More

    ಪೊಲೀಸ್ ದೌರ್ಜನ್ಯದ ಪರಿಣಾಮ: ಕುಳಿತುಕೊಳ್ಳಲೂ ಆಗದೆ ಕಷ್ಟ ಅನುಭವಿಸುತ್ತಿರುವ ಯೋಧ!

    ಬೆಳಗಾವಿ: ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ಹೇಗಿರುತ್ತದೆ ಎಂಬುದಕ್ಕೆ ಇತ್ತೀಚೆಗೆ ಪೊಲೀಸರಿಂದ ತೀವ್ರ ಹಲ್ಲೆಗೆ ಒಳಗಾಗಿರುವ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್​ ಅವರ ಸ್ಥಿತಿ ಒಳ್ಳೆಯ ಉದಾಹರಣೆ.

    ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ಜಾಂಬೋಟಿ ಬಳಿಯಿರುವ ಸಿಆರ್‌ಪಿಎಫ್ ಕ್ಯಾಂಪ್‌ಗೆ ಸಚಿನ್ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಸಿಆರ್‌ಪಿಎಫ್ ಅಧಿಕಾರಿಗಳು ಅಲ್ಲಿ ಸಚಿನ್ ಅವರ ಆರೋಗ್ಯ ಪರಿಶೀಲಿಸಿದಾಗ ಪೃಷ್ಟ ಭಾಗದ ಮೇಲೆ ಪೊಲೀಸರು ಲಾಠಿಯಿಂದ ಮನಬಂದಂತೆ ಹೊಡೆದಿರುವುದು ಗೊತ್ತಾಗಿದೆ. ಈ ಹೊಡೆತಗಳಿಂದ ಆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ತಕ್ಷಣ ಚಿಕಿತ್ಸೆ ದೊರೆಯದ್ದರಿಂದ, ಆ ಭಾಗದಲ್ಲಿ ಹೆಪ್ಪುಗಟ್ಟಿರುವ ರಕ್ತ ಕಪ್ಪು ಬಣ್ಣಕ್ಕೆ ತಿರುಗಿದೆ.

    ಸಚಿನ್‌ಗೆ ಸದ್ಯ ಕುಳಿತುಕೊಳ್ಳಲು ಆಗುತ್ತಿಲ್ಲ. ಅಷ್ಟೇ ಅಲ್ಲ, ಸರಿಯಾಗಿ ಮಲಗಲೂ ಆಗುತ್ತಿಲ್ಲ. ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸುಧಾರಿಸಲು ಇನ್ನೂ ಹಲವು ದಿನ ಬೇಕಾಗಬಹುದು ಎಂದು ಸಿಆರ್‌ಪಿಎಫ್ ವೈದ್ಯಕೀಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಯ ಹಿನ್ನೆಲೆ: ರಜೆ ಮೇಲೆ ಬಂದಿದ್ದ ಸಚಿನ್ ಸಾವಂತ್ ಇತ್ತೀಚೆಗೆ ತಮ್ಮ ಮನೆ ಬಳಿ ದ್ವಿಚಕ್ರ ವಾಹನ ತೊಳೆಯುತ್ತಿದ್ದರು. ಆಗ ಅಲ್ಲಿಗೆ ಬಂದ ಪೊಲೀಸರು ಮಾಸ್ಕ್ ಹಾಕಿಕೊಳ್ಳದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಲಾಕ್‌ಡೌನ್ ಇದ್ದರೂ ಮನೆಯ ಹೊರಗೆ ಇರುವುದು ಏಕೆ ಎಂದು ಪ್ರಶ್ನಿಸಿದ್ದರು. ಆಗ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು. ಈ ಸಂದರ್ಭದಲ್ಲಿ ಇಬ್ಬರು ಪೊಲೀಸರು ಸಚಿನ್​ ಅವರ ಮೇಲೆ ಮನಬಂದಂತೆ ಲಾಠಿ ಪ್ರಹಾರ ಮಾಡಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು.

    ನಂತರ ಯೋಧನನ್ನು ಠಾಣೆಗೆ ಕರೆದೊಯ್ದಿದ್ದ ಪೊಲೀಸರು ಅರೆಬೆತ್ತಲೆಯಾಗಿ ನೆಲದ ಮೇಲೆ ಕೂರಿಸಿ, ಕೈಕೋಳ ಹಾಕಿದ್ದರು. ಆ ಫೋಟೋ ಕೂಡ ವೈರಲ್ ಆಗಿತ್ತು. ಜನರು ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಎರಡು ದಿನಗಳ ಬಳಿಕ ಸಾವಂತ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

    ಸದ್ಯಕ್ಕಂತೂ ಕರೊನಾ ಪಿಡುಗಿನಿಂದ ಜಗತ್ತು ಮುಕ್ತವಾಗಲ್ಲವಂತೆ… ಹಾಗಾದರೆ ಯಾವಾಗ ಆಗಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts