More

    ಆತ್ಮಸ್ಥೈರ್ಯದಿಂದ ಬದುಕು ಸಾಗಿಸಿ

    ಅಳವಂಡಿ: ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆ ಪರಿಹಾರ ಮತ್ತು ಕೌಶಲ್ಯಗಳ ಅಭಿವೃದ್ಧಿಗಾಗಿ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಕ್ಷೇತ್ರ ಸಂಯೋಜಕಿ ಸುಷ್ಮಾ ಸಂಗರಡ್ಡಿ ತಿಳಿಸಿದರು.

    ಇದನ್ನೂ ಓದಿ: ಮಕ್ಕಳಿಗೆ ಆತ್ಮಸ್ಥೈರ್ಯ, ಏಕಾಗ್ರತೆ ಮೂಡಿಸಿ

    ಸಮೀಪದ ಬೆಟಗೇರಿ ಗ್ರಾಮದಲ್ಲಿ ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನದಿಂದ ನಡೆದ ನಾಯಕತ್ವ ಮತ್ತು ಸಂವಹನ ಶಿಬಿರದಲ್ಲಿ ಭಾನುವಾರ ಮಾತನಾಡಿದರು.

    ಎಂತಹ ಸಮಸ್ಯೆ ಬಂದರು ನಿಭಾಯಿಸುವ ಆತ್ಮ ವಿಶ್ವಾಸವನ್ನು ಹುಡುಗಿಯರು ಬೆಳಸಿಕೊಳ್ಳಬೇಕು. ನಾಯಕತ್ವ, ಸಂವಹನ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಆತ್ಮಸ್ಥೈರ್ಯದಿಂದ ಭಯ ಇಲ್ಲದೇ ಬದುಕು ಸಾಗಿಸಬೇಕು. ತಂಡ ಮತ್ತು ತಂಡದೊಳಗಿನ ಪ್ರತಿ ಸದಸ್ಯರ ಪ್ರಾಮುಖ್ಯತೆ, ಒಗ್ಗಟ್ಟಿನ ಬಲ ಸೇರಿ ಇತರ ಚಟುವಟಿಕೆಗಳ ಮೂಲಕ ನಾಯಕತ್ವ ಮಹತ್ವವನ್ನು ತಿಳಿಸುವದೇ ಕಾರ್ಯಕ್ರಮದ ಉದ್ದೇಶ ಎಂದರು.

    ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ನಾಗರಡ್ಡಿ, ಕೆಎಚ್‌ಪಿಟಿ ಸಮುದಾಯ ಸಂಘಟಕರಾದ ಕಲ್ಪನಾ, ಸುನಂದಾ, ಅನ್ನಪೂರ್ಣ, ಪ್ರಿಯಾಂಕಾ, ಬಸವರಾಜ, ದುರ್ಗಾ, ಕಾವ್ಯಾ, ಅನೂಷಾ, ಆಯೇಷಾ, ವೀಣಾ, ಶಿವಗಂಗಾ, ಪ್ರೇಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts