More

    ಬನ್ನೇರುಘಟ್ಟದಿಂದ ತಪ್ಪಿಸಿಕೊಂಡ ಕರಡಿ ; ತುಮಕೂರು ಬಳಿ ಬೋನಿಗೆ ಬಿದ್ದಿದ್ದ ಜಾಂಬವ 

    ಆನೇಕಲ್ : ತುಮಕೂರು ಬಳಿ ಸೆರೆಯಾಗಿದ್ದ ಕರಡಿ ಬನ್ನೇರುಘಟ್ಟ ಉದ್ಯಾನದಲ್ಲಿ ವಾಹನದಿಂದ ಇಳಿಸುವಾಗ ಪರಾರಿಯಾಗಿದೆ. ಬೋನಿನ ತಳಭಾಗದ ಕಬ್ಬಿಣದ ಶೀಟ್ ಕಿತ್ತು ಹೊರಬಂದಿರುವ ಜಾಂಬವ ಉದ್ಯಾನದ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಜಯಶಂಕರ್ (54) ಎಂಬಾತ ಗಂಭೀರ ಗಾಯಗೊಂಡಿದ್ದಾರೆ.

    ತುಮಕೂರಿನ ಸಿದ್ಧಗಂಗಾ ಮಠದ ಸಮೀಪದಲ್ಲಿ ಕಾಣಿಸಿಕೊಂಡಿದ್ದ ಕರಡಿಯನ್ನು ಹಿಡಿಯುವಂತೆ ಬನ್ನೇರುಘಟ್ಟ ಉದ್ಯಾನದ ಸಿಬ್ಬಂದಿಗೆ ಸ್ವಾಮೀಜಿ ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಸೆರೆ ಹಿಡಿಯಲಾಗಿತ್ತು. ಭಾನುವಾರ ಮಧ್ಯಾಹ್ನ ಉದ್ಯಾನಕ್ಕೆ ತಂದು ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ಇಳಿಸುವಾಗ ಬೋನಿನ ತಳಭಾಗದ ಕಬ್ಬಿಣದ ಶೀಟ್ ಕಿತ್ತು ಪರಾರಿಯಾಗಿದೆ, ಈ ವೇಳೆ ಉದ್ಯಾನದ ವೈದ್ಯರ ವಾಹನದ ಚಾಲಕ ಜಯಶಂಕರ್ ಮೇಲೆ ದಾಳಿ ಮಾಡಿದೆ. ಜಯಶಂಕರ್ ತಲೆಗೆ ಗಂಭೀರ ಗಾಯವಾಗಿದೆ ಎಂದು ಉದ್ಯಾನದ ಮೂಲಗಳು ತಿಳಿಸಿವೆ.

    ಮುಖಕ್ಕೆ ಶಸ್ತ್ರ ಚಿಕಿತ್ಸೆ : ಜಯಶಂಕರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖದ ಭಾಗದಲ್ಲಿ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದ ಜೈವಿಕ ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ಚಾಲಕನ ಆರೋಗ್ಯ ವಿಚಾರಿಸಿದರು.

    ಕರಡಿಗಾಗಿ ಹುಡುಕಾಟ: ಉದ್ಯಾನದಿಂದ ತಪ್ಪಿಸಿಕೊಂಡಿರುವ ಕರಡಿ ಹುಚ್ಚನ ಕೆರೆ ಸಮೀಪದಲ್ಲಿ ಅಡಗಿರುವ ಶಂಕೆ ಇದ್ದು, ಕಾರ್ಯಾಚರಣೆ ಕೈಗೊಳ್ಳಲಾಗುವುದು. ಬನ್ನೇರುಘಟ್ಟ ಜೈವಿಕ ಮತ್ತು ರಾಷ್ಟ್ರೀಯ ಉದ್ಯಾನದ ಎರಡು ತಂಡಗಳು ಈ ಕಾರ್ಯದಲ್ಲಿ ತೊಡಗಿಕೊಳ್ಳಲಿವೆ. ಸದ್ಯಕ್ಕೆ ಕೂಂಬಿಂಗ್ ನಡೆಸುತ್ತಿರುವುದಾಗಿ ವನಶ್ರೀ ವಿಪಿನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts