More

    ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ; ಗೋವಾದಲ್ಲಿ ಬೀಫ್​ಪ್ರಿಯರಿಗೆ ಟೆನ್ಷನ್​!

    ಪಣಜಿ: ಒಂದು ರಾಜ್ಯದಲ್ಲಿ ಯಾವುದೇ ಕಾಯ್ದೆ ತಂದರೂ ಸಾಮಾನ್ಯವಾಗಿ ಆ ರಾಜ್ಯದಲ್ಲಷ್ಟೇ ಅದರ ಪರಿಣಾಮ ಬೀರುತ್ತದೆ. ಆದರೆ ಗೋಹತ್ಯಾ ನಿಷೇಧ ಕುರಿತು ಕರ್ನಾಟಕದಲ್ಲಿ ಅನುಮೋದನೆ ಸಿಕ್ಕಿರುವ ಹೊಸ ಕಾಯ್ದೆಯ ಫಾಯಿದೆ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಗೋವಾದಲ್ಲೂ ಅದು ಪರಿಣಾಮ ಬೀರುವ ಸಾಧ್ಯತೆ ಇದ್ದು, ಅಲ್ಲಿನ ಬೀಫ್​ಪ್ರಿಯರಿಗೆ ಚಿಂತೆ ಆಗಿದೆಯಂತೆ!

    ಗೋಹತ್ಯಾ ನಿಷೇಧ ಸಂಬಂಧ ಹೊಸ ಕಾಯ್ದೆಗೆ ಕರ್ನಾಟಕದ ಸದನದಲ್ಲಿ ಬುಧವಾರ ಅನುಮೋದನೆ ಸಿಕ್ಕಿದ್ದು, ರಾಜ್ಯಪಾಲರ ಅಂಕಿತವಷ್ಟೇ ಬಾಕಿ ಇದೆ. ಆದರೆ ಇದರಿಂದ ಈಗ ಗೋವಾದ ಬೀಫ್​ಪ್ರಿಯರಿಗೆ, ಅಲ್ಲಿಗೆ ಬೀಫ್​ ಪೂರೈಸುವವರಿಗೆ ಚಿಂತೆ ಆರಂಭವಾಗಿದೆ. ಏಕೆಂದರೆ ಗೋವಿನ ಮಾಂಸಕ್ಕಾಗಿ ಗೋವಾ ಬಹುತೇಕ ದಕ್ಷಿಣದ ರಾಜ್ಯಗಳನ್ನು ಅವಲಂಬಿಸಿದ್ದು, ಅದರಲ್ಲೂ ಅಲ್ಲಿಗೆ ಕರ್ನಾಟಕದಿಂದಲೇ ದೊಡ್ಡಮಟ್ಟದ ಪೂರೈಕೆ ಆಗುತ್ತಿದೆ.

    ಗೋವಾದಲ್ಲಿ ಪ್ರತಿನಿತ್ಯ ಸರಾಸರಿ 25 ಟನ್​ ಬೀಫ್​ ಖರ್ಚಾಗುತ್ತಿದ್ದು, ಆ ಪೈಕಿ ಕರ್ನಾಟಕದಿಂದ ಅದರಲ್ಲೂ ಬೆಳಗಾವಿಯಿಂದ ದೊಡ್ಡಮಟ್ಟದಲ್ಲಿ ಬೀಫ್​ ಪೂರೈಕೆ ಆಗುತ್ತಿದೆ. ಇನ್ನು ಪ್ರವಾಸದ ಸೀಸನ್​ ಆಗಿರುವ ಅಕ್ಟೋಬರ್-ಮಾರ್ಚ್​ ಅವಧಿಯಲ್ಲಿ ಇದು ಇನ್ನೂ ಹೆಚ್ಚಾಗಿರುತ್ತದೆ. ಪ್ರವಾಸಿಗರು ಹಾಗೂ ಗೋವಾದಲ್ಲಿ ಶೇ. 30ಕ್ಕಿಂತ ಹೆಚ್ಚಾಗಿರುವ ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಬೀಫ್​ ಸೇವಿಸುತ್ತಾರೆ.

    ಹೊಸ ಕಾನೂನಿನ ಪ್ರಕಾರ ಗೋವಿನ ಮಾಂಸವನ್ನು ಸಾಗಿಸಿದರೂ ಜೈಲುಪಾಲಾಗುವುದರಿಂದ ಗೋವಾಗೆ ಬೀಫ್ ಸಾಗಣೆ ಕಷ್ಟವಾಗಲಿದೆ. ಇನ್ನು ಮಹಾರಾಷ್ಟ್ರದಲ್ಲಿ ಈಗಾಗಲೇ ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈಗ ಕರ್ನಾಟಕದಲ್ಲೂ ಕಾನೂನು ಬದಲಾಗಿದೆ. ಇದರಿಂದ ಗೋವಾದ ಬೀಫ್​ ಮಾರುಕಟ್ಟೆಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಖುರೇಷಿ ಮೀಟ್​ ಟ್ರೇಡರ್ಸ್ ಅಸೋಸಿಯೇಷನ್​ ಅಧ್ಯಕ್ಷ ಮನ್ನಾ ಬೇಪಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಲಕ್ಷಾಂತರ ರೂ. ಖರ್ಚು ಮಾಡಿ ಮದ್ವೆಯಾದೆ- ಹೆಂಡ್ತಿ ಮುಟ್ಟಲು ಬಿಡುತ್ತಿಲ್ಲ: ದುಡ್ಡೂ ಇಲ್ಲ, ಪತ್ನಿಯೂ ಸಿಗದ ನನಗೇನು ಪರಿಹಾರ?

     

    ಅರ್ಚಕರು ಅರೆಬೆತ್ತಲೇಕೆ ಎಂದು ಪ್ರಶ್ನಿಸಿ ಗಲಾಟೆಗೆ ಹೊರಟ ಹೋರಾಟಗಾರ್ತಿ ಅರೆಸ್ಟ್​

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts