್ಳಿ ಕ್ರಾಸ್‌ದಿಂದ ಗಲಗಲಿ ಗ್ರಾಮಕ್ಕೆ ಹೋಗುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಾಸ್ ಬ್ಯಾರಿಯರ್ ಅಳವಡಿಕೆ ಮಾಡಲಾಗುವುದು ಎಂದರು.

    ಮುಳುಗಡೆ ಹೋರಾಟ ಸಮಿತಿ ಅಧ್ಯಕ್ಷ ಅದೃಷಪ್ಪ ದೇಸಾಯಿ, ಯುವ ಮೋರ್ಚಾ ಬಿಜೆಪಿ ಜಿಲ್ಲಾ ಅಧ್ಯಕ್ಷ ಆನಂದ ಇಂಗಳಗಾವಿ, ಮೋಹನ ಜಾಧವ, ನಂದಿ ಶುಗರ್ಸ್‌ ಉಪಾಧ್ಯಕ್ಷ ತಿಮ್ಮಣ್ಣ ಅಮಲಝರಿ, ಪರಸಪ್ಪ ವಾಲಿಕಾರ, ಹೊಳಬಸು ಬಾಳಶಟ್ಟಿ, ಶ್ರೀಶೈಲ ಗೋಳಿಪಲ್ಲೆ, ಜಗದೀಶ ಶಿರಾಳಶಟ್ಟಿ, ರವಿ ದೇಸಾಯಿ, ತಾನಾಜಿ ಮಂಟೂರ, ಪಿಡಬ್ಲುೃಡಿ ಎಇಇ ವಿ.ಎಂ. ಸುರೇಶ, ಇಂಜಿನಿಯರ್ ಸಂಜು ಪಾತ್ರೋಟ, ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಎನ್. ಕಂಕಾಳೆ, ಅಪಯ್ಯ ಅಂಗಡಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts