More

    ಗ್ರಾಮೀಣ ಕ್ರೀಡೆಗಳ ಉಳಿಸಿ ಬೆಳೆಸುವ ಕೆಲಸವಾಗಲಿ

    ಗುರುಗುಂಟಾ: ಅಳವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳ ಉಳಿವಿಗೆ ಶ್ರಮಿಸುವ ಕಾರ್ಯ ಶ್ಲಾಘನೀಯ ಎಂದು ಎಪಿಎಂಸಿ ಮಾಜಿ ನಿರ್ದೇಶಕ ರಾಜಾ ಸೋಮನಾಥ ನಾಯಕ ಹೇಳಿದರು.

    ಇದನ್ನೂ ಓದಿ: ಯುವಕರು ಕ್ರೀಡೆಯಲ್ಲಿ ತೊಡಗಬೇಕು

    ಸಚ್ಚಿದಾನಂದ ದೇವಸ್ಥಾನದಲ್ಲಿ ಸಚ್ಚಿದಾನಂದ ಯುವಕ ಮಂಡಳಿಯಿಂದ ಇತ್ತೀಚಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

    ಒಂಟಿ ಕೈಯಲ್ಲಿ 101 ಕೆಜಿ ಸಂಗ್ರಾಣಿ ಗುಂಡುಕಲ್ಲು ಎತ್ತುವ ಸ್ಪರ್ಧೆಯಲ್ಲಿ ಕಲ್ಲೂರಿನ ಕೃಷ್ಣ ಪ್ರಥಮ ಸ್ಥಾನ ಪಡೆದರು. 185 ಕೆಜಿ ಭಾರದ ಉಸುಕು ಚೀಲ ಎತ್ತುವ ಸ್ಪರ್ಧೆಯಲ್ಲಿ ಮರಿಯಪ್ಪ ಶಾರದಹಳ್ಳಿ ಪ್ರಥಮ ಸ್ಥಾನ ಪಡೆದರು.

    ವಿಜೇತರಿಗೆ ಐದು ತೊಲ ಬೆಳ್ಳಿ ಕಡಗ ಹಾಗೂ ನಗದು ನೀಡಿ ಪುರಸ್ಕರಿಸಲಾಯಿತು. ವಿವಿಧ ಜಿಲ್ಲೆಗಳ ಕ್ರೀಡಾಳುಗಳು ಪಾಲ್ಗೊಂಡು ಶಕ್ತಿ ಪ್ರದರ್ಶಿಸಿದರು. ಸುತ್ತಮುತ್ತಲಿನ ಹಳ್ಳಿ, ದೊಡ್ಡಿ, ತಾಂಡಾಗಳ ಜನ ಸ್ಪರ್ಧೆ ವೀಕ್ಷಣೆಗೆ ಆಗಮಿಸಿದ್ದರು. ಪ್ರಮುಖರಾದ ಅಮರೇಶ ಮರಾಠ, ಎಸ್.ಅಮರೇಶ ನಾಯಕ, ರಾಮಣ್ಣ ಅಡಿಕೆರ್, ಎಸ್. ನಿಂಗಪ್ಪ, ಹುಲುಗಪ್ಪ ಡೊಳ್ಳು, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts