More

    ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!

    ದುಬೈ: ‘ಪದಗಳು ತುಂಬಾ ಶಕ್ತಿಶಾಲಿ, ಅವುಗಳನ್ನು ಭಾರಿ ಎಚ್ಚರಿಕೆಯಿಂದ ಬಳಸಿ..’ ಎಂಬ ನಾಣ್ಣುಡಿ ಇದೆ. ಈಗ್ಯಾಕೆ ಈ ಮಾತು ಎಂದರೆ ಅದಕ್ಕೂ ಕಾರಣವಿದೆ. ಏಕೆಂದರೆ ಒಂದೇ ಒಂದು ಪದಪ್ರಯೋಗದಿಂದ ಮಹಿಳೆಯೊಬ್ಬರು ದಂಡ ಮಾತ್ರವಲ್ಲದೆ ಎರಡು ವರ್ಷಗಳ ಜೈಲು ಶಿಕ್ಷೆಗೂ ಗುರಿಯಾಗಿದ್ದಾರೆ. ವಾಟ್ಸ್​ಆ್ಯಪ್​ನಲ್ಲಿ ಕಳಿಸಿದ್ದ ಮೆಸೇಜ್​ನಲ್ಲಿದ್ದ ಆ ಒಂದು ಪದ ಆಕೆಯನ್ನು ಈಗ ತೀವ್ರ ಸಂಕಷ್ಟಕ್ಕೆ ಈಡುಮಾಡಿದೆ.

    ಅಂದಹಾಗೆ ಅಂಥದ್ದೊಂದು ಮೆಸೇಜ್​ ವಿನಿಮಯವಾಗಿದ್ದು ಕೂಡ ಇಬ್ಬರು ಗೊತ್ತಿರುವವರ ಮಧ್ಯೆಯೇ. ಒಂದೇ ಫ್ಲ್ಯಾಟ್​ನಲ್ಲಿದ್ದ ಇವರಿಬ್ಬರೂ ಈಗ ಒಂದೇ ಒಂದು ಪದಪ್ರಯೋಗದಿಂದ ಶತ್ರುಗಳಂತಾಗಿದ್ದಾರೆ. ಇದು ನಡೆದಿದ್ದು ದುಬೈನಲ್ಲಿ, ಇಲ್ಲಿ ಸಂತ್ರಸ್ತೆ ಬ್ರಿಟಿಷ್ ಮಹಿಳೆ. ಈಗಲೂ ಒಂದೇ ಒಂದು ಪದ ಬಳಕೆಯಿಂದಾಗಿ ಆಕೆ ತನ್ನ ದೇಶಕ್ಕೆ ಮರಳಾಗದೆ ಪರಿತಪಿಸುತ್ತಿದ್ದಾರೆ.

    ಇದನ್ನೂ ಓದಿ: ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಹ್ಯೂಮನ್ ರಿಸೋರ್ಸ್ ಮ್ಯಾನೇಜರ್ ಆಗಿರುವ ಬ್ರಿಟನ್​​ನ 31 ವರ್ಷದ ಮಹಿಳೆ ಹಾಗೂ ಆಕೆಯ ಸಹೋದ್ಯೋಗಿ ಉಕ್ರೇನಿಯನ್ ಮಹಿಳೆ ಇಬ್ಬರೂ ದುಬೈನಲ್ಲಿ ಒಂದೇ ಫ್ಲ್ಯಾಟ್​ನಲ್ಲಿ ವಾಸವಿದ್ದರು. ಕಳೆದ ವರ್ಷದ ಅಕ್ಟೋಬರ್​ನಲ್ಲಿ ಇಬ್ಬರ ಮಧ್ಯೆ ಒಂದು ಸಣ್ಣ ವಿಷಯಕ್ಕೆ ಸಂಘರ್ಷವಾಗಿತ್ತು. ಲಾಕ್​ಡೌನ್​ ಸಮಯದಲ್ಲಿ ಡೈನಿಂಗ್ ಟೇಬಲನ್ನು ಕೆಲಸಕ್ಕಾಗಿ ಬಳಸಿದ ಸಂಬಂಧ ಇಬ್ಬರ ಮಧ್ಯೆ ವಾದವಾಗಿತ್ತು. ಈ ವೇಳೆ ಬ್ರಿಟನ್ ಮಹಿಳೆ ಕಳಿಸಿದ್ದ ಮೆಸೇಜ್​ನಲ್ಲಿ ಆ ಒಂದು ಪದವಿತ್ತು. ಈ ಮಧ್ಯೆ ಇದೊಂದು ಸಣ್ಣ ಕಾರಣಕ್ಕೆ ಉಂಟಾದ ಬೇಸರದಿಂದ ಬೇರೆ ಕೆಲಸಕ್ಕೆ ಹುಡುಕಾಡುತ್ತಿದ್ದ ಬ್ರಿಟನ್ ಮಹಿಳೆ, ಬೇರೆಡೆ ಕೆಲಸ ಸಿಕ್ಕಿದ ಕಾರಣ ದುಬೈ ತೆರೆದು ಶನಿವಾರ ಸ್ವದೇಶಕ್ಕೆ ಹೊರಡಲು ಅನುವಾಗಿದ್ದರು.

    ಆದರೆ ಆಕೆಗೆ ಬ್ರಿಟನ್​ಗೆ ತೆರಳಲು ವಿಮಾನ ನಿಲ್ದಾಣದಲ್ಲಿ ಅವಕಾಶ ನೀಡಿರಲಿಲ್ಲ. ವಿಮಾನ ನಿಲ್ದಾಣದ ಅಧಿಕಾರಿಗಳು, ಆಕೆಯ ಮೇಲೆ ಪೊಲೀಸ್ ಕೇಸ್ ಇರುವುದರಿಂದ ದುಬೈ ಬಿಟ್ಟು ತೆರಳಲು ಬಿಡುವುದಿಲ್ಲ ಎಂಬುದಾಗಿ ತಿಳಿಸಿದ್ದರು. ಇದೀಗ ಆಕೆ ಭಾರಿ ಮೊತ್ತವನ್ನು ದಂಡವಾಗಿ ಪಾವತಿಸುವ ಜತೆಗೆ ಎರಡು ವರ್ಷಗಳ ಶಿಕ್ಷೆಯನ್ನೂ ಅನುಭವಿಸಬೇಕಾಗಿದೆ. ಅಂದಹಾಗೆ, ಆಕೆ ಮೆಸೇಜ್​ನಲ್ಲಿ ಬಳಸಿದ್ದ ಆಕ್ಷೇಪಾರ್ಹ ಪದ ಬೇರಾವುದೂ ಅಲ್ಲ, ಇದೇ.. ‘f*** you’.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಸ್ವದೇಶಕ್ಕೆ ತೆರಳಲು ಲಗ್ಗೇಜ್​ ಎಲ್ಲ ಹಾಕಿ, ಟಿಕೆಟ್ ಬುಕ್​ ಮಾಡಿ ಹೊರಟಿದ್ದ ವಿದೇಶ ಮಹಿಳೆ ಈಗ ದುಬೈ ಪೊಲೀಸರ ವಶದಲ್ಲಿದ್ದಾರೆ. ಕೇಸ್ ಕೈಬಿಡುವಂತೆ ಫ್ಲ್ಯಾಟ್​ಮೇಟ್​ಗೆ ಕೇಳಿಕೊಂಡಿದ್ದರೂ ಆಕೆ ಮಣಿಯಲಿಲ್ಲ ಎಂದು ಬ್ರಿಟನ್ ಮಹಿಳೆ ಅಲವತ್ತುಕೊಂಡಿದ್ದಾರೆ. ಇಬ್ಬರೂ ಸಲೀಸಾಗಿ ಜತೆಗಿದ್ದರೂ ಈ ರೀತಿ ಸೇಡು ತೀರಿಸಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಸಂತ್ರಸ್ತೆ, ಯುರೋಪಿಯನ್​ ಜತೆಗಾತಿ ದುಬೈನ ಕಠಿಣ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಕೇಸ್ ಹಿಂಪಡೆಯಲು ಕೋರಿಕೊಂಡಿದ್ದರೂ ಆಕೆ ಇದು ಕ್ರಿಮಿನಲ್ ಕೇಸ್ ಎಂದು ಪಟ್ಟುಬಿಡಲಿಲ್ಲ ಎಂದು ಸಂತ್ರಸ್ತೆ ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    5 ರೂಪಾಯಿ ತಿಂಡಿ ಕೇಳಿದ ಮಗುವನ್ನು ಕೊಂದೇ ಬಿಟ್ಟ ಈ ಕ್ರೂರಿ ತಂದೆ !

    ಬೆಂಗ್ಳೂರಲ್ಲಿ ನಿವೃತ್ತ ಉಪ ತಹಸೀಲ್ದಾರ್ ಕೊಂದು ಬಿಡದಿಯಲ್ಲಿ ಸುಟ್ಟುಹಾಕಿದ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts