More

    ದೀಪಾವಳಿ ನಂತರ ಹೊಸ ಐಪಿಎಲ್ ತಂಡಕ್ಕೆ ಬಿಸಿಸಿಐ ಟೆಂಡರ್

    ನವದೆಹಲಿ: ದೂರದ ಅರಬ್ ರಾಷ್ಟ್ರದ ಬಯೋ-ಬಬಲ್‌ನಲ್ಲಿ ಐಪಿಎಲ್ 13ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡ ಬೆನ್ನಲ್ಲೇ ಬಿಸಿಸಿಐ, ಮುಂದಿನ ಐಪಿಎಲ್‌ಗೆ ಹೊಸ ತಂಡಗಳ ಸೇರ್ಪಡೆಗೆ ಮುಂದಾಗಿದೆ. ದೀಪಾವಳಿಯ ನಂತರ ಬಿಸಿಸಿಐ, ಒಂದು ಅಥವಾ ಎರಡು ಹೊಸ ತಂಡಗಳ ಖರೀದಿಗೆ ಟೆಂಡರ್ ಆಹ್ವಾನಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ.

    2021ರ ಆವೃತ್ತಿಗೆ 9ನೇ ಹಾಗೂ 2022ರ ಆವೃತ್ತಿಗೆ 10ನೇ ತಂಡ ಸೇರ್ಪಡೆಯ ಬಗ್ಗೆಯೂ ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಯಾವುದೇ ಸ್ಪಷ್ಟ ರೂಪುರೇಷೆ ಇದುವರೆಗೆ ಸಿದ್ಧವಾಗಿಲ್ಲ. ಮುಂದಿನ 72 ಗಂಟೆಗಳ ಒಳಗಾಗಿ ಮಂಡಳಿಯ ಉನ್ನತ ಪದಾಧಿಕಾರಿಗಳು ಈ ಬಗ್ಗೆ ಸ್ಪಷ್ಟವಾದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

    ಹೊಸ ತಂಡಗಳ ಸೇರ್ಪಡೆಯಾಗಬೇಕಾದರೆ ಮುಂದಿನ ಆವೃತ್ತಿಗೆ ಮುನ್ನ ಮೆಗಾ ಹರಾಜು ಪ್ರಕ್ರಿಯೆಯನ್ನೂ ನಡೆಸುವುದು ಅಗತ್ಯವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಐಪಿಎಲ್‌ನಲ್ಲಿ ಹೊಸ ತಂಡದ ಖರೀದಿಗೆ ನಟ ಮೋಹನ್‌ಲಾಲ್ ಆಸಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts