More

    ಇನ್ನೆರಡು ತಿಂಗಳಂತೂ ಬಹಳ ಹುಷಾರಾಗಿರಬೇಕು: ನೀತಿ ಆಯೋಗದ ಸದಸ್ಯರ ಎಚ್ಚರಿಕೆ

    ನವದೆಹಲಿ: ಸದ್ಯದಲ್ಲೇ ಮೇಲಿಂದ ಮೇಲೆ ಮತ್ತಷ್ಟು ಹಬ್ಬಗಳು ಬರಲಿದ್ದು, ಜನರು ಅವುಗಳನ್ನು ಆಚರಿಸಲು ಉತ್ಸುಕರಾಗಿದ್ದಾರೆ. ಮತ್ತೊಂದೆಡೆ ಕರೊನಾ ಮೂರನೇ ಅಲೆಯ ಆತಂಕವೂ ಕಾಡುತ್ತಿದೆ. ಈ ನಡುವೆಯೇ ಎಚ್ಚರಿಕೆಯ ಸಂದೇಶವೊಂದು ಹೊರಬಿದ್ದಿದೆ. ಇನ್ನು ಮೂರು ತಿಂಗಳ ಕಾಲ, ಅದರಲ್ಲೂ ಇನ್ನೆರಡು ತಿಂಗಳಂತೂ ಸಾರ್ವಜನಿಕರು ಬಹಳ ಹುಷಾರಾಗಿರಬೇಕು ಎಂಬ ಎಚ್ಚರಿಕೆಯೊಂದು ಹೊರಬಿದ್ದಿದೆ.

    ಕೇಂದ್ರ ನೀತಿ ಆಯೋಗ (ಆರೋಗ್ಯ) ಸದಸ್ಯ ಡಾ.ವಿ.ಕೆ. ಪೌಲ್​ ಅವರು ಇಂಥದ್ದೊಂದು ಎಚ್ಚರಿಕೆಯನ್ನು ಕಿವಿಮಾತಿನ ರೀತಿಯಲ್ಲಿ ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿ ಸಂದರ್ಭದಲ್ಲಿ ಕೋವಿಡ್​ ಪರಿಸ್ಥಿತಿ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತ ಅವರು ಈ ಮಾತನ್ನು ತಿಳಿಸಿದರು.

    ಇದನ್ನೂ ಓದಿ: ನನ್ನ ಜೀವಕ್ಕೆ ಅಪಾಯವಾದರೆ ಶೇಖ್​ ಮೋದಿಯೇ ಕಾರಣ: ರಾಜು ತಾಳಿಕೋಟೆ ಆರೋಪ; ಹಾಸ್ಯನಟನ ಮೇಲಿನ ಹಲ್ಲೆ ಪ್ರಕರಣವೀಗ ಗಂಭೀರ!

    ಬರುವ ಮೂರು ತಿಂಗಳಲ್ಲಿ ಕೋವಿಡ್ ಪರಿಸ್ಥಿತಿ ಉಲ್ಬಣಿಸಲು ಬಿಡುವಂತಿಲ್ಲ. ಏಕೆಂದರೆ ಮುಂದಿನ ಮೂರು ತಿಂಗಳಗಳು ಹಬ್ಬ ಹಾಗೂ ಫ್ಲ್ಯೂ ಸೀಸನ್. ಈ ತಿಂಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚುವ ಸಾಧ್ಯತೆಗಳು ಅಧಿಕವಾಗಿವೆ. ಹೀಗಾಗಿ ಜನರು ಈ ಮೂರು ತಿಂಗಳಲ್ಲಿ ಅದರಲ್ಲೂ ಅಕ್ಟೋಬರ್​-ನವೆಂಬರ್​ನಲ್ಲಿ ಬಹಳ ಹುಷಾರಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಜತೆಗೆ ಹಬ್ಬವನ್ನು ಆದಷ್ಟೂ ಸರಳವಾಗಿ ಆಚರಿಸಬೇಕು ಎಂಬ ಕಿವಿಮಾತನ್ನೂ ಅವರು ಹೇಳಿದ್ದಾರೆ. (ಏಜೆನ್ಸೀಸ್)

    ಪ್ರೀತಿಯ ಸೋಗಲ್ಲಿ ಮೋಸ: ಈತನಿಂದ ಮೋಸ ಹೋದವರೆಷ್ಟೋ?; ಮೊಬೈಲ್​ಫೋನಲ್ಲಿತ್ತು 6 ಯುವತಿಯರ ವಿಡಿಯೋ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts