More

    ‘ನಿನ್ನ ಮಾತನ್ನು ಕೇಳಿಯೇ ನಾನು ಈ ಪರಿಸ್ಥಿತಿಗೆ ಬಂದಿದ್ದು’ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ? ಯಾರ ಬಗ್ಗೆ?

    ಬೆಂಗಳೂರು: ವಸತಿ ಸಚಿವ ವಿ. ಸೋಮಣ್ಣ ಯಾರ ಮಾತನ್ನು ಕೇಳುತ್ತಾರೆ ಎಂಬ ಕುರಿತಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್ ನಡುವೆ ವಿಧಾನಸಭೆಯಲ್ಲಿ ವಾದ ನಡೆಯಿತು. ಅದಕ್ಕೆ ತಾವು ಎಲ್ಲರ ಮಾತನ್ನು ಕೇಳುತ್ತೇನೆ. ಆದರೆ, ನನ್ನ ಮಾತನ್ನೇ ನೀವ್ಯಾರೂ ಕೇಳುವುದಿಲ್ಲ ಎಂದು ವಿ. ಸೋಮಣ್ಣ ಹೇಳುವ ಮೂಲಕ ಸದನದಲ್ಲಿ ಹಾಸ್ಯದ ವಾತಾವರಣ ಸೃಷ್ಟಿಸಿದರು.

    ಬಜೆಟ್ ಮೇಲಿನ ಚರ್ಚೆ ವೇಳೆ ಎಚ್.ಕೆ. ಪಾಟೀಲ್ ಸೋಮಣ್ಣ ಅವರನ್ನು ಸಂಬೋಧಿಸಿ ಮಾತನಾಡುತ್ತಿದ್ದರು. ಆಗ ಮಧ್ಯಪ್ರವೇಶಿಸಿದ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ, ನೀವು ಸೋಮಣ್ಣ ಅವರಿಗೆ ಹೇಳುವುದಕ್ಕಿಂತ, ಸಚಿವ ಬಸವರಾಜ ಬೊಮ್ಮಾಯಿ ಅಥವಾ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಹೇಳಿ. ಅವರು ನಿಮ್ಮ ಮಾತನ್ನು ಕೇಳುತ್ತಾರೆ. ಸೋಮಣ್ಣ ನಿಮ್ಮ ಮಾತು ಕೇಳಲ್ಲ ಎಂದು ಹೇಳಿದರು.ಅದಕ್ಕೆ ಎಚ್.ಕೆ. ಪಾಟೀಲ್, ನನ್ನ ಮಾತನ್ನು ಯಾರು ಕೇಳುತ್ತಾರೋ ಅವರಿಗೆ ನಾನು ಹೇಳಬೇಕು. ಉಳಿದವರ್ಯಾರೂ ನನ್ನ ಮಾತನ್ನು ಕೇಳುವುದಿಲ್ಲ ಎಂದರು.

    ಇದನ್ನೂ ಓದಿ: 10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು 

    ಅದಕ್ಕೆ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ನಿಮ್ಮ ಮಾತು ಕೇಳ್ತಾರೆ ಅಂದುಕೊಡಿದ್ದೆ. ಅವರು ನಿಮ್ಮ ಮಾತು ಕೇಳಲ್ಲವೇ? ಸೋಮಣ್ಣ ನನ್ನ ಮಾತನ್ನು ಮಾತ್ರ ಕೇಳುವುದು ಎಂದು ಹೇಳಿದರು. ಆಗ ಸೋಮಣ್ಣ, ನಾನು ಎಲ್ಲರ ಮಾತನ್ನು ಕೇಳ್ತೀನಿ. ಆದರೆ, ನನ್ನ ಮಾತನ್ನು ಮಾತ್ರ ಯಾರೂ ಕೇಳುವುದಿಲ್ಲ ಎಂದು ಹೇಳಿದರು. ನಿನ್ನ ಮಾತು ಕೇಳಿಯೇ ನಾನು ಈ ಪರಿಸ್ಥಿತಿಗೆ ಬಂದಿದ್ದು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಸದನವನ್ನು ನಗೆಗಡಲಲ್ಲಿ ತೇಲಿಸಿದರು. ಆಗ ಮಧ್ಯಪ್ರವೇಶಿಸಿದ ಬಸವರಾಜ ಬೊಮ್ಮಾಯಿ, ಎಚ್.ಕೆ.ಪಾಟೀಲ್ ಅವರು, ಆಡಳಿತ ಪಕ್ಷದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ ಅವರ ಮಾತನ್ನೇ ಕೇಳಬೇಕು ಎನ್ನುತ್ತಾರೆ, ನಾವೇನು ಮಾಡಬೇಕು? ಎಂದರು.

    ಬೇಸನ್ ಲಾಡು-ಶುಗರ್ ಲೆಸ್ ಟೀ

    ಮಾತಿನ ಮಧ್ಯೆ ಎಸ್.ಆರ್. ಬೊಮ್ಮಯಿ ಮತ್ತು ಬಸವರಾಜ ಬೊಮ್ಮಾಯಿ ನಡುವಿನ ವ್ಯತ್ಯಾಸದ ಬಗ್ಗೆ ಹೇಳಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಸ್.ಆರ್.ಬೊಮ್ಮಾಯಿ ಮತ್ತು ಬಸವರಾಜ ಬೊಮ್ಮಾಯಿ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅವರು ಬೇಸನ್ ಲಾಡು ತಿಂದು ಶುಗರ್ ಲೆಸ್ ಟೀ ಕುಡಿಯುತ್ತಿದ್ದರು. ಆದರೆ, ಬಸವರಾಜ ಬೊಮ್ಮಾಯಿ ಎಲ್ಲವೂ ಶುಗರ್ ಇರುವುದನ್ನೇ ಕೇಳುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
    ಆಗ ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ ಅವರಿಗೆ ವಯಸ್ಸಾದಾಗ ಅವರೂ, ಶುಗರ್ ಲೆಸ್ ಆಗುತ್ತಾರೆ ಎಂದು ಹೇಳಿದರು. ಅದಕ್ಕೆ ಬಸವರಾಜ ಬೊಮ್ಮಾಯಿ, ಎಸ್.ಆರ್.ಬೊಮ್ಮಾಯಿ ಮತ್ತು ನನ್ನ ನಡುವೆ ವ್ಯತ್ಯಾಸವಿದೆ. ಆದರೆ, ಅವರಿಗೆ ತದ್ವಿರುದ್ಧವಾಗಿಲ್ಲ. ಸಿದ್ದರಾಮಯ್ಯ ಅವರು, ಹಿಂದೆ ರೆಬೆಲ್ ಆಗಿದ್ದರು, ಆದರೆ, ಈಗ ಮೆತ್ತಗಾಗಿದ್ದಾರೆ ಎಂದು ಹೇಳಿ ಚರ್ಚೆಗೆ ಇತಿಶ್ರೀ ಹಾಡಿದರು.

    1ರಿಂದ 5ರ ವರೆಗಿನ ತರಗತಿ ಆರಂಭಿಸಿ: ಆನ್​ಲೈನ್​ ಸಮೀಕ್ಷೆಯಲ್ಲಿ ಪಾಲಕರ ಒಲವು

    ತಾಯಿ ಹಾಗೂ ಮಕ್ಕಳಿಬ್ಬರು ‘ಕೆರೆಗೆ ಹಾರ’; ಸಾಲಭಾದೆ ತಾಳಲಾಗದೆ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts