More

    ಸಹಕಾರಿ ಬ್ಯಾಂಕ್‌ಗಳು ಜನರ ಜೀವನಾಡಿ

    ಬೀಳಗಿ/ಧಾರವಾಡ: ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಿಗೆ ಗ್ರಾಹಕರು ಮತ್ತು ಠೇವಣಿದಾರರು ಎರಡು ಕಣ್ಣುಗಳಿದ್ದಂತೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಆದರೆ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳು ಸಕಾಲದಲ್ಲಿ ಸಾಲ ನೀಡಿ ಜನರ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ಪಾಟೀಲ ಹೇಳಿದರು.

    ಧಾರವಾಡದಲ್ಲಿ ಗುರುವಾರ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್‌ನ 9ನೇ ನೂತನ ಶಾಖೆಯ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಬೀಳಗಿ ಪಟ್ಟಣದಲ್ಲಿ 2010ರಲ್ಲಿ ಪ್ರಾರಂಭವಾಗಿದ್ದು, ಸದ್ಯ ತನ್ನ 11 ಶಾಖೆಯನ್ನು ಹೊಂದುವ ಮೂಲಕ 68.90 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 60 ಕೋಟಿ ರೂ. ಠೇವಣಿ, 2 ಕೋಟಿ ರೂ. ಷೇರು, 52 ಕೋಟಿ ರೂ. ಸಾಲ ವಿತರಣೆ ಮಾಡಿ 39 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಇದಕ್ಕೆ ಆಡಳಿತ ಮಂಡಳಿ ಹಾಗೂ ಬ್ಯಾಂಕ್‌ನ ಸಿಬ್ಬಂದಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದು ಕಾರಣವಾಗಿದೆ. ಜನಸಾಮಾನ್ಯರ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದರು.

    ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಮಾಜಿಕ, ಸಹಕಾರಿ, ಶಿಕ್ಷಣ, ಕೃಷಿ ಕ್ಷೇತ್ರದಲ್ಲಿ ತಮ್ಮದೇಯಾದ ಕೊಡುಗೆ ನೀಡುತ್ತಿರುವ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಎನ್. ಪಾಟೀಲರು ಬೀಳಗಿ ಪಟ್ಟಣದಲ್ಲಿ ಉತ್ತರ ಕರ್ನಾಟಕದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯಲೆಂದು ಸ್ವಾಮಿ ವಿವೇಕಾನಂದ ಮಹಾವಿದ್ಯಾಲಯ ತೆರೆಯುವ ಮೂಲಕ ಬಡವರ ಮಕ್ಕಳಿಗೆ ಬೆಳಕಾಗಿದ್ದಾರೆ ಎಂದರು.

    ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮನುಕುಲದ ಒಳಿತಿಗಾಗಿ ಪ್ರತಿಯೊಬ್ಬರೂ ನಿಸ್ವಾರ್ಥ ಸೇವೆ ಮಾಡಬೇಕು ಎಂದರು.

    ಸಲಹೆಗಾರ ಕೆ.ಬಿ. ಕುಲಕರ್ಣಿ, ಸಲಹಾ ಸಮಿತಿ ಸದಸ್ಯ ಎಂ.ಪಿ. ಖಜ್ಜಿಡೋಣಿ, ಪಿ.ಎಚ್. ಕಿರೇಸೂರ, ಎಸ್.ಎನ್. ಪಾಟೀಲ, ಬಿ.ಆರ್. ಉಗಲವಾಟ, ಎಂ.ಎಸ್. ತಿಪ್ಪರಡ್ಡಿ, ಎಸ್.ಎ. ಪಾಟೀಲ, ಬಿ.ಜಿ. ಗೊಂದೆ, ಬಿ.ಜಿ. ಆಸಂಗಿ, ಜಿ.ವೈ. ಸೂರ್ಯವಂಶಿ, ಎ.ಎಸ್. ಭೂಸರಡ್ಡಿ, ರೇಖಾ ಪಾಟೀಲ, ಪಿ.ಬಿ. ಹನಗಂಡಿ, ಬಿ.ಪಿ. ಪಾಟೀಲ, ಎಸ್.ಎಸ್. ರಂಗನಗೌಡರ. ಆರ್.ಎಸ್. ಪಾಟೀಲ ಅನೇಕರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts