More

    ಬೇಡ ಜಂಗಮ ಪ್ರಮಾಣಪತ್ರ ನೀಡದಂತೆ ಒತ್ತಾಯ

    ಶಿವಮೊಗ್ಗ: ವೀರಶೈವ ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣಪತ್ರ ನೀಡದಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ.ಕೃಷ್ಣಪ್ಪ) ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
    ರಾಜ್ಯದಲ್ಲಿ 2000ರ ಜನಗಣತಿ ಪ್ರಕಾರ ಬೇಡ ಜಂಗಮರ ಸಂಖ್ಯೆ ಕೇವಲ 20,229 ಇದೆ. 2011ರ ಜನಗಣತಿ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚಿದೆ ಎಂದು ವರದಿ ತಿಳಿಸುತ್ತದೆ. ನೈಜ ಬೇಡ ಜಂಗಮರು ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಅವರಿಗೆ ಅಕ್ಷರ ಜ್ಞಾನವೂ ಕಡಿಮೆ ಎಂದು ಮನವರಿಕೆ ಮಾಡಿಕೊಟ್ಟರು.
    ಬೇಡ ಜಂಗಮರು ಸಾಮಾನ್ಯವಾಗಿ ಗುಡ್ಡಗಾಡು, ಗುಡಿಸಲು, ಗುಡಾರಗಳನ್ನು ಹಾಕಿಕೊಂಡು ಒಂದೆಡೆ ನೆಲೆಸದೆ ಅಲೆಮಾರಿಗಳಾಗಿರುತ್ತಾರೆ. ಚಾಪೆ ಹೆಣೆಯುವುದು, ಭಿಕ್ಷಾಟನೆ, ಗಿಳಿ ಶಾಸ್ತ್ರ ಅವರ ವೃತ್ತಿ. ಇವರು ನಿಜವಾದ ಬೇಡ ಜಂಗಮರೇ ಹೊರತು ಈಗ ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಎಂದು ಬೊಬ್ಬೆ ಹೊಡೆಯುವವರಲ್ಲ ಎಂದು ದೂರಿದರು.
    ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಜಿಲ್ಲಾ ಸಂಚಾಲಕ ಎ.ಅರ್ಜುನ್, ಸಹ ಸಂಚಾಲಕ ಎಂ.ಏಳುಕೋಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts