More

    ಪೈಪೋಟಿ ಎದುರಿಸಲು ಸನ್ನದ್ಧರಾಗಿ

    ಜಮಖಂಡಿ: ಜಗತ್ತು ವೇಗವಾಗಿ ಬದಲಾಗುತ್ತಿದೆ. ಬದಲಾವಣೆಗೆ ಒಗ್ಗಿಕೊಂಡು ಪೈಪೋಟಿ ಎದುರಿಸಲು ಸನ್ನದ್ಧರಾಗಬೇಕೆಂದು ಬಸವಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಹೇಳಿದರು.

    ನಗರದ ಮುರಗೋಡ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಹುನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಮಂಗಳವಾರ ಆಯೋಜಿಸಿದ್ದ 2023-24ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಎನ್‌ಎಸ್‌ಎಸ್, ಕ್ರೀಡೆ ಚಟುವಟಿಕೆ ಸಮಾರೋಪ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಸಾಧನೆಯ ಹಾದಿಯಲ್ಲಿ ಸಾಗುವಾಗ ದಾರಿ ತಪ್ಪಿಸುವ ಆಕರ್ಷಣೆಗಳಿಗೆ ಒಳಗಾಗಿ ಇಟ್ಟ ಗುರಿ ಮರೆಯಬಾರದು. ಸ್ನೇಹಿತರಿಂದ ಬರುವ ಟೀಕೆಗಳಿಂದ ಖಿನ್ನತೆಗೆ ಒಳಗಾಗಬಾರದು. ಆಕಸ್ಮಿಕವಾಗಿ ಮಾಡಿದ ತಪ್ಪಿನಿಂದ ಪಾಠ ಕಲಿಯಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಪ್ರಾಚಾರ್ಯ ಎಸ್.ಬಿ. ಮುಂಡಗನೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ಸಾಧಿಸುವ ಹಠ, ಛಲ, ಉತ್ಸಾಹ, ತುಡಿತ ಇರಬೇಕು. ಶಿಕ್ಷಣ ಮತ್ತು ವಿದ್ಯೆಯಿಂದ ಮಾತ್ರ ಸಮಾಜದಲ್ಲಿ ಗೌರವ ಲಭಿಸುತ್ತದೆ ಎಂಬ ಜಾಗೃತಿ ಇರಬೇಕು ಎಂದರು.

    ಸಿಡಿಸಿ ಸದಸ್ಯ ಚನ್ನಪ್ಪ ಬಿರಾದಾರ ಮಾತನಾಡಿ, ಜೀವನ ನಡೆಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ದುಡಿದು ತಿನ್ನುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

    ಸಿಡಿಸಿ ಅಧ್ಯಕ್ಷ ಎಸ್.ಸಿ. ಮಹಾಂತಣ್ಣವರ, ಉಪನ್ಯಾಸಕ ಬಿ.ಆರ್. ನರವಾಡೆ ಮಾತನಾಡಿದರು. ವಿದ್ಯಾರ್ಥಿಗಳಾದ ಸಂದೀಪ ನಾವಿ, ಗಣಪತಿ ನ್ಯಾಮಗೌಡ, ಮಹಾನಂದ ಭದ್ರದ, ಲಕ್ಷ್ಮೀ ಬಳಗಾರ, ಮಧು ಮಾಳೇದ, ಐಶ್ವರ್ಯ ಕುಲಕರ್ಣಿ ಅನಿಸಿಕೆ ಹಂಚಿಕೊಂಡರು.

    ಪಿಕೆಪಿಎಸ್ ಅಧ್ಯಕ್ಷ ದಯಾನಂದ ಗುರವ, ನಿವೃತ್ತ ಉಪನ್ಯಾಸಕ ಬಿ.ಎಂ. ಸೋಮಾಪುರ, ಸಿಡಿಸಿ ಸದಸ್ಯರಾದ ಮಲ್ಲಪ್ಪ ಜಾಧವ, ಭೀಮಪ್ಪ ಕಾಲತಿಪ್ಪಿ, ರಾಜು ರೂಗಿ, ನಾರಾಯಣ ಕಲಬುರ್ಗಿ, ರಮೇಶ ಗಡೆಪ್ಪನವರ, ಜಯಶ್ರೀ ಮಾಳೇದ, ಜಯಶ್ರೀ ವಾಗ್ಮೋಡಿ, ಉಪನ್ಯಾಸಕಿ ನೀಲವಾಣಿ ಎನ್.ಜಿ. ಇದ್ದರು.
    ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕ ಎಂ.ಎಸ್. ಕೊಪ್ಪದ ಸ್ವಾಗತಿಸಿದರು. ಉಪನ್ಯಾಸಕ ಆನಂದ ಹೂಗಾರ ವರದಿ ವಾಚಿಸಿದರು. ರಾಣಿ ಬಾಗಲಕೋಟ, ಪ್ರಕಾಶ ಪಟ್ಟಣಶೆಟ್ಟಿ, ಉಪನ್ಯಾಸಕ ಎಂ.ಎಚ್. ಹವಾಲ್ದಾರ್ ನಿರೂಪಿಸಿದರು. ಉಪನ್ಯಾಸಕ ಸಂತೋಷ ಹೊನ್ನದ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts