More

    ಕ್ರಿಕೆಟ್​ ಆಯ್ಕೆ ಸಮಿತಿಯ ಹೊಸ ಅಧ್ಯಕ್ಷ ಅಜಿತ್​ ಅಗರ್ಕರ್​ ವೇತನವೆಷ್ಟು ಗೊತ್ತೇ?

    ನವದೆಹಲಿ: ರಾಷ್ಟ್ರೀಯ ಕ್ರಿಕೆಟ್​ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥ ಅಜಿತ್​ ಅಗರ್ಕರ್​ ವಾರ್ಷಿಕ 3 ಕೋಟಿ ರೂ. ವೇತನ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಇದು ಆಯ್ಕೆ ಸಮಿತಿಯ ಹಿಂದಿನ ಅಧ್ಯಕ್ಷರ ವೇತನಕ್ಕಿಂತ 3 ಪಟ್ಟು ಅಧಿಕವಾಗಿದೆ. ಈ ಮುನ್ನ ಮುಖ್ಯ ಆಯ್ಕೆಗಾರರಿಗೆ ವಾರ್ಷಿಕ ಒಂದು ಕೋಟಿ ರೂ. ವೇತನ ನೀಡಲಾಗುತಿತ್ತು.

    ಆಯ್ಕೆ ಸಮಿತಿಯ ಸದಸ್ಯರಾಗಲು ವರ್ಚಸ್ವಿ ಮಾಜಿ ಕ್ರಿಕೆಟಿಗರು ಮುಂದೆ ಬಾರದ ಕಾರಣದಿಂದಾಗಿ ಬಿಸಿಸಿಐ ಆಯ್ಕೆಗಾರರ ವೇತನ ಹೆಚ್ಚಳ ಮಾಡಲು ನಿರ್ಧರಿಸಿದೆ. ಕೋಚ್​ ಮತ್ತು ವೀಕ್ಷಕವಿವರಣೆಕಾರ ಆಗಿ ಅಗರ್ಕರ್​ ಈಗಾಗಲೆ ವಾರ್ಷಿಕ 1 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡುತ್ತಿದ್ದರು. ಹೀಗಾಗಿ ಅಗರ್ಕರ್​ ಮೊದಲಿಗೆ ಆಯ್ಕೆ ಸಮಿತಿಯ ಮುಖ್ಯಸ್ಥರಾಗಲು ಆಸಕ್ತಿ ತೋರಿರಲಿಲ್ಲ. ಆದರೆ ಬಿಸಿಸಿಐ ಹೆಚ್ಚಿನ ವೇತನದ ಭರವಸೆ ನೀಡಿದ ಬಳಿಕ ಅವರು ಹುದ್ದೆಯನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

    ಮಾಜಿ ವೇಗದ ಬೌಲರ್​ ಆಗಿರುವ ಅಗರ್ಕರ್​, ಟಿ20 ಪಂದ್ಯಗಳನ್ನೂ ಆಡಿದ್ದು, ಮುಂಬೈ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಮತ್ತು ಯುವ ಅಭ್ಯರ್ಥಿ ಆಗಿರುವ ಕಾರಣ ಬಿಸಿಸಿಐ ಮಾನದಂಡಗಳ ಪ್ರಕಾರ ಅತ್ಯಂತ ಸೂಕ್ತ ಆಯ್ಕೆ ಎನಿಸಿದ್ದಾರೆ. ಹೀಗಾಗಿ ಅವರಿಗೆ 3 ಕೋಟಿ ರೂ. ವಾರ್ಷಿಕ ವೇತನ ನೀಡಲು ಬಿಸಿಸಿಐ ಕೂಡ ಹಿಂದೇಟು ಹಾಕಲಿಲ್ಲ ಎನ್ನಲಾಗಿದೆ. ಆದರೆ ಆಯ್ಕೆ ಸಮಿತಿಯ ಇತರ ನಾಲ್ವರು ಸದಸ್ಯರಿಗೆ ನೀಡಲಾಗುತ್ತಿರುವ ವಾರ್ಷಿಕ 90 ಲಕ್ಷ ರೂ. ವೇತನವನ್ನೂ ಏರಿಸಲಾಗುವುದೇ ಎಂಬ ಬಗ್ಗೆ ಬಿಸಿಸಿಐ ಇನ್ನೂ ಸ್ಪಷ್ಟ ನಿಲುವು ತಳೆದಿಲ್ಲ.

    ವೆಸ್ಟ್​ ಇಂಡೀಸ್​ ಪ್ರವಾಸದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಯುವಕರಿಗೆ ಅವಕಾಶ

    ವಿಂಬಲ್ಡನ್​ನಲ್ಲಿ ಒಳಉಡುಪಿನ ನಿಯಮ ಸಡಿಲ; ಟೆನಿಸ್ ಆಟಗಾರ್ತಿಯರು ಈಗ ನಿರಾಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts